ಜಗತ್ತಿಗೆ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಸಮಾನತೆ ಸಾರಿವೆ ಎಂದು ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠ್ಠಲದಾಸ ಪ್ಯಾಗೆ ಹೇಳಿದರು.
ಔರಾದ್ ಪಟ್ಟಣದ ಅಮರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುದ್ಧ ಬಸವ ಅಂಬೇಡ್ಕರ್ ಜಯಂತಿ ನಿಮಿತ್ತ ಹಮ್ಮಿಕೊಂಡ ಸಮತೆಯ ಮಾರ್ಗದಲ್ಲಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮತೆ ಸಾಧ್ಯವಾದರೆ ಪ್ರಪಂಚದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂಬುದನ್ನು ಅರಿಯಬೇಕಿದೆ, ಈ ನಿಟ್ಟಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆ ಪ್ರಸ್ತುತ ಎನಿಸುತ್ತವೆ. ಬುದ್ಧನ ಶಾಂತಿ ಸಂದೇಶ, ಬಸವಣ್ಣನವರ ಸಮಾನತೆ ಕಾಯಕ ಮತ್ತು ದಾಸೋಹ ಹಾಗೂ ಅಂಬೇಡ್ಕರ್ ಅವರ ಸಮ ಸಮಾಜದ ಪರಿಕಲ್ಪನೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಅವಶ್ಯಕವಾಗಿವೆ’ ಎಂದರು.
‘ಬುದ್ಧ, ಬಸವ, ಅಂಬೇಡ್ಕರ್ ಅವರ ವೈಚಾರಿಕ ನಿಲುವು ಭ್ರಮೆಯ ಲೋಕದಿಂದ ವಾಸ್ತವ ಲೋಕದ ಕಡೆಗೆ ಕರೆದೊಯ್ಯುತ್ತವೆ, ಹಾಗಾಗಿ ಈ ಮೂವರ ಚಿಂತನೆಗಳು ಪಾಲಿಸಿದರೆ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ’ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿ, ‘ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳಿಂದ ಬದುಕು ಕಟ್ಟಿಕೊಳ್ಳಬೇಕಿದೆ, ಅವರು ಬೆಳಗಿದ ದೀಪ ಸೀಮಾತೀತ. ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳು ಅಳವಡಿಸಿಕೊಳ್ಳದ ಭಾರತ ಊನವಾಗುತ್ತದೆ’ ಎಂದರು.

ವಿಶೇಷ ಸನ್ಮಾನ ಸ್ವೀಕರಿಸಿದ ಅಡವೆಪ್ಪ ಪಟ್ನೆ ಜಾನಪದ ಗೀತೆಗಳ ಮೂಲಕ ಶರಣರ ವೈಚಾರಿಕ ವಿಚಾರಗಳನ್ನು ಪ್ರಸ್ತುತಪಡಿಸಿದರು. ಪ್ರಾಚಾರ್ಯ ಡಾ. ಗೌತಮ ಗಾಯಕವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಧಕ ವಿದ್ಯಾರ್ಥಿಗಳಿಗೆ ಗೌರವ:
ಎಸ್ಸೆಸ್ಸೆಲ್ಸಿ ವಿಭಾಗದಲ್ಲಿ ಸಾಧನೆಗೈದ ಆದರ್ಶ, ಆದಿತ್ಯ, ನಿವೇದಿತಾ, ಕಾರ್ತಿಕ ಮತ್ತು ಐಶ್ವರ್ಯ, ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಆರತಿ, ಶಿಫಾ, ಶಿವಕರ್ಣಾ, ಕಲಾ ವಿಭಾಗದ ಸುಧಾರಾಣಿ, ಕೀರ್ತನಾ, ವಾಣಿಜ್ಯ ವಿಭಾಗದ ಅಂಬಿಕಾ ಹಾಗೂ ಶ್ವೇತಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಬಳಿಕ ತಾಲೂಕು ಕಸಾಪ ಪದಾಧಿಕಾರಿಗಳಿಗೆ ಹಾಗೂ ವಿವಿಧ ವಲಯ ಘಟಕಗಳ ಅಧ್ಯಕ್ಷರಿಗೆ ನೇಮಕ ಪತ್ರ ನೀಡಿ ಅಭಿನಂದಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನೀಲಕುಮಾರ ಮೇಲ್ದೋಡ್ಡಿ, ಆರ್.ಆರ್.ಕೆ ಸಮಿತಿ ಸದಸ್ಯ ರವೀಂದ್ರ ಮೀಸೆ, ಕಸಾಪ ಗೌರವಾಧ್ಯಕ್ಷ ಡಾ.ವೈಜಿನಾಥ ಬುಟ್ಟೆ, ಡಾ.ಮನ್ಮಥ ಡೋಳೆ, ಗುರುನಾಥ ದೇಶಮುಖ, ವೀರೇಶ ಅಲ್ಮಾಜೆ, ಮಲ್ಲಿಕಾರ್ಜುನ ಟಂಕಸಾಲೆ, ಜಗನ್ನಾಥ ದೇಶಮುಖ, ಮಹಾದೇವ ಘೂಳೆ, ಖಂಡೋಬಾ ಕಂಗಟೆ, ಸಂದೀಪ ಪಾಟೀಲ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನೆಳಗೆ, ಧನರಾಜ ಮಾನೆ, ಗೋವಿಂದ ಪಾಟೀಲ, ಕೈಲಾಸಪತಿ ಕೇದಾರೆ, ಉತ್ತಮ ದಂಡೆ, ಉತ್ತಮ ಜಾಧವ, ಶ್ವೇತಾ ಆಲೂರ, ಶಿವರಾಮ ರಾಠೋಡ, ಕಪಿಲ ಡೋಣಗಾಂವೆ, ತುಳಸಿರಾಮ ಮಾನೆ, ಆರತಿ, ಪ್ರಿಯಾ ಮಿಲಿಂದ ಸೇರಿದಂತೆ ಇನ್ನಿತರರಿದ್ದರು.