ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಸೃಷ್ಠಿಸಿಕೊಂಡು ಕಾರ್ಯನಿರ್ವಹಿಸಿ ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂದು ಪ್ರಾಶುಂಪಾಲ ಈರಪ್ಪನಾಯಕ ಪ್ರಶಂಸೆ ವ್ಯಕ್ತಪಡಿಸಿದರು.
ಕೊರಟಗೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ವಾಣಿಜ್ಯ ವಿಭಾಗದಿಂದ ಆಯೋಜಿಸಲಾದ ವಾಣಿಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ವಿಶ್ವವಿದ್ಯಾಲಯದಲ್ಲಿ ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಶೇಷ ಮನ್ನಣೆ ಪಡೆದಿದೆ. ಭೋಧಕರುಗಳ ಪರಿಶ್ರಮದಿಂದ ಯುವಕ-ಯುವತಿಯರಲ್ಲಿ ಕ್ರೀಡಾ ಉತ್ಸಾಹ, ಕಾಲೇಜಿನ ಫಲಿತಾಂಶ ಅತ್ಯುತ್ತಮವಾಗಿದೆ. ಖಾಸಗಿ ಕಾಲೇಜಿನ ಮನಸ್ಸುಗಳಿಗೂ ಸರ್ಕಾರಿ ಕಾಲೇಜಿನ ಮನಸ್ಸುಗಳಿಗೂ ಹೋಲಿಕೆ ಮಾಡಬಾರದು. ಏಕೆಂದರೆ ಸರ್ಕಾರಿ ಕಾಲೇಜಿನ ಶಿಕ್ಷಣ ಮತ್ತು ಕಾರ್ಯ ಚಟುವಟಿಕೆಗಳು ಗುಣಮಟ್ಟದಲ್ಲಿವೆ. ಇಂತಹ ಕಾರ್ಯಕ್ರಮಗಳು ಹಳೆ ವಿದ್ಯಾರ್ಥಿಗಳ ಸಾಧಕ ಗಣ್ಯರ ನೇತೃತ್ವದಲ್ಲಿ ಪ್ರತಿವರ್ಷ ನಡೆಯಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮೀಪತಯ್ಯ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಬೇಕಾದರೆ ತಾಳ್ಮೆ, ಕಠಿಣ ಪರಿಶ್ರಮ, ಚಾಣಾಕ್ಷತೆ ಹೊಂದಿರಬೇಕು. ಸಾಧಕ ಗಣ್ಯರ ಸಲಹೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅನುಸರಿಸಿ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಯಶಸ್ಸು ಒಲಿದು ಬರಲಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ನಾಗೇಶ್.ಬಿ ಮಾತನಾಡಿ, ಬಡ ಕುಟುಂಬದ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣವೊಂದೇ ಮೂಲ ಮಂತ್ರ. ವಿದ್ಯೆ ಸಾಧಕನ ಸ್ವತ್ತೇ ಹೊರೆತು ಸೋಮಾರಿಯಾ ಸ್ವತ್ತಲ್ಲಾ ಎಂಬ ಗಾದೆ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡು ಜೈನ್ ವಿಶ್ವವಿದ್ಯಾಲಯದ ಉಪನ್ಯಾಸಕನಾಗಿದ್ದೇನೆ. ಸಾಧಕರ ಅಭಿಪ್ರಾಯ ತಿಳಿದು ಸಾಧಕರ ಹಾದಿಯಲ್ಲಿ ನಡೆದಾಗ ಆಧುನಿಕ ಸಮಾಜಕ್ಕೆ ಏನಾದರೂ ವಿಶೇಷ ಕೊಡುಗೆ ನೀಡಲು ಸಾಧ್ಯ ಎಂದರು.
ಹಳೆಯ ವಿದ್ಯಾರ್ಥಿ ಪೊಲೀಸ್ ಪೇದೆ ಸೌಮ್ಯ ದೇವರಾಜು ಮಾತನಾಡಿ ಮಹಿಳೆ ಇಡೀ ದೇಶವನ್ನೆ ಆಳುವ ಅವಕಾಶ ನಮ್ಮ ಸಂವಿಧಾನ ಸಮಾನತೆಯ ಹಕ್ಕು ನೀಡಿದೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನುಡಿಯಂತೆ ಎಲ್ಲಾರೂ ಶಿಕ್ಷವನ್ನು ಕಲಿಯುವಂತ್ತಾಗಬೇಕು. ಪದವಿ ಮಟ್ಟದಲ್ಲಿ ತಮ್ಮ ಜೀವನ ನಿರ್ಧಾರಗಳನ್ನು ತೆಗೆದುಕೊಳ್ಳುವುದಯ ನಮ್ಮೇಲ್ಲರ ಜವಾಬ್ದಾರಿಯಾಗಿದೆ. ಪದವಿಯನ್ನು ಪಡೆದು ಮುಂದಿನ ಮೈಲುಗಲ್ಲಿಗೆ ಕಾಲಿಟ್ಟು ಉನ್ನತ ಸ್ಥಾನಗಳನ್ನು ಅಲಂಕಾರಿಸಬೇಕು, ಮಹಿಳೆಯೇ ಧೃತಿಗೆಡದೆ ಧೈರ್ಯವಾಗಿ ಮುನ್ನೆಡೆದು ಜೀವನ ಸಾಗಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾಣಿಜ್ಯೋತ್ಸವ ಸಂಭ್ರಮದಲ್ಲಿ ವಾಣಿಜ್ಯ ವಿಭಾಗದಿಂದ ತುಮಕೂರು ವಿವಿಯಲ್ಲಿ ರ‍್ಯಾಂಕ್ ಪಡೆದ ೧೫ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಮತ್ತು ವಾಲಿಬಾಲ್, ತ್ರೋಬಾಲ್ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಮೆಡಲ್ ಮತ್ತು ಅಭಿನಂದನಾ ಪತ್ರ ವಿತರಿಸಿ ಕಲಿಕೆಗೆ ಪ್ರೋತ್ಸಾಹಿಸಿದ್ದು ಒಂದೆಡೆಯಾದರೆ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಕ್ರೀಡೆ ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಿದ್ದು ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ಡಾ.ದೀಪಾ ಡಿ.ಎಸ್, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಡಾ.ಅಮಿತಾ ಕೆ.ವಿ, ನಟರಾಜ್, ಜ್ಯೋತಿ, ನಟರಾಜ್ ಎಂ.ಎಚ್, ಲೋಹಿತ್‌ರಾಮ್ ಎಸ್.ಕೆ, ಚೈತಾಲಿ ಕೆ.ಎಸ್, ಹಳೆ ವಿದ್ಯಾರ್ಥಿಗಳಾದ ದುಷ್ಯಂತ್, ನಾಗೇಶ್ ಸಿ.ಎಲ್, ರಂಜಿತ್, ಬಿರೇಂದ್ರ, ಹರ್ಷ ಟಿ.ಜಿ, ಪರ್ತಕರ್ತ ನರಸಿಂಹಮೂರ್ತಿ, ಬಾಬುನಾಯ್ಕ, ರಾಜು ಕೆ.ಜೆ, ದೇವರಾಜು, ಆಕಿಲೇಶ್, ಸೌಮ್ಯ ಕೆ.ಎಸ್, ಮಂಜುನಾಥ್, ಗೌರ್ಧನ್, ಡಾ.ನಾಗೇಶ್, ಡಾ.ಕಿರಣ್ ಹೆಚ್.ಎಸ್ ಸೇರಿದಂತೆ ಇತರರು ಇದ್ದರು.