ಭಾರತದ ಗಡಿ ರಾಜ್ಯಗಳ ಹಲವೆಡೆ ಪಾಕಿಸ್ತಾನ ದಾಳಿ ಮಾಡಲು ಯತ್ನಿಸಿದೆ. ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಪಂಜಾಬ್ ಭಾಗದಲ್ಲಿ ದಾಳಿ ನಡೆಸಲಾಗಿದ್ದು, ಭಾರತದ ವಾಯುಪಡೆಯು ಪಾಕಿಸ್ತಾನ ದಾಳಿಯನ್ನು ಹೊಡೆದುರುಳಿಸಿದೆ. ಗಡಿ ರಾಜ್ಯಗಳಲ್ಲಿ ಬ್ಲ್ಯಾಕ್ ಔಟ್ ಘೋಷಿಸಲಾಗಿದೆ.
ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯಿಂದ ಹಾರಿದ ಕ್ಷಿಪಣಿಗಳನ್ನು ಭಾರತೀಯ ಪಡೆಗಳು ತಡೆದು ನಿಲ್ಲಿಸಿವೆ.
ಪಂಜಾಬ್‌ನ ಪಠಾಣ್‌ಕೋಟ್ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 30 ಕಿಮೀ ದೂರದಲ್ಲಿದೆ. ಈ ಭಾಗದ ಮೇಲೆ ಪಾಕಿಸ್ತಾನ ದಾಳಿ ನಡೆಸಿದೆ. ಈ ಪ್ರದೇಶವು ಯುದ್ಧತಂತ್ರದ ಭಾಗವಾಗಿದ್ದು, ಜಮ್ಮು ಕಡೆಗೆ ಪ್ರವೇಶ ಬಿಂದುವಾಗಿಯೂ ಕಾರ್ಯನಿರ್ವಹಿಸುತ್ತದೆ.
ಪಂಜಾಬ್, ರಾಜಸ್ಥಾನ, ಗುಜರಾತ್‌ನಲ್ಲಿ ಬ್ಲ್ಯಾ ಕೌಟ್‌ಗಳು
ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳು ಈಗ ಸಂಪೂರ್ಣ ಬ್ಲಾಕೌಟ್‌ಗೆ ಒಳಗಾಗಿವೆ. ಪಂಜಾಬ್‌ನ ಚಂಡೀಗಢ, ಫಿರೋಜ್‌ಪುರ, ಮೊಹಾಲಿ ಮತ್ತು ಗುರುದಾಸ್ಪುರ ಹಾಗೂ ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಮತ್ತೊಂದು ರಾಜ್ಯವಾದ ರಾಜಸ್ಥಾನದ ಕೆಲವು ಭಾಗಗಳಲ್ಲಿಯೂ ಬ್ಲಾಕೌಟ್ ಘೋಷಿಸಲಾಗಿದೆ. ಗುಜರಾತ್‌ನಲ್ಲೂ ಬ್ಲಾಕೌಟ್ ಘೋಷಿಸಲಾಗಿದೆ.
ವಿಮಾನಯಾನ ಸಂಸ್ಥೆಗಳಿಗೆ ಸೂಚನೆ
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಪ್ರಕಟಣೆಯನ್ನು ಹೊರಡಿಸಿದ್ದು, ಭದ್ರತೆ ಕ್ರಮಗಳನ್ನು ಹೆಚ್ಚಿಸಲು ದೇಶಾದ್ಯಂತ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿರಿ: ಪಾಕಿಸ್ತಾನದಿಂದ ಮುಂದುವರಿದ ದಾಳಿ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗಡಿಭಾಗದ ಜನರಿಗೆ ಸೂಚನೆ
ಬೋರ್ಡಿಂಗ್ ಮೊದಲು ಎಲ್ಲಾ ಪ್ರಯಾಣಿಕರಿಗೆ ಕಡ್ಡಾಯವಾಗಿ ದ್ವಿತೀಯ ಭದ್ರತಾ ತಪಾಸಣೆ, ಟರ್ಮಿನಲ್ ಪ್ರವೇಶ ನಿರ್ಬಂಧ, ಮಾನ್ಯತೆ ಹೊಂದಿದ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಅವಕಾಶ, ಸಿಸಿಟಿವಿ ಕಣ್ಗಾವಲು, ವಿಮಾನಗಳಲ್ಲಿ ಏರ್ ಮಾರ್ಷಲ್‌ಗಳ ಹೆಚ್ಚಿನ ನಿಯೋಜನೆ, ಬ್ಯಾಗೇಜ್ ಸ್ಕ್ರೀನಿಂಗ್ ಮೊದಲಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ಐಪಿಎಲ್ ಪಂದ್ಯ ರದ್ದು
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಚ್‌ಪಿಸಿಎ ಕ್ರೀಡಾಂಗಣವನ್ನು ಸ್ಥಳಾಂತರಿಸಲಾಗಿದೆ. ಲೈಟ್‌ಗಳನ್ನು ಹಾರಿಸಲಾಗಿದೆ.