ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಜಾರ್ಖಂಡ್‌ನ ರಾಂಚಿಯಲ್ಲಿ ನಕಲಿ ಸೇನಾ ಸಮವಸ್ತ್ರಗಳು ಪತ್ತೆಯಾಗಿದೆ. ಸೇನಾ ಗುಪ್ತಚರ ಸಂಸ್ಥೆ ಮತ್ತು ಜಾರ್ಖಂಡ್ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಶುಕ್ರವಾರ ಜಂಟಿಯಾಗಿ ದಾಳಿ ನಡೆಸಿ ರಾಂಚಿಯಲ್ಲಿ ನಕಲಿ ಸೇನಾ ಸಮವಸ್ತ್ರಗಳನ್ನು ವಶಪಡಿಸಿಕೊಂಡಿವೆ.
ನಕಲಿ ಸಮವಸ್ತ್ರದ ಬಗ್ಗೆ ಲಕ್ನೋದ ಮಿಲಿಟರಿ ಗುಪ್ತಚರ ಸಂಸ್ಥೆಗೆ ಸುಳಿವು ಸಿಕ್ಕ ಬಳಿಕ ರಾಂಚಿಯ ರಾಂಚಿಯ ಬೂಟಿ ಮೋರ್‌ನಲ್ಲಿರುವ ಶ್ರೀ ಗಣೇಶ್ ಸೇನಾ ಅಂಗಡಿಗೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಭಾರತದಿಂದ ಪಾಕಿಸ್ತಾನಕ್ಕೆ ತೆರಳುತ್ತಿರುವ ಸಾಮಾನ್ಯರು, ಸಂಕಟದ ಕತೆಗಳು
ಕಾರ್ಯಾಚರಣೆಯ ಸಮಯದಲ್ಲಿ, ಯಾವುದೇ ಅನುಮತಿಯಿಲ್ಲದೆ ತಯಾರಿಸಲಾದ ನಕಲಿ ಸೇನಾ ಸಮವಸ್ತ್ರಗಳು ಮತ್ತು ಯುದ್ಧ ಉಡುಪುಗಳು ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ನಕಲಿ ಸಮವಸ್ತ್ರಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ.
ಸದ್ಯ ಈ ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಅವರ ಉದ್ದೇಶವೇನು ಎಂಬುದನ್ನು ನಿರ್ಧರಿಸಲು ತನಿಖೆ ನಡೆಸಲಾಗುತ್ತಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ 26 ಭಾರತೀಯರನ್ನು ಬಲಿ ಪಡೆದುಕೊಂಡ ಬಳಿಕ ಇತ್ತೀಚೆಗೆ ಭಾರತ ಪಾಕಿಸ್ತಾನದ ಒಟ್ಟು ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ.
ಭಯೋತ್ಪಾದನೆ ವಿರುದ್ಧದ ಭಾರತ ಸರ್ಕಾರ ನಡೆಸಿದ ಈ ಪ್ರತಿದಾಳಿಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿದೆ. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದೆ.
