ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ 13 ಇ-ಕಾಮರ್ಸ್ ಕಂಪನಿಗಳಿಗೆ ಸರ್ಕಾರಿ ಸಂಸ್ಥೆ ಸಿಸಿಪಿಎ ನೋಟಿಸ್ ಜಾರಿ ಮಾಡಿದೆ.
ಶುಕ್ರವಾರ ಅಧಿಕೃತ ಹೇಳಿಕೆಯನ್ನು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೀಡಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಾಕಿ-ಟಾಕಿಗಳ ಅಕ್ರಮ ಮಾರಾಟದ ವಿರುದ್ಧ ಪ್ರಮುಖ ಡಿಜಿಟಲ್ ಮಾರುಕಟ್ಟೆಗಳಿಗೆ 13 ನೋಟಿಸ್‌ಗಳನ್ನು ನೀಡಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಜಮ್ಮು ಕಾಶ್ಮೀರದ ಟಿಕೆಟ್ ಬುಕಿಂಗ್ ರದ್ದುಗೊಳಿಸಿ ಹಿಮಾಚಲದತ್ತ ಮುಖ ಮಾಡಿದ ಪ್ರವಾಸಿಗರು
ಅಮೆಜಾನ್, ಫ್ಲಿಪ್‌ಕಾರ್ಟ್, ಮೀಶೋ, OLX, ಟ್ರೇಡ್‌ಇಂಡಿಯಾ, ಫೇಸ್‌ಬುಕ್, ಇಂಡಿಯಾಮಾರ್ಟ್, ವರ್ದಾನ್‌ಮಾರ್ಟ್, ಜಿಯೋಮಾರ್ಟ್, ಕೃಷ್ಣಮಾರ್ಟ್, ಚಿಮಿಯಾ, ಟಾಕ್ ಪ್ರೊ ವಾಲಿ ಟಾಕಿ ಮತ್ತು ಮಾಸ್ಕ್‌ಮ್ಯಾನ್ ಟಾಯ್ಸ್‌ಗೆ ನೋಟಿಸ್ ನೀಡಲಾಗಿದೆ.
ಅನುಮೋದನೆ ಇಲ್ಲದೆ ವಾಕಿ-ಟಾಕಿಗಳ ಮಾರಾಟ ಮಾಡುವುದರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ, ಇದು ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. “ವೈರ್‌ಲೆಸ್ ಸಾಧನಗಳ ಮಾರಾಟವು ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳಿಗೆ ಗಮನಾರ್ಹ ಅಪಾಯಗಳನ್ನು ಉಂಟುಮಾಡಬಹುದು” ಎಂದು ಹೇಳಿದ್ದಾರೆ.
