ಜಮ್ಮುವಿನ ಸಾಂಬಾ ವಲಯದ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಏಳು ಭಯೋತ್ಪಾದಕರನ್ನು ಕೊಲ್ಲಲಾಗಿದ್ದು, ಪಾಕಿಸ್ತಾನ್ ರೇಂಜರ್ಸ್ ಪೋಸ್ಟ್‌ಅನ್ನು ನಾಶಪಡಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಘೋಷಿಸಿದೆ.
ಬಿಎಸ್‌ಎಫ್ ವಕ್ತಾರರ ಪ್ರಕಾರ, ಮೇ 8 ಮತ್ತು 9ರ ಮಧ್ಯರಾತ್ರಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭಾರತೀಯ ಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರ ಗುಂಪನ್ನು ಗಡಿ ಕಣ್ಗಾವಲು ಪಡೆ ಗುರುತಿಸಿದ್ದು, ಅವರ ಮೇಲೆ ಗುಂಡು ಹಾರಿಸಿದೆ. ದಾಳಿಯಲ್ಲಿ ಏಳು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ರೇಂಜರ್ಸ್‌ನ ಧಂಧರ್ ಪೋಸ್ಟ್‌ಅನ್ನು ನಾಶಗೊಳಿಸಲಾಗಿದೆ. ಪೋಸ್ಟ್ ನಾಶಗೊಂಡಿರುವ ಥರ್ಮಲ್ ಇಮೇಜಿಂಗ್ ದೃಶ್ಯಗಳನ್ನು ಬಿಎಸ್‌ಎಫ್ ಬಿಡುಗಡೆ ಮಾಡಿದೆ.
#WATCH | On 8-9 May 2025, BSF foiled a major infiltration bid at the International Boundary in Samba district, J&K by killing at least seven terrorists and causing extensive damage to the Pakistan Post Dhandhar, says BSF.
— ANI (@ANI) May 9, 2025
(Source: BSF) pic.twitter.com/c2MWOUuvQs
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಭಾಗಗಳಲ್ಲಿ ಬ್ಲ್ಯಾಕೌಟ್ ಘೋಷಿಸಲಾಗಿದೆ.