ಜಮ್ಮು-ಕಾಶೀರ ಸೇರಿದಂತೆ ಹಲವು ಗಡಿಭಾಗದಲ್ಲಿ ನಿರಂತರ ಕ್ಷಿಪಣಿ ದಾಳಿ ಪಾಕಿಸ್ತಾನದಿಂದ ಆರಂಭಗೊಂಡ ಬೆನ್ನಲ್ಲೇ ಜನರು ಸುರಕ್ಷಿತ ಸ್ಥಳ ಅಥವಾ ಬಂಕರ್‌ಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಜನರಿಗೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಗಡಿಯಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಪಂಜಾಬಿನ ಎಲ್ಲಾ ಶಾಲಾ- ಕಾಲೇಜುಗಳು
ಮೂರು ದಿನ ಅಥವಾ ಮುಂದಿನ ಆದೇಶದವರೆಗೂ ಬಂದ್ ಮಾಡುವಂತೆ ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಘೋಷಣೆ ಮಾಡಿದ್ದಾರೆ.
