ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆಗೆ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದರು.ನಿಗದಿತ ಬೆಲೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದಾಗ ನಿಗದಿತ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಸಹಮತಿಯನ್ನು ನೀಡಿದೆ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಹಲವು ವರ್ಷಗಳಿಂದ ಕಲ್ಯಾಣ್ ಕರ್ನಾಟಕ ಭಾಗದ ರೈತರು ಮೆಣಸಿನಕಾಯಿ ಹೆಚ್ಚಾಗಿ ಬೆಳೆದು ನಿಗದಿತ ಬೆಲೆಯಿಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಕಳೆದ ಎರಡು ತಿಂಗಳಿನಿಂದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಸೇರಿದಂತೆ ಎಪಿಎಂಸಿ ಸಚಿವರನ್ನು ಭೇಟಿ ಮಾಡಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಕೇಂದ್ರಕ್ಕೆ ಪತ್ರ ಬರೆಯಿಸಿ,ಹಾಗೂ ಸಂಸತ್‌ನಲ್ಲಿಯೇ ಮೆಣಿಸಿನ ಕಾಯಿ ಬೆಳೆಗಾರರ ರಕ್ಷಣೆಗೆ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದಾಗ ಕೇಂದ್ರದ ಕೃಷಿ ಮಂತ್ರಾಲಯ ರಾಜ್ಯದ ಸಹಯೋಗದೊಂದಿಗೆ ಖರೀದಿ ಅವಕಾಶ ನೀಡಿದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ಮಧ್ಯಪ್ರವೇಶಿಸುವ (ಎಂಐಎಸ್) ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 10,589 ರೂ ದರದಲ್ಲಿ ಖರೀದಿಸಲು ಕೇಂದ್ರ ರೈತ ಮಂತ್ರಾಲಯ ಆದೇಶ ನೀಡಿದೆ.ಮಾರುಕಟ್ಟೆಯಲ್ಲಿ ಮೆಣಿಸಿನಕಾಯಿ ಬೆಳೆ ನಿಗದಿ ದರಕ್ಕಿಂತ ಕುಸಿತವಾದಲ್ಲಿ ಮಾತ್ರ ಖರೀದಿಗೆ ಅವಕಾಶವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಖರೀದಿ ಪ್ರಕ್ರಿಯೆ ನಡೆಸಬೇಕಿದೆ. ರಾಜ್ಯದ ಸರ್ಕಾರ ಖರೀದಿ ನಡೆಸಿದ ನಂತರ ಅಂಕಿ ಅಂಶಗಳ ಆಧಾರದ ಮೇಲೆ ಕೇಂದ್ರ ಅನುದಾನ ಬಿಡುಗಡೆ ಮಾಡಲಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಕ್ತಿನಗರ ಶಾಖೋತ್ಪನ್ನ ಘಟಕದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಕೇಂದ್ರ ಸರ್ಕಾರ ಅನೇಕ ಷರತ್ತುಗಳ ಮೇಲೆ ಪ್ರತಿ ರೈತರ ಪ್ರತಿಶತ 25 ರಷ್ಟು ಬೆಳೆಯನ್ನು ಖರೀದಿಸಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಮಾರುಕಟ್ಟೆಗೆ ಆವಕವಾಗುವ ಮೆಣಿಸಿನಕಾಯಿ ಬೆಳೆ ಖರೀದಿಗೆ ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಒಳಗೊಂಡ ಸಮಿತಿ ಸಹ ರಚಿಸಲಾಗಿದೆ. ದೇಶದಲ್ಲಿಯೇ ಕರ್ನಾಟಕ,ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರ ಖರೀದಿಗೆ ಅವಕಾಶ ದೊರೆತಿದೆ ಎಂದರು.
ಹೆಚ್ಚುವರಿಯಾಗಿ ಬೆಳೆದಿರುವ ರೈತರ ಮೆಣಿಸಿನ ಕಾಯಿ ಬೆಳೆಯನ್ನು ಸಹ ಖರೀದಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತದೆ. ಮೊದಲ ಪ್ರಯತ್ನವಾಗಿ ಎಂಐಎಸ್ ಯೋಜನೆಯಡಿ ಖರೀದಿಗೆ ಒಪ್ಪಿಗೆ ಸೂಚಿಸಿ ಆದೇಶ ನೀಡಲಾಗಿದೆ ಎಂದರು. ಬೆಳೆಗಾರರಿಗೆ ಮಾರಾಟಕ್ಕೆ ಆಗುತ್ತಿದ್ದ ತೊಂದರೆ ತಾತ್ಕಾಲಿಕವಾಗಿ ನಿವಾರಣೆಯಾಗಿದೆ. ತ್ವರಿತ ಖರೀದಿ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಕೆಪಿಸಿಸಿ ಸದಸ್ಯ ಕೆ.ಶಾಂತಪ್ಪ, ಜಯಣ್ಣ, ಮಹ್ಮದ ಶಾಲಂ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಜಯವಂತರಾವ್ ಪತಂಗೆ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ ಸೇರಿ ಅನೇಕರಿದ್ದರು.
