ಮಂಗಳೂರು ಜೈಲು ಕ್ರಿಮಿನಲ್‌ಗಳ ಸ್ವರ್ಗ!; ಇಲ್ಲಿದೆ ಸಣ್ಣ ಅಪರಾಧಿಗೆ ದೊಡ್ಡ ಅಪರಾಧಿಯಾಗುವ ಅವಕಾಶ

Date:

Advertisements

ಜೈಲುಗಳು ಕೈದಿಗಳ ಮನ ಪರಿವರ್ತನಾ ಕೇಂದ್ರ ಆಗಬೇಕೆಂಬ ಮಾತಿದೆ. ಒಮ್ಮೆ ಜೈಲಿಗೆ ಹೋದಾತ ಇನ್ನೆಂದೂ ಜೈಲಿಗೆ ಹೋಗಲಾರೆ ಎಂಬ ನಿರ್ಧಾರಕ್ಕೆ ಬರುವ ಮಟ್ಟದಲ್ಲಿ ಜೈಲುಗಳು ಇರಬೇಕಾಗಿದೆ. ಆದರೆ ಮಂಗಳೂರು ಜೈಲು ಕ್ರಿಮಿನಲ್ ಗಳಿಗೆ ಮತ್ತಷ್ಟು ಕ್ರಿಮಿನಲ್ ಚಟುವಟಿಕೆ ನಡೆಸಲು ಪ್ರೇರಣೆ ನೀಡುವ ಕೇಂದ್ರವಾಗಿದೆ. ಕ್ರಿಮಿನಲ್ ಗಳನ್ನು ಸೃಷ್ಟಿಸುವ ಪೂರಕ ವ್ಯವಸ್ಥೆ ಇರುವ ಕೇಂದ್ರ ಎಂಬ ಆರೋಪ ಮಂಗಳೂರು ಜೈಲಿನ ಬಗ್ಗೆ ಆಗಾಗ ಕೇಳಿ ಬರುತ್ತಿದೆ.

ಹಿಂದೂ ಕೈದಿಗಳಿಗೆ ಒಂದು ಬ್ಲಾಕ್, ಮುಸ್ಲಿಮ್ ಕೈದಿಗಳಿಗೆ ಮತ್ತೊಂದು ಬ್ಲಾಕ್. ದೇಶದ ಯಾವುದೇ ಜೈಲಿನಲ್ಲಿ ಇರದ ಇಂಥದೊಂದು ವ್ಯವಸ್ಥೆ ಮಂಗಳೂರು ಜೈಲಿನಲ್ಲಿದೆ. ಎ ಬ್ಲಾಕ್ ನಲ್ಲಿ ಹಿಂದೂ ಕೈದಿಗಳನ್ನು ಇರಿಸಿದರೆ, ಬಿ ಬ್ಲಾಕ್‌ನಲ್ಲಿ ಮುಸ್ಲಿಮ್ ಕೈದಿಗಳನ್ನು ಇರಿಸಲಾಗುತ್ತದೆ. ಈ ಪ್ರತ್ಯೇಕ ವ್ಯವಸ್ಥೆಯ ಬಗ್ಗೆ ಆಗಾಗ ಅಪಸ್ವರಗಳು ಕೇಳಿ ಬಂದಿದೆ. “ನಾವು ಕೈದಿಗಳನ್ನು ಹಿಂದೂ, ಮುಸ್ಲಿಮ್ ಎಂದು ಪ್ರತ್ಯೇಕಿಸಿಲ್ಲ. ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕೈದಿಗಳ ಭದ್ರತೆಯ ಹಿತದೃಷ್ಟಿಯಿಂದ ಎರಡು ಪ್ರತ್ಯೇಕ ಬ್ಲಾಕ್ಗಳ ಮಾಡಲಾಗಿದೆ.” ಎಂಬುದು ಸರ್ಕಾರದ ಸಮರ್ಥನೆ. ಒಂದು ಮಟ್ಟಿಗೆ ಈ ವಾದ ಸರಿಯಿದೆ. ಪ್ರತ್ಯೇಕ ಬ್ಲಾಕ್ ಇಲ್ಲದಿರುತ್ತಿದ್ದರೆ ಮಂಗಳೂರು ಜೈಲಿನಲ್ಲಿ ನಡೆಯುವ ಅನಾಹುತವನ್ನು ಊಹಿಸಲೂ ಸಾಧ್ಯವಿಲ್ಲ.

ಜೈಲುಗಳು ಕೈದಿಗಳ ಮನ ಪರಿವರ್ತನಾ ಕೇಂದ್ರ ಆಗಬೇಕೆಂಬ ಮಾತಿದೆ. ಒಮ್ಮೆ ಜೈಲಿಗೆ ಹೋದಾತ “ಇನ್ನೆಂದೂ ಜೈಲಿಗೆ ಹೋಗಲಾರೆ” ಎಂಬ ನಿರ್ಧಾರಕ್ಕೆ ಬರುವ ಮಟ್ಟದಲ್ಲಿ ಜೈಲುಗಳು ಇರಬೇಕಾಗಿದೆ. ಆದರೆ ಮಂಗಳೂರು ಜೈಲು ಕ್ರಿಮಿನಲ್ ಗಳಿಗೆ ಮತ್ತಷ್ಟು ಕ್ರಿಮಿನಲ್ ಚಟುವಟಿಕೆ ನಡೆಸಲು ಪ್ರೇರಣೆ ನೀಡುವ ಕೇಂದ್ರವಾಗಿದೆ. ದುಡ್ಡು ಕೊಟ್ಟರೆ ಮಂಗಳೂರು ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತದೆ. ಹಾಗಾಗಿ ಮಂಗಳೂರು ಜೈಲು ಕ್ರಿಮಿನಲ್‌ಗಳ ಸ್ವರ್ಗ. ಕ್ರಿಮಿನಲ್ ಗಳನ್ನು ಸೃಷ್ಟಿಸುವ ಪೂರಕ ವ್ಯವಸ್ಥೆ ಇರುವ ಕೇಂದ್ರ ಎಂಬ ಆರೋಪ ಮಂಗಳೂರು ಜೈಲಿನ ಬಗ್ಗೆ ಆಗಾಗ ಕೇಳಿ ಬರುತ್ತಿದೆ.

Advertisements

ಜೈಲಿನ ವ್ಯವಸ್ಥೆ ಸುಧಾರಣೆಯಾಗದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲ. ಯಾವುದಾದರೂ ಸಣ್ಣ ಪುಟ್ಟ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ ಆರೋಪಿಗಳು, ಜೈಲಿನಿಂದ ಹೊರಬಂದ ಬಳಿಕ ಕೊಲೆಯಂತಹ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡುಬರುತ್ತಿದೆ. ಇದಕ್ಕೆ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ಬಾಡೂಟ, ಮಾದಕ ವಸ್ತು ಮೊದಲಾದ ಸಕಲ ಸವಲತ್ತುಗಳು ಸಲೀಸಾಗಿ ದೊರೆಯುವುದು, ಹೊಸಬರಿಗೆ ಹಳೆ ರೌಡಿಗಳ ಪರಿಚಯವಾಗುವುದು ಮೊದಲಾದ ಅವ್ಯವಸ್ಥೆಗಳೇ ಕಾರಣವಾಗಿದೆ. ಅಲ್ಲದೆ ಜೈಲಿನಲ್ಲಿ ರೌಡಿ ಶೀಟರ್‌ಗಳಿಗೆ ಇತರ ಕೈದಿಗಳಿಂದ ಸಿಗುವ ʼರಾಜಮರ್ಯಾದೆʼ, ಜೈಲು ಸಿಬ್ಬಂದಿಗಳ ನಡುವೆ ಇರುವ ಅನ್ಯೋನ್ಯತೆ ನೋಡುವ ಹೊಸ ಕೈದಿಗಳು “ನಾವು ಕೂಡಾ ಈ ರೀತಿಯಾಗಬೇಕು” ಎಂಬ ನಿರ್ಧಾರಕ್ಕೆ ಬರುತ್ತಾರೆ. ಜೈಲಿನಿಂದ ಹೊರ ಬಂದ ಬಳಿಕ ಅವರು ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡುತ್ತದೆ.

ಮಂಗಳೂರು ಜೈಲಿನಲ್ಲಿ 10 ಮಹಿಳಾ ಮತ್ತು 200 ಪುರುಷ ಕೈದಿಗಳನ್ನು ಇರಿಸುವಷ್ಟು ಮಾತ್ರ ವ್ಯವಸ್ಥೆ ಇದೆ. ಒಟ್ಟು 210 ಮಂದಿ ಕೈದಿಗಳಿಗೆ ಸ್ಥಳವಾಕಾಶ ಇರುವ ಮಂಗಳೂರು ಜೈಲಿನಲ್ಲಿ ಇದೇ ಮೇ 8ರ ಲೆಕ್ಕ ಪ್ರಕಾರ ಒಟ್ಟು 308 ಕೈದಿಗಳು ಇದ್ದಾರೆ. ಹಿಂದೆ 350ಕ್ಕೂ ಹೆಚ್ಚಿನ ಕೈದಿಗಳನ್ನು ಇರಿಸಿದ ಉದಾಹರಣೆಗಳೂ ಇವೆ. ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸುವುದರಿಂದ ಕೈದಿಗಳ ನಿಯಂತ್ರಣ ಮಾಡುವುದು ಕೂಡಾ ಜೈಲಿನ ಸಿಬ್ಬಂದಿಗೆ ಕಷ್ಟಕರವಾಗಿದೆ. ಇದರಿಂದ ಹತ್ತು ಹಲವು ಸಮಸ್ಯೆಗಳನ್ನು, ಸವಾಲುಗಳನ್ನು ಮಂಗಳೂರು ಜೈಲು ಎದುರಿಸುವಂತಾಗಿದೆ.

ಮಂಗಳೂರು ಜೈಲು
ಜೈಲಿನ ಗೋಡೆಯ ಹೊರಗಿನ ರಸ್ತೆಯಿಂದ ವಸ್ತುವನ್ನು ಎಸೆಯುತ್ತಿರುವ ದೃಶ್ಯ

ಕೈದಿಗಳ ನಡುವಿನ ಹೊಡೆದಾಟ, ಕೊಲೆ, ಜೈಲಿನೊಳಗೆ ಮಾರಕಾಸ್ತ್ರ, ಗಾಂಜಾ ಸಹಿತ ಅಮಲು ಪದಾರ್ಥಗಳನ್ನು ಎಸೆಯುವುದು, ಜೈಲಿನಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಸುವುದು, ಬಾಡೂಟ ಪಾರ್ಟಿ ಮಾಡುವುದು ಮೊದಲಾದ ವಿಷಯಗಳಿಗೆ ಮಂಗಳೂರು ಜೈಲು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಮಂಗಳೂರು ನಗರದ ಹೃದಯ ಭಾಗದಲ್ಲೇ ಜೈಲು ಇರುವುದರಿಂದ ರಸ್ತೆಯಲ್ಲಿ ನಿಂತು ಆಯುಧ, ಅಮಲು ಪದಾರ್ಥ, ಮೊಬೈಲ್ ಫೋನ್‌ಗಳನ್ನು ಸಲೀಸಾಗಿ ಜೈಲಿನ ಒಳಗೆ ಎಸೆಯಬಹುದಾಗಿದೆ. ಈ ರೀತಿ ಎಸೆಯುವ ಫೋಟೊ, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಹರಿದಾಡುತ್ತಿರುತ್ತದೆ.

ಕೈದಿಗಳ ನಡುವಿನ ಹೊಡೆದಾಟಕ್ಕೆ ಮಂಗಳೂರು ಜೈಲು ಕುಖ್ಯಾತಿ ಪಡೆದಿದೆ. 2015ರ ನವೆಂಬರ್ 2ರಂದು ಕೈದಿಗಳ ತಂಡವೊಂದು ರೌಡಿ ಶೀಟರ್ ಮಾಡೂರು ಯೂಸುಫ್ ನನ್ನು ತಲವಾರುಗಳಿಂದ ದಾಳಿ ನಡಿಸಿ ಕೊಲೆ ಮಾಡಿತ್ತು. ಈ ವೇಳೆ ಮಾಡೂರು ಯೂಸುಫ್ ಮೇಲಿನ ದಾಳಿ ತಡೆಯಲು ಯತ್ನಿಸಿದ ಗಣೇಶ್ ಶೆಟ್ಟಿ ಎಂಬಾತ ಕೂಡಾ ತಂಡದ ದಾಳಿಯಿಂದ ಕೊಲೆಯಾಗಿದ್ದ. ಈ ಘಟನೆಯಿಂದ ಮಂಗಳೂರು ಜೈಲು ಭಾರೀ ಸುದ್ಧಿಯಾಗಿತ್ತು. ಈ ಕೊಲೆಗೆ ಆಯುಧಗಳನ್ನು ಜೈಲಿನ ಕಾಂಪೌಂಡ್ ಪಕ್ಕದ ರಸ್ತೆಯಲ್ಲಿ ನಿಂತು ಒಳಗೆ ಎಸೆಯಲಾಗಿತ್ತು ಎಂಬುದು ಬಳಿಕ ತನಿಖೆಯಿಂದ ತಿಳಿದು ಬಂದಿತ್ತು.

ಜೈಲಿನಲ್ಲಿ ಅಳವಡಿಸಿದ ಜಾಮರ್ ನಿಂದ ನಮಗೆ ನೆಟ್ವರ್ಕ್‌ ಸಿಗುತ್ತಿಲ್ಲ ಎಂಬುದು ಜೈಲಿನ ಸುತ್ತಮುತ್ತಲಿರುವ ಅಂಗಡಿ, ಮಳಿಗೆಗಳು, ಅಪಾರ್ಟ್‌ಮೆಂಟ್ಗಳ ಜನರ ಆರೋಪ. ಈ ಬಗ್ಗೆ ಹಲವು ಪ್ರತಿಭಟನೆಗಳು, ಜೈಲಿಗೆ ಮುತ್ತಿಗೆ ಕೂಡಾ ನಡೆದಿವೆ. ಆದರೆ ಜೈಲಿನ ಒಳಗೆ ಮೊಬೈಲ್ ನೆಟ್ವರ್ಕ್‌ ಗೆ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಕೈದಿಗಳು ತಮ್ಮ ಮನೆಯವರೊಂದಿಗೆ, ಕ್ರಿಮಿನಲ್‌ಗಳು ಅವರ ಗ್ಯಾಂಗ್‌ ಸದಸ್ಯರೊಂದಿಗೆ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತುಕತೆ ನಡೆಸುತ್ತಾರೆ. ಜೈಲಿಗೆ ದಿಢೀರ್ ತಪಾಸಣೆಗೆ ತೆರಳಿದ ಪೊಲೀಸ್ ಅಧಿಕಾರಿಗಳಿಗೆ ಕೈದಿಗಳಲ್ಲಿ ಮೊಬೈಲ್ ಫೋನ್ಗಳು ಸಿಕ್ಕಿರುವುದು ಇದಕ್ಕಿರುವ ಸಾಕ್ಷಿಯಾಗಿದೆ.

ಬಂಟ್ವಾಳ ತಾಲೂಕಿನ ಮುಡಿಪು ಸಮೀಪ ಹೊಸ ಜೈಲು ನಿರ್ಮಾಣಕ್ಕೆ 63 ಎಕರೆ ಜಾಗ ಗುರುತಿಸಿ 2018ರಲ್ಲಿ 110 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆದಿದೆ. ಎರಡನೇ ಹಂತದ ಕಾಮಗಾರಿಗೆ 195 ಕೋಟಿ ರೂಪಾಯಿ ಅಗತ್ಯ ಇದೆ ಎಂದು ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಗೃಹಸಚಿವ ಡಾ ಜಿ ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

ಆದರೆ ಮೊದಲ ಹಂತದ ಕಾಮಗಾರಿ ಮುಗಿದ ಬಳಿಕ ಎರಡನೇ ಹಂತದ ಕಾಮಗಾರಿ ಮುಂದುವರಿಯದೆ ನಿರ್ಮಾಣ ಕಾರ್ಯ ನಿಂತು ಹೋಗಿದೆ. ಹೊಸ ಜೈಲಿನಲ್ಲಿ ಸಾವಿರಕ್ಕೂ ಅಧಿಕ ಕೈದಿಗಳನ್ನು ಇರಿಸುವ ವ್ಯವಸ್ಥೆ ಇದೆ. ಈ ಹೊಸ ಜೈಲು ಕಾರ್ಯಾರಂಭ ಆದರೆ ಪ್ರಸಕ್ತ ಮಂಗಳೂರು ಜೈಲು ಎದುರಿಸುವ ಹತ್ತು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಒಂದಷ್ಟು ಪರಿಹಾರ ದೊರಕಿದಂತೆ ಆಗಬಹುದು.

ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ, “ಹೊಸ ಜೈಲಿನ ನಿರ್ಮಾಣ ಕಾರ್ಯ ಪೂರ್ತಿಯಾಗಿದೆ. ಜೈಲಿನ ಕ್ವಾಟ್ರಸ್ ನಿರ್ಮಾಣದ ಕಾರ್ಯ ಬಾಕಿ ಇದೆ. ಕ್ವಾಟ್ರಸ್ ನಿರ್ಮಾಣ ಕಾರ್ಯ ಮುಗಿಯುವವರೆಗೆ ಕಾಯದೆ ಹೊಸ ಜೈಲು ಕಾರ್ಯಾರಂಭ ಮಾಡಬೇಕು ಎಂದು ನಾವು ಆಗ್ರಹಿಸಿದ್ದೇವೆ. ಮುಂದಿನ ಆರು ತಿಂಗಳಲ್ಲಿ ಹೊಸ ಜೈಲು ಕಾರ್ಯಾರಂಭ ಆಗಲಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಪ್ರಸಕ್ತ ಜೈಲಿನಲ್ಲಿ ಅಳವಡಿಸಿರುವ ಜಾಮರ್‌ನಿಂದ ಮಂಗಳೂರಿನ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹೊಸ ಜೈಲು ಕಾರ್ಯಾರಂಭ ಮಾಡಿದರೆ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಕೈದಿಗಳ ಮನಪರಿವರ್ತನೆಗೆ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ” ಎಂದರು.

“ಜೈಲಿನ ಭದ್ರತೆ ವಿಷಯದಲ್ಲಿ ರಾಜಿ ಮಾಡಬಾರದು. ಸರಕಾರ ಮತ್ತು ಜೈಲು ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೊರಗಿನ ಯಾವುದೇ ವಸ್ತುಗಳು ಜೈಲಿನೊಳಗೆ ಹೋದರೆ ಅದರಿಂದ ಕೈದಿಗಳಿಗೆ ಅನುಕೂಲವಾಗಲಿದೆ. ಇದರಿಂದ ಅವರು ಮತ್ತೆ ಮತ್ತೆ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸಲು ಪ್ರೇರೇಪಿಸಿದಂತೆ ಆಗುತ್ತದೆ. ಜೊತೆಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗುವ ಪ್ರಕ್ರಿಯೆ ನಡೆಯಬೇಕು. ಇದರಿಂದ ಸಮಾಜದಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯವಿದೆ” ಎಂದು ಮಂಗಳೂರಿನ ನಿವೃತ್ತ ಪೊಲೀಸ್ ಅಧಿಕಾರಿ ಹರೀಶ್ ಪದವಿನಂಗಡಿ ಹೇಳುತ್ತಾರೆ.

ಇದನ್ನೂ ಓದಿ ಧರ್ಮಸ್ಥಳದ ಸೌಜನ್ಯ ಹಿಂದೂ ಅಲ್ಲವೇ ಶೋಭಾ ಮೇಡಂ? ; ಈ ಪ್ರಕರಣವನ್ನು ಮರು ತನಿಖೆಗೆ ಯಾಕೆ ಒತ್ತಾಯಿಸುತ್ತಿಲ್ಲ?

WhatsApp Image 2025 05 08 at 16.45.05 70e5a46e
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X