ರಾಯಚೂರು | ಮೇ 17,18 ರಂದು ಸಿಂಧನೂರಿನಲ್ಲಿ ಮೇ ಸಾಹಿತ್ಯ ಮೇಳ

Date:

Advertisements

ಮೇ 17 ,18 ರಂದು ಸಿಂಧನೂರು ನಗರದ ಸತ್ಯ ಗಾರ್ಡ್‍ನಲ್ಲಿ ಮೇ ಮೆದಕಿನಾಳ ಭೂ ಹೋರಾಟದ ನೆನಪಿಗಾಗಿ ಅಸಮಾನತೆ ಭಾರತ, ಸಮಾನತೆಗಾಗಿ ಎಂದು ಮೇ ಸಾಹಿತ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಸಾಹಿತ್ಯದ ಸಂಚಾಲಕರಾದ ಬಸವರಾಜ ಸುಳಿಭಾವಿ ಹೇಳಿದರು.

ನಗರದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ ಅವರು, ಮೇಳದ ಉದ್ಘಾಟನೆಯನ್ನು ಮೇದಕಿನಾಳ ಭೂ ಹೋರಾಟವು ಜಿಲ್ಲೆಯ ಹಾಗೂ ಕರ್ನಾಟಕದ ಐಕ್ಯ ಹೋರಾಟವೆಂದು ಈ ಹೋರಾಟದಲ್ಲಿ ಭಾಗವಹಿಸಿದ್ದ ಸಂಗಮ್ಮ, ದಲಿತ ಚಳುವಳಿ ಭೀಮಣ್ಣ ನಗನೂರು, ಕಾರ್ಮಿಕ ಚಳುವಳಿಯ ನರಸಿಂಹಪ್ಪ, ಮದ್ಯ ವಿರೋಧಿ ಹೋರಾಟ ಸಮಿತಿಯ ಚಿನ್ನಮ್ಮ ಮುದ್ದನಗುಡ್ಡಿ, ರೈತ ಚಳುವಳಿಯ ತಿಮ್ಮನಗೌಡ ಚಿಲ್ಕರಾಗಿ ಮಾಡಲಿದ್ದಾರೆ ಎಂದರು.

ಕಾರ್ಯಕ್ರಮದ ದಿಕ್ಸೂಚಿ ಮಾತುಗಳನ್ನು ಮುಂಬೈನ ರಾಮ್ ಪುನಿಯಾನಿ,ಔರಂಗಾಬಾದ್‍ನ ಮಾಲತಿ ವರಾಳೆ, ನವದೆಹಲಿಯ ಶಂಶುಲ್ ಇಸ್ಲಾಂ, ಬೆಂಗಳೂರಿನ ಎ.ನಾರಾಯಣ ಮಾತನಾಡಲಿದ್ದಾರೆ ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿನ ಸಮಸ್ಯೆ : ಶಾಸಕ ಮಾನಪ್ಪ ವಜ್ಜಲಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು

17 ರಂದು ಹೊಸಪೇಟೆಯ ಬಹುತ್ವ ಪ್ರತಿಷ್ಠಾನದಿಂದ ನಾ ಯಾರು? ರಂಗ ಪ್ರಸ್ತುತಿ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಅಸಮಾನತೆ ಮತ್ತು ಸಂಘರ್ಷ ಹೊರಳು ನೋಟ ಕುರಿತು ನಡೆಯಲಿದೆ. ವರ್ಗನೆಲೆ ಕುರಿತು ರವೀಂದ್ರ ಹಳಿಂಗಳಿ, ಜಾತಿ ನೆಲೆ ಕುರಿತು ಸಿ.ಜಿ.ಲಕ್ಷ್ಮೀಪತಿ, ಬಿಂಗ ನೆಲೆ ಕೆ.ಎಸ್.ಲಕ್ಷ್ಮೀ, ಭಾಷಾ ನೆಲೆ ಕುರಿತು ರೆಹಮತ್ ತರೀಕೆರೆ ಮಾತನಾಡಲಿದ್ದಾರೆ ಎಂದು ಹೇಳಿದರು.

ಮೇ 18 ರಂದು ಬೆಳಿಗ್ಗೆ 9 ಗಂಟೆಗೆ ಕವಿಗೋಷ್ಟಿ ನಡೆಯಲಿದೆ. ಆಶಯ ನುಡಿಗಳನ್ನು ಡಾರ್ಜಲಿಂಗ್‍ನ ಮನೋಜ್ ಭೋಗಾಟ ಪ್ರಸ್ತುತಪಡಿಸಲಿದ್ದಾರೆ. 11 ಗಂಟೆಗೆ ಅಭಿವೃದ್ದಿಯ ಸತ್ಯ- ಮಿಥ್ಯ ವಿಷಯದ ಮೇಲೆ ಗೋಷ್ಟಿ ನಡೆಯಲಿದೆ. ಅಭಿವೃದ್ದಿಯ ಪರಿಕಲ್ಪನೆ, ವಾಸ್ತವಾಂಶಗಳು ಕುರಿತು ನಾಗೇಗೌಡ ಕೀಲಾರ, ಕಲ್ಯಾಣ ಕರ್ನಾಟಕದ ಅಭಿವೃದ್ದಿ ಕುರಿತು ಚಂದ್ರಶೇಖರ ಗೋರೆಬಾಳ, ಉತ್ತರ ಕರ್ನಾಟಕದ ಕುರಿತು ಬಿ.ಎಸ್.ಸೋಪ್ಪಿನ ಮಾತನಾಡಲಿದ್ದಾರೆ. ಅಲ್ಲದೇ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೋರಾಟಗಾರರು, ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಮುಖಂಡರಾದ ಬಾಬು ಬಂಡಾರಿಗಲ್, ದೇವೆಂದ್ರಗೌಡ, ಎಸ್.ಮಾರೆಪ್ಪ, ಶ್ರೀನಿವಾಸ ಕಲವಲದೊಡ್ಡಿ, ಡಿ.ಎಚ್.ಕಂಬಳಿ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X