ಹಬ್ಬ-ಹರಿದಿನ, ಜಾತ್ರೆ, ಜಯಂತಿ ಆಚರಣೆ, ಮದುವೆ ಸಮಾರಂಭಗಳನ್ನು ಕೈಬಿಟ್ಟು ಜಾತಿಗಣತಿಯತ್ತ ಗಮನ ಹರಿಸಬೇಕು.
ಒಳ ಮೀಸಲಾತಿ ಜಾರಿಗಾಗಿ ಸಮೀಕ್ಷೆಗಾಗಿ ನಿಮ್ಮ ಮನೆಗೆ ಬಂದಾಗ ನಮ್ಮ ಜಾತಿ ‘ಮಾದಿಗ’ ಎಂದು ಹೆಮ್ಮೆಯಿಂದ ಬರೆಯಿಸಬೇಕು ಎಂದು ಯಾದಗಿರಿ ಸಾಮಾಜಿಕ ಹೋರಾಟಗಾರ ಮಂಜುನಾಥ ಎಸ್ ಮೇತ್ರಿ ಮಲ್ಹಾರ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಒಳಮೀಸಲಾತಿ ಜಾರಿಗಾಗಿ ಸಮೀಕ್ಷೆ ನಡೆಸಲು ಗಣತಿದಾರರು, ಪರಿಶಿಷ್ಟ ಜಾತಿಗಳಲ್ಲಿನ ಮೂಲಜಾತಿಗಳ ಸಮೀಕ್ಷೆಗಾಗಿ ಮನೆ-ಮನೆ ಭೇಟಿ ನೀಡುತ್ತಾರೆ. ಆಗ ಮೂಲ ಜಾತಿಗಳ ಮಾಹಿತಿ ಕೇಳಿದಾಗ, ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಎಂದು ಹೇಳಬೇಡಿ ಬದಲಾಗಿ ʼಮಾದಿಗʼ ಎಂದು ಹೇಳಿ ಬರೆಯಿಸಬೇಕು” ಎಂದಿದ್ದಾರೆ.
“ದಾಸ್ ಅವರು ನೀಡಿರುವ ವರದಿಯಂತೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ಅದರಂತೆ ಮೇ 5ರಿಂದ ಜಾತಿ ಗಣತಿ ಆರಂಭವಾಗಿದ್ದು, ಯಾರು ಈ ಬಗ್ಗೆ ನಿರ್ಲಕ್ಷ್ಯ ಮಾಡದೆ ಮಾದಿಗ ಸಮುದಾಯದ ಎಲ್ಲಾ ಪ್ರಜ್ಞಾವಂತ, ಹಿರಿಯರು, ರಾಜಕೀಯ ನಾಯಕರು, ವಿದ್ಯಾರ್ಥಿ ಸಮೂಹ, ಮುಖಂಡರು ದ್ವಂದ್ವ ನೀತಿ ಅನುಸರಿಸಿದೆ ಎಚ್ಚರಿಕೆಯಿಂದ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ಮಾದಿಗ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ | ನೀರು ಕುಡಿಯಲು ಹೋದ ಮೂವರು ಬಾಲಕರು ದುರ್ಮರಣ