ಅಂಬೇಡ್ಕರ್ ಸೋಲಿಗಾಗಿ ಕೆಲಸ ಮಾಡಿದ್ದ ಸಾವರ್ಕರ್: ಬಾಬಾಸಾಹೇಬರ ಪತ್ರದಲ್ಲೇನಿದೆ?

Date:

Advertisements
ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೊದಲ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ನಂತರ ಅವರ ಒಡನಾಡಿಯಾಗಿದ್ದ ಕಮಲಾಕಾಂತ್ (ಚಿತ್ರೆ) ಅವರಿಗೆ ಬರೆದ ಪತ್ರ ಇಲ್ಲಿದೆ

“ಡಾ.ಬಿ.ಆರ್. ಅಂಬೇಡ್ಕರ್ ಅವರ ಸೋಲಿಗಾಗಿ ಆರ್‌ಎಸ್‌ಎಸ್‌ನವರು ಮತ್ತು ವಿ.ಡಿ. ಸಾವರ್ಕರ್ ಕೆಲಸ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರು ಸಾಬೀತು ಮಾಡಿದರೆ, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವೆ ಮತ್ತು ರಾಜಕೀಯ ನಿವೃತ್ತಿ ಪಡೆಯುವೆ. ಇಲ್ಲವಾದರೆ ಕಾಂಗ್ರೆಸ್ ನಾಯಕರು ರಾಜಕೀಯ ತೊರೆಯಬೇಕು” ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಅಂಬೇಡ್ಕರ್ ಅವರ ಕೈಬರಹವಿರುವ ಪತ್ರ ಇದಾಗಿದ್ದು, ಕೇಂದ್ರ ಸರ್ಕಾರದ ಅಧಿಕೃತ ದಾಖಲೆಯಿಂದ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಲ್ಲಿಯೂ ಈ ಮಹತ್ವದ ಪತ್ರವನ್ನು ಪ್ರಕಟಿಸಲಾಗಿತ್ತು. ಹಿಂದುತ್ವ ಪ್ರತಿಪಾದಕ ಸಾವರ್ಕರ್‌ ಅವರನ್ನು ಬಂಧುತ್ವ ಪ್ರತಿಪಾದಕ ಡಾ.ಬಿ.ಆರ್.ಅಂಬೇಡ್ಕರ್ ಅವರೊಟ್ಟಿಗೆ ಸಮೀಕರಿಸಿ ಮತ ರಾಜಕಾರಣ ಮಾಡುವ ಕಸರತ್ತುಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಸದರಿ ಪತ್ರವು ಚರ್ಚೆಯಾಗಬೇಕಾಗಿದೆ.

ಏನಿದು ಪತ್ರ?

Advertisements

ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೊದಲ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ನಂತರ ಅವರ ಒಡನಾಡಿಯಾಗಿದ್ದ ಕಮಲಾಕಾಂತ್ (ಚಿತ್ರೆ) ಅವರಿಗೆ ಬರೆದ ಪತ್ರ ಇಲ್ಲಿದೆ. ಇದನ್ನು ಅವರು 1952ರ ಜನವರಿ 18ರಂದು ಬರೆದಿದ್ದಾರೆ. ಈ ಪತ್ರದಲ್ಲಿ ಅವರು ತಮ್ಮ ಸೋಲಿಗೆ ಕಾರಣಗಳೇನಿರಬಹುದು ಎಂಬುದರ ಬಗ್ಗೆ ಚರ್ಚಿಸುತ್ತಾರೆ ಹಾಗೂ ಅವರ ಸೋಲಿಗಾಗಿ (ಶ್ರೀಪಾದ ಅಮೃತ) ಡಾಂಗೆ ಮತ್ತು ಸಾವರ್ಕರ್ ಕೆಲಸ ಮಾಡಿದ್ದರು ಎಂಬುದನ್ನು ಉಲ್ಲೇಖಿಸುತ್ತಾರೆ. ಇದರೊಂದಿಗೆ ಸಮಾಜವಾದಿಗಳೊಂದಿಗಿನ ಸಂಬಂಧ ಹಾಗೂ ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸುತ್ತಾರೆ. ಅಂಬೇಡ್ಕರ್ ಅವರು ಬರೆದ ಪತ್ರ ಈ ಕೆಳಗಿದೆ… (ಇಂಗ್ಲಿಷ್‌ನಲ್ಲಿರುವ ಮೂಲ ಪತ್ರವನ್ನು ಕೊನೆಯಲ್ಲಿ ಲಗತ್ತಿಸಲಾಗಿದೆ).

ನನ್ನ ಪ್ರೀತಿಯ ಕಮಲಾಕಾಂತ್,

ಜನವರಿ 13ರ ನಿಮ್ಮ ಪತ್ರ ನನಗೆ ತಲುಪಿದೆ. ನಿಮ್ಮ ಕೆಲವು ತೀರ್ಮಾನಗಳನ್ನು ನಾನು ಒಪ್ಪುತ್ತೇನೆ. ಸಮಾಜವಾದಿ ಅಭ್ಯರ್ಥಿಗಳು ಮತ್ತು ಎಸ್.ಸಿ.ಎಫ್. ಅಭ್ಯರ್ಥಿಗಳಿಗೆ ಸಮಾಜವಾದಿ ಮತದಾರರು ತಮ್ಮ ಮತಗಳನ್ನು ಸಮಾನವಾಗಿ ನ್ಯಾಯಯುತ ಹಂಚಿಕೆಯನ್ನು ಮಾಡಿದ್ದಾರೆ ಎಂದು ನಾನು ಒಪ್ಪುತ್ತೇನೆ. ನಮ್ಮ ಸೋಲು ಡಾಂಗೆ ಅವರ ಕುತಂತ್ರದಿಂದ ಉಂಟಾಗಿದೆ ಎಂದು ಕೂಡ ನಾನು ಒಪ್ಪುತ್ತೇನೆ. ಡಾಂಗೆ ನಮ್ಮ ಬಗ್ಗೆ ಮತ್ತು ಕಾಂಗ್ರೆಸ್ ಕುರಿತು ಹೊಂದಿದ್ದ ಮನೋಭಾವದ ಬಗ್ಗೆ ನಿಮ್ಮ ವಿಶ್ಲೇಷಣೆಗೆ ನನ್ನ ಸಹಮತವಿದೆ. ಅವರು ಪಾಟೀಲ್ ಜೊತೆಗಿನ ಒಪ್ಪಂದದಿಂದಾಗಿ ಮಾಡಿದ್ದಾರೋ ಎಂಬುದು ನಾನು ಹೇಳುವುದಕ್ಕಿಂತ ಹೆಚ್ಚೇ ಇದೆ. ಬಹುಶಃ ನೀವು ಹೇಳುವುದು ನಿಜವಾಗಿರಬಹುದು. ಕಾಶ್ಮೀರವನ್ನು ವಿಭಜಿಸುವ ನನ್ನ ಪ್ರಸ್ತಾಪದಿಂದ ಕೆರಳಿದ್ದ ಡಾಂಗೆ ಮತ್ತು ಸಾವರ್ಕರ್ ನನ್ನನ್ನು ಸೋಲಿಸುವ ಸಂಚನ್ನು ರೂಪಿಸಿದ್ದಾರೆ ಎಂದು ಇತ್ತೀಚೆಗೆ ಇಲ್ಲಿದ್ದ ಅಸಯ್ಕರ್ ನನಗೆ ಹೇಳಿದರು. ಅದನ್ನು ತಮಗೆ ಸಂಗಾವ್ಕರ್ ಬಹಿರಂಗಪಡಿಸಿದ್ದಾಗಿ ಅವರು ತಿಳಿಸಿದರು. ಕಾರಣಗಳು ಏನೇ ಇರಲಿ, ನಾವು ಈ ಕೆಳಗಿನ ಸಂಗತಿಗಳನ್ನು ಒಪ್ಪಿಕೊಳ್ಳಬೇಕು.

(1) ನಮ್ಮ ಸಮಾಜವಾದಿ ಜನರು ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ
(2) ನನ್ನ ಉಮೇದುವಾರಿಕೆಗೆ ನಿರೀಕ್ಷೆಗೂ ಮೀರಿ ಪರಿಶಿಷ್ಟ ಜಾತಿಯೇತರ ಮತಗಳ ಬೆಂಬಲ ದೊರಕಿದೆ

ಭವಿಷ್ಯದ ಬಗ್ಗೆ ಹೇಳುವುದಾದರೆ, ನೀವು ಸಮಾಜವಾದಿಗಳೊಂದಿಗೆ ಸಂಪರ್ಕವನ್ನು ಮುಂದುವರಿಸಲು ತುಂಬಾ ಉತ್ಸುಕರಾಗಿದ್ದೀರಿ. ನಾನು ಕೂಡ ಅಷ್ಟೇ ಉತ್ಸುಕನಾಗಿದ್ದೇನೆ. ಈ ಚುನಾವಣೆಯು ಸಮಾಜವಾದಿಗಳಿಗೆ ಎಲ್ಲಿಯೂ ಬೇರುಗಳಿಲ್ಲ ಎಂಬುದನ್ನು ತೋರಿಸಿದೆ. ಎಲ್ಲೆಡೆ ಸಮಾಜವಾದಿ ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ. ನಗರಗಳಲ್ಲಿ ಅವರ ಬೆಳವಣಿಗೆಯ ಸಾಧ್ಯತೆಗಳನ್ನು ಕುಂದಿಸಲು ಸಾಧ್ಯವಾಗದೆ ಇರಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅವರ ಅವಕಾಶಗಳೇನು? ನನಗೆ ಕಾಣಿಸುತ್ತಿರುವುದು ಬಹಳ ಅಲ್ಪ. ಗ್ರಾಮೀಣ ಪ್ರದೇಶಗಳಲ್ಲಿ ಬೆಂಬಲವಿಲ್ಲದ ಪಕ್ಷಕ್ಕೆ ಭವಿಷ್ಯವಿಲ್ಲ. ಸಮಾಜವಾದಿ ಕಾರ್ಯಕ್ರಮಗಳಿಗೂ ಗ್ರಾಮೀಣ ಜನರ ಅಗತ್ಯಗಳಿಗೂ ಎಳ್ಳಷ್ಟೂ ಸಂಬಂಧವಿಲ್ಲ. ಹೀಗಾಗಿ ಇದು ಕೆಳ ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಗಿದ್ದು, ಅವರು ಎಲ್ಲಿಂದ ಬೆಂಬಲ ಪಡೆಯುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ.

ಇದನ್ನೂ ಓದಿರಿ: ಕೋಮುಗಲಭೆಗಳಿಗೆ ಹರಿದ ‘ಒಬಿಸಿ’ಗಳ ನೆತ್ತರು; ಕರ್ನಾಟಕ ಕಂಡ ರಕ್ತ ಚರಿತ್ರೆ ಬಲ್ಲಿರಾ?

ಸಮಾಜವಾದಿ ಪಕ್ಷದ ಅನೇಕ ಯುವಕರು ನನ್ನ ಬಳಿಗೆ ಬಂದು, ತಮ್ಮ ಪಕ್ಷವು ಹೆಚ್ಚು ಪ್ರಗತಿ ಸಾಧಿಸುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರಲ್ಲಿ ಕೆಲವರು ಸಮಾಜವಾದಿ ಎಂಬ ಹೆಸರು ಮುಸ್ಲಿಮರನ್ನು ಬಹಳ ಹೆದರಿಸುತ್ತದೆ, ಅವರು ಅದರ ಹತ್ತಿರ ಬರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಸಮಾಜವಾದಿ ಎಂದರೆ ಆರ್ಯಸಮಾಜಿಗಳು ಎಂದು ಮುಸಲ್ಮಾನರು ಭಾವಿಸುತ್ತಾರೆ.

ಎಸ್‌ಸಿಎಫ್ ಮತ್ತು ಸಮಾಜವಾದಿ ಪಕ್ಷದ ನಡುವೆ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ ಸಮಾಜವಾದಿ ಪಕ್ಷದ ಮೂಲದಲ್ಲಿ ಕೆಲವು ತೊಂದರೆಗಳಿವೆ. ಅವುಗಳನ್ನು ನಿಭಾಯಿಸಲು ಅವರು ಮುಕ್ತ ಮನಸ್ಸನ್ನು ಹೊಂದಬೇಕು ಮತ್ತು ತಮ್ಮ ಪ್ರಯತ್ನಕ್ಕೆ ಅಡ್ಡಿಯಾಗುವ ಆತ್ಮಗೌರವಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಅವುಗಳನ್ನು ನಿವಾರಿಸಲು ಪ್ರಯತ್ನಿಸಬೇಕು.

ನನ್ನ ಕೊನೆಯ ಪತ್ರದಲ್ಲಿ ನನ್ನ ಹೊಸ ಯೋಜನೆಯ ಬಗ್ಗೆ ನಾನು ನಿಮಗೆ ಹೇಳಿದ್ದೆ. ನೀವು ಅದನ್ನು ಉಲ್ಲೇಖಿಸಿಲ್ಲ. ಬಹುಶಃ ನೀವು ಅದು ನಿಮ್ಮ ಕೈಸೇರುವ ಮೊದಲೇ ಬರೆದಿರಬಹುದು. ನಾನು ನಿಮಗೆ ಕೆಲಸ ಮಾಡಲು ಉಪಯುಕ್ತವಾಗುವ ಅಂಕಿಅಂಶಗಳ ಕೋಷ್ಟಕವನ್ನು ಕಳುಹಿಸುತ್ತಿದ್ದೇನೆ. ಬಾಂಬೆ ಮತ್ತು ಹೈದರಾಬಾದ್ ನಾವು ಪ್ರಯತ್ನಿಸಬಹುದಾದ ಎರಡು ರಾಜ್ಯಗಳಾಗಿವೆ. ಈ ರಾಜ್ಯಗಳಲ್ಲಿನ ವಿಧಾನಸಭೆಗಳಿಗೆ ನಮ್ಮ ಜನರು ಎಷ್ಟು ಮಂದಿ ಆಯ್ಕೆಯಾಗಿದ್ದಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರೂ ನನಗೆ ಬರೆಯುತ್ತಿಲ್ಲ, ಭಾವುರಾವ್ ಕೂಡ. ಈ ವಿಷಯದ ಬಗ್ಗೆ ನೀವು ನನಗೆ ಕೆಲವು ಮಾಹಿತಿಯನ್ನು ನೀಡಬಹುದೇ?

ವಿನಯಪೂರ್ವಕವಾಗಿ,
ಡಾ.ಬಿ.ಆರ್.ಅಂಬೇಡ್ಕರ್

1 31
2 27
3 24
4 18
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X