ದೇಶದಲ್ಲಿ ಕೋಮು ದಂಗೆ ಸೃಷ್ಟಿಸುವ ಉದ್ದೇಶದಿಂದಲೇ ಪಹಲ್ಗಾಮ್ ದಾಳಿ ನಡೆದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ವಿಕ್ರಂ ಮಿಸ್ರಿ ಈ ಮಾಹಿತಿ ನೀಡಿದರು.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿಕ್ರಮ್ ಮಿಸ್ರಿ, “ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಯಾವುದೇ ಪಾಕಿಸ್ತಾನದ ನಾಗರಿಕರು ಸಾವನ್ನಪ್ಪಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಸೇನೆಯೊಂದಿಗೆ ನಾವಿದ್ದೇವೆ ಎಂದ ಕಾಂಗ್ರೆಸ್, ಶಿವಸೇನೆ, ಆರ್‌ಜೆಡಿ ನಾಯಕರು
“ಪಹಲ್ಗಾಮ್ ದಾಳಿಯು ಭಾರತಕ್ಕೆ ಸಂದೇಶ ನೀಡುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ ಜಮ್ಮು ಕಾಶ್ಮೀರದ ಆರ್ಥಿಕತೆಯನ್ನು ಗುರಿಯಾಗಿಸಿ ಮಾಡಿದ ದಾಳಿಯಾಗಿದೆ. ದೇಶದಲ್ಲಿ ಕೋಮು ದಂಗೆಯನ್ನು ಸೃಷ್ಟಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ. ಆದರೆ ಈ ಪ್ರಯತ್ನ ವಿಫಲವಾಗಿದೆ” ಎಂದು ಹೇಳಿದರು.
“ಆಪರೇಷನ್ ಸಿಂಧೂರ ಕೇವಲ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ. ಯಾವುದೇ ಪಾಕಿಸ್ತಾನ ನಾಗರಿಕರ ಮೇಲೆ ದಾಳಿ ನಡೆದಿಲ್ಲ. ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಅಮಾಯಕ ಭಾರತೀಯರ ಜೀವ ಬಲಿ ಪಡೆದ ಉಗ್ರರ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದೂ ಮಿಸ್ರಿ ಹೇಳಿದ್ದಾರೆ.
ಆಪರೇಷನ್ ಸಿಂಧೂರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ನೀಡಿದರು. “ಇದು ಪಾಕಿಸ್ತಾನಕ್ಕೆ ನಾವು ನೀಡಿದ ಸಂದೇಶ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳು ಭಾರತ ವಿರುದ್ಧ ಚಟುವಟಿಕೆ ನಡೆಸುತ್ತಿದ್ದು, ಇದರ ಮೇಲೆ ಭಾರತೀಯ ಸೇನೆ ತೀವ್ರ ನಿಗಾ ಇರಿಸಿದೆ” ಎಂದು ತಿಳಿಸಿದ್ದಾರೆ.
“ಪಹಲ್ಗಾಮ್ ದಾಳಿಯ ಬಳಿಕ ಒಟ್ಟು 9 ಭಯೋತ್ಪಾದಕರ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆಗಳ ಪ್ರಮುಖ ಕಚೇರಿಗಳು ಸಂಪೂರ್ಣವಾಗಿ ಧ್ವಂಸಗೊಂಡಿದೆ” ಎಂದು ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿದರು.
Foreign Secretary Vikram Misri says in the statement that TRF terrorists didn't just want to traumatise victims and families to "send a message", but targeted the economy in Jammu Kashmir, and attempt to provoke "communal disharmony in India" in India, which failed. pic.twitter.com/JXxS086fdR
— Mohammed Zubair (@zoo_bear) May 7, 2025
