ರಾಜಸ್ಥಾನದ ಒಂದು ಸಣ್ಣ ಗ್ರಾಮ ಶ್ರೀಗಂಗಾನಗರ. ಇದು ಪಂಜಾಬ್ ಪಾಕಿಸ್ತಾನ ಮತ್ತು ರಾಜಸ್ಥಾನಗಳ ನಡುವೆ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ. ಇಲ್ಲಿದ್ದಾಗ ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲು ನನಗೆ ಯಾವುದೇ ವಿಶೇಷ ಅವಕಾಶಗಳಿರಲಿಲ್ಲ. ಶಾಲೆಯಲ್ಲಾಗಲಿ ಮನೆಯಲ್ಲಾಗಲಿ ಕರ್ನಾಟಕದ ಬಗ್ಗೆ ಯಾವುದಾದರೂ ರೀತಿಯಲ್ಲಿ ಕೇಳಿದ್ದರ ಬಗ್ಗೆ ನನಗೆ ನೆನಪಿಲ್ಲ. ಕರ್ನಾಟಕವನ್ನು ನೋಡಬೇಕು ಎಂಬ ಬಯಕೆ ನನಗೆ ಕ್ರಿಕೆಟ್‌ನಿಂದಲೇ ಶುರುವಾಯ್ತು. ಸುನೀಲ್ ಗವಾಸ್ಕರ್‌ಗಿಂತಲೂ ನಾನ್ಯಾಕೆ ಗುಂಡಪ್ಪ ವಿಶ್ವನಾಥ್‌ರವರ ಅಭಿಮಾನಿಯಾಗಿದ್ದೆ ಎಂಬುದು ನನಗೆ ಗೊತ್ತಿಲ್ಲ. ಆ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಒಂದು ವೇಳೆ…

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ