ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಬೆಲೆ ಏರಿಕೆಯನ್ನು ಮಾಡುವ ಮೂಲಕ ಜನರನ್ನು ದೋಚುತ್ತಾ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬೃಹತ್ ಜನ ಹೋರಾಟ ಎಸ್.ಯು.ಸಿ.ಐ ಪಕ್ಷದಿಂದ ಮೇ 14 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಯು.ಸಿ.ಐ ಪಕ್ಷದ ರಾಜ್ಯ ಸೆಕ್ರೇಟೇರಿಯಟ್ ಸದಸ್ಯರಾದ ಎಂ.ಶಶಿಧರ್ ಹೇಳಿದರು
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿದ್ದು, ಅಲ್ಲದೇ ಎಲ್ಲಾ ವಸ್ತುಗಳ ಮೇಲೆ ಅಧಿಕ ತೆರಿಗೆಯನ್ನು ವಿಧಿಸುತ್ತಿದ್ದು, ನಮ್ಮ ಮಕ್ಕಳಿಗೆ ಶಿಕ್ಷಣದ ವೆಚ್ಚ, ಆರೋಗ್ಯದ ವೆಚ್ಚವನ್ನು ನಾವೇ ಭರಿಸಬೇಕಾದ ದುರ್ಗತಿ ಬಂದಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ತಾನು ಮೇಲು ನೀನು ಮೇಲೆಂದು ಮನಬಂದಂತೆ ನಡೆಸುತ್ತಿದೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅನುಮಾನಾಸ್ಪದ ವ್ಯಕ್ತಿ ಸಾವು
ಜನರ ತೆರಿಗೆಯ ಹಣ ಅಭಿವೃದ್ಧಿ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳು, ದೊಡ್ಡ ಗುತ್ತಿಗೆದಾರರು ,ಕೆಂಪು ಗೂಟದ ರಾಜಕಾರಣಿಗಳು ಹಿರಿಯ ಅಧಿಕಾರಿಗಳ ಜೇಬು ಸೇರುತ್ತಿವೆ.ಇದಲ್ಲದೇ ಯುವನತೆಗೆ ಉದ್ಯೋಗ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು , ಯುವಜನರು ಡ್ರಗ್ಸ್,ಮದ್ಯ ಮುಂತಾದ ವ್ಯಸನಗಳಲ್ಲಿ ತೊಡುಗುತ್ತಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅಚ್ಚೇ ದಿನ್ , ಗ್ಯಾರಂಟಿಗಳು ರೈತರ ಹಾಗೂ ಕಾರ್ಮಿಕರ ಬದುಕನ್ನು ಹಸನು ಮಾಡಿಲ್ಲ ಈಗಾಗಿ ನೈಜ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಹಿನ್ನೆಲೆ ಎಸ್ ಯು ಸಿ ಐ ರಾಜ್ಯ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು , ರೈತರು,ಕಾರ್ಮಿಕರು, ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಚನ್ನಬಸವ ಜಾನೇಕಲ್ , ಮಹೇಶ್ ಚೀಕಲಪರ್ವಿ , ವೀರೇಶ್ ಎನ್.ಎಸ್ , ಮಲ್ಲನಗೌಡ , ಅಣ್ಣಪ್ಪ ಉಪಸ್ಥಿತರಿದ್ದರು