ಸುಪ್ರೀಂ ಕೋರ್ಟ್‌ನ ಹಾಲಿ 33 ನ್ಯಾಯಮೂರ್ತಿಗಳ ಪೈಕಿ 21 ನ್ಯಾಯಮೂರ್ತಿಗಳು ಸೋಮವಾರ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ವಿವರಗಳನ್ನು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಭ್ರಷ್ಟಾಚಾರದ ವಿವಾದದ ಬಳಿಕ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಬೇಕು ಎಂದು ನಿರ್ಧರಿಸಲಾಗಿತ್ತು. ಅದರಂತೆ ಇದೀಗ 21 ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಿದ್ದು, ಇನ್ನೂ 12 ಮಂದಿಯ ವಿವರ ಅಪ್‌ಲೋಡ್ ಮಾಡಬೇಕಷ್ಟೆ.
ಆಸ್ತಿ ವಿವರ ಪ್ರಕಟಿಸಿರುವ ನ್ಯಾಯಮೂರ್ತಿಗಳು (ವಿವರಕ್ಕಾಗಿ ಹೆಸರಿನ ಮೇಲೆ ಕ್ಲಿಕ್ ಮಾಡಿ)
- ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ
- ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ
- ನ್ಯಾ. ಸೂರ್ಯ ಕಾಂತ್
- ನ್ಯಾ. ಅಭಯ್ ಎಸ್. ಓಕಾ
- ನ್ಯಾ. ವಿಕ್ರಮ್ ನಾಥ್
- ನ್ಯಾ. ಎಂ.ಎಂ. ಸುಂದರೇಶ್
- ನ್ಯಾ. ಬೇಲಾ ಎಂ. ತ್ರಿವೇದಿ
- ನ್ಯಾ. ಪಮಿದಿಘಂಟಂ ಶ್ರೀ ನರಸಿಂಹ
- ನ್ಯಾ. ಸುಧಾಂಶು ಧುಲಿಯಾ
- ನ್ಯಾ. ಜಮ್ಶೆಡ್ ಬುರ್ಜೋರ್ ಪರ್ದಿವಾಲಾ
- ನ್ಯಾ. ಪಂಕಜ್ ಮಿತ್ತಲ್
- ನ್ಯಾ. ಸಂಜಯ್ ಕರೋಲ್
- ನ್ಯಾ. ಸಂಜಯ್ ಕುಮಾರ್
- ನ್ಯಾ. ರಾಜೇಶ್ ಬಿಂದಾಲ್
- ನ್ಯಾ. ಕೆ.ವಿ. ವಿಶ್ವನಾಥನ್
- ನ್ಯಾ. ಉಜ್ಜಲ್ ಭುಯಾನ್
- ನ್ಯಾ. ಎಸ್. ವೆಂಕಟನಾರಾಯಣ ಭಟ್ಟಿ
- ನ್ಯಾ. ಆಗಸ್ಟೀನ್ ಜಾರ್ಜ್ ಮಸೀಹ್
- ನ್ಯಾ. ಸಂದೀಪ್ ಮೆಹ್ತಾ
- ನ್ಯಾ. ಮನಮೋಹನ್
- ನ್ಯಾ. ಕೆ. ವಿನೋದ್ ಚಂದ್ರನ್
ಆಸ್ತಿ ವಿವರ ಪ್ರಕಟಿಸಿರುವ ನ್ಯಾಯಮೂರ್ತಿಗಳು
- ನ್ಯಾ. ಜೆ.ಕೆ. ಮಹೇಶ್ವರಿ
- ನ್ಯಾ. ಬಿ.ವಿ. ನಾಗರತ್ನ
- ನ್ಯಾ. ದೀಪಂಕರ್ ದತ್ತ
- ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ
- ನ್ಯಾ. ಮನೋಜ್ ಮಿಶ್ರಾ
- ನ್ಯಾ. ಅರವಿಂದ್ ಕುಮಾರ್
- ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ
- ನ್ಯಾ. ಸತೀಶ್ ಚಂದ್ರ ಶರ್ಮಾ
- ನ್ಯಾ. ಪ್ರಸನ್ನ ಬಾಲಚಂದ್ರ ವರಾಳೆ
- ನ್ಯಾ. ಎನ್ ಕೋಟೀಶ್ವರ್ ಸಿಂಗ್
- ನ್ಯಾ. ಆರ್ ಮಹಾದೇವನ್
- ನ್ಯಾ. ಜೋಯ್ಮಲ್ಯ ಬಾಗ್ಚಿ
ಈ ಹಿಂದೆ (2009ರಿಂದ) ಆಸ್ತಿ ಘೋಷಿಸಿದ ನ್ಯಾಯಮೂರ್ಥಿಗಳ ಹೆಸರು ಮಾತ್ರ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿತ್ತು. ಆದರೆ ಅವರ ಆಸ್ತಿ ವಿವರಗಳನ್ನು ಪ್ರಕಟಿಸಲಾಗುತ್ತಿರಲಿಲ್ಲ. ಈಗ ಆಸ್ತಿ ವಿವರವನ್ನೂ ಬಹಿರಂಗಪಡಿಸಲಾಗುತ್ತದೆ. ನ್ಯಾಯಮೂರ್ತಿಗಳು ವಾರ್ಷಿಕವಾಗಿ ತಮ್ಮ ಆಸ್ತಿ ಮಾಹಿತಿಯನ್ನು ಬಹಿರಂಗಪಡಿಸಬೇಕೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
