ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಫರ್ನಿಚರ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದ ಯುವಕನೋರ್ವನನ್ನು ಹಿಗ್ಗಾಮುಗ್ಗ ಹೊಡೆದು ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಖಾಲಿ ನಿವೇಶನ ಒಂದರಲ್ಲಿ ಶವ ಎಸೆದು ಯಾರಿಗೂ ಗೊತ್ತಾಗದಂತೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ ಶಿವದಾಸ ಕೋಷ್ಠಿ (16) ಕೊಲೆಯಾಗಿದ್ದ ಯುವಕ ಅನಾಥ ಶವವಾಗಿ ಮೇ 1ರಂದು ಪತ್ತೆಯಾಗಿದ್ದ. ಕೊಳೆತು ನಾರುತಿದ್ದ ಯುವಕನ ಶವವನ್ನು ಪೊಲೀಸರೇ ಹೂತು ಶವಸಂಸ್ಕಾರ ಮಾಡಿದ್ದರು.
ತನಿಖೆ ಮುಂದುವರೆಸಿದಾಗ ಹಲ್ಯಾಳ ರಸ್ತೆಯ ಶೇಡ್ ಒಂದರಲ್ಲಿ ಯುವಕನನ್ನ ಹಿಗ್ಗಾಮುಗ್ಗ ಹೊಡೆದ ಬಗ್ಗೆ ಚೀರಾಟ ಮತ್ತು ಕೂಗಾಟದ ಮಾಹಿತಿಯನ್ನು ಸಾರ್ವಜನಿಕರಿಂದ ಕಲೆ ಹಾಕಿದ ಅಥಣಿ ಪೊಲೀಸರು ಮೊದಲ ಆರೋಪಿ ಅಬ್ದುಲ್ ಬಾರಿ ಮುಲ್ಲಾ ಅವರನ್ನು ಸಂದೇಹದ ಮೇರೆಗೆ ಬಂಧಿಸಿ ವಿಚಾರಿಸಿದಾಗ ಕಳ್ಳತನಕ್ಕೆ ಬಂದಿದ್ದ ಯುವಕನನ್ನು ಹೊಡೆದು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಅಥಣಿ ಪಟ್ಟಣದ ಅಬ್ದುಲಬಾರಿ ಅಬ್ದುಲರಜಾಕ ಮುಲ್ಲಾ (36), ಜುಬೆರಹ್ಮದ ಮಹಮದ್‌ಅಕ್ರಂ ಮೌಲ್ವಿ (34), ಬಿಲಾಲಅಹಮ್ಮದ್ ಮುಕ್ತಾರಅಹಮದ್ ಮೌಲ್ವಿ (25), ಹಜರತಬಿಲಾಲ ಅಹಮ್ಮದಇಸಾಲಿ ನಾಲಬಂದ (28), (27) ដល់ ៥ (36) 2 6 ಜನ ಆರೋಪಿಗಳು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಅಥಣಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಏನಿದು ಕೊಲೆ ಪ್ರಕರಣ : ಮೇ 1ರಂದು ತಾಲೂಕಿನ ಹುಲಗಬಾಳಿ ಸಂಪರ್ಕ ರಸ್ತೆಯ ಪಕ್ಕದ ಬೀರಸಿದ್ದೇಶ್ವರ ನಗರದ ಖುಲ್ಲಾ ಪ್ಲಾಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವವೊಂದು ಪತ್ತೆಯಾಗಿತ್ತು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಥಣಿ ಪೊಲೀಸರು ಕೂಡ ಅನಾಥ ಶವ ಪತ್ತೆಯಾಗಿರುವ ಬಗ್ಗೆ ಪತ್ರಿಕೆಗಳಿಗೂ ಮಾಹಿತಿ ನೀಡಲಾಗಿತ್ತು ಆದರೆ ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಆದರೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಬಿ ಬಸರಗಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನಳ್ಳಿ ಮಾರ್ಗದರ್ಶನದಲ್ಲಿ ಅಥಣಿ ಸಿಪಿಐ ಸಂತೋಷ ಹಳ್ಳೂರ ಅವರ ನೇತೃತ್ವದಲ್ಲಿ ಪಿಎಸ್‌ಐ ನಿರ್ಮಲಪ್ಪ ಉಪ್ಪಾರ, ಕುಮಾರ ಮತ್ತು ಮಲ್ಲಿಕಾರ್ಜುನ ತಳವಾರ ಅವರ ಮುಂದಾಳತ್ವದಲ್ಲಿ ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು.
ಪ್ರಕರಣದ ಕುರಿತು ತನಿಖೆ ಕೈಗೊಂಡಾಗ ಸಾರ್ವಜನಿಕರ ಗುಪ್ತ ಮಾಹಿತಿ ಸಂಗ್ರಹಿಸಿ, ತಾಂತ್ರಿಕ ಸಹಾಯದಿಂದ ವೈಜ್ಞಾನಿಕವಾಗಿ ತನಿಖೆ ನಡೆಸಿದಾಗ ಮೊದಲ ಆರೋಪಿ ಅಬ್ದುಲಬಾರಿ ಮುಲ್ಲಾ ಅವರನ್ನು ಬುಧವಾರ ಬಂಧಿಸಿ ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ಹೆಸರು ಹೇಳಿದ್ದಾನೆ.
ಕೊಲೆಯಾದ ವಿಕಾಸ ಅಥಣಿ ಪಟ್ಟಣದ ಹೊರವಲಯದ ಸಂಕೋನಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿರುವ ನಾಲಬಂದ ಫರ್ನಿಚರ್ ಅಂಗಡಿಗೆ ಕಳ್ಳತನ ಮಾಡಲು ಬಂದಿದ್ದಾಗ ಆತನನ್ನು ಅಬ್ದುಲ್ ಬಾರಿ ಮುಲ್ಲಾ ಅವರ ಸೆಡ್ ನಲ್ಲಿ ವಿಕಾಸ ಶಿವದಾಸ ಕೋಷ್ಠಿ ಈತನ ಕೈ, ಕಾಲುಗಳನ್ನು ಕಟ್ಟಿ ಹಿಗ್ಗಾಮುಗ್ಗ ತಳಿಸಿದ್ದರು.
ಇವರ ಹೊಡಿತಕ್ಕೆ ಅಂಜಿ ವಿಕಾಸ್ ಎಂಬ ಯುವಕ ಎಲ್ಲಾ ಫರ್ನಿಚರ್ ಅಂಗಡಿಗಳಲ್ಲಿ ಆಗಿರುವ ಕಳ್ಳತನವನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡು, ಫರ್ನಿಚರ್ ಅಂಗಡಿಯಲ್ಲಿನ ವಸ್ತುಗಳನ್ನು ಕಳ್ಳತನ ಮಾಡಿ ತೀರ್ಥ ಗ್ರಾಮದಲ್ಲಿ ಮುಚ್ಚಿ ಇಟ್ಟಿರುವುದಾಗಿ ತಿಳಿಸಿದ್ದನು ಆದರೆ ಆರೋಪಿಗಳು ತಮ್ಮ ವಾಹನಗಳಲ್ಲಿ ಈ ಯುವಕನನ್ನು ಸತ್ತಿ ಗ್ರಾಮಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಯಾವುದೇ ಕದ್ದ ವಸ್ತುಗಳು ಇಲ್ಲದೆ ಇರುವುದನ್ನು ಕಂಡು ಮತ್ತೆ ಅದೇ ಶೆಡ್ಡಿಗೆ ಕರೆದುಕೊಂಡು ಬಂದು ಹೊಡೆದು ಕೊಲೆ ಮಾಡಿರುವುದಾಗಿ ಬಂಧಿತರು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.