ಜಮ್ಮು ಮತ್ತು ಕಾಶ್ಮೀರದ ಪಹಲಾಮ್ನಲ್ಲಿ ನಡದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿರುವ ‘ಆಪರೇಷನ್ಸ್ ಸಿಂಧೂರ’ ಕಾರ್ಯಾಚರಣೆ ಬೆಂಬಲಿಸಿ, ಯೋಧರ ಶ್ರೇಯಸ್ಸಿಗೆ ಪ್ರಾರ್ಥಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ತಾಲೂಕಿನ ಎಲ್ಲ ಗ್ರಾಮಗಳ ಗ್ರಾಮದೇವಿ ದೇವಸ್ಥಾನಗಳಲ್ಲಿ ಏಕಕಾಲಕ್ಕೆ ಪೂಜೆ ಸಲ್ಲಿಸಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಬಾಳಂಬಿಡ ಗ್ರಾಮದಲ್ಲಿ ಗ್ರಾಮದೇವಿ ಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದೇವಿಗೆ ರಾಷ್ಟ್ರಧ್ವಜ ಸಮರ್ಪಿಸುವ ಮೂಲಕ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
“ಉಗ್ರಗಾಮಿಗಳ ಹುಟ್ಟಡಗಿಸಲಿ, ಯೋಧರಿಗೆ ಶ್ರೇಯಸ್ಸು ಸಿಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ವಿಶೇಷ ಪ್ರಾರ್ಥನೆ ಗ್ರಾಮಗಳ ಗ್ರಾಮದೇವಿ ದೇವಸ್ಥಾನಗಳು, ಏಕಕಾಲಕ್ಕೆ ಪೂಜೆ ಸಲ್ಲಿಸುವ ಮೂಲಕ ಯೋಧರ ಒಳಿತಿಗೆ ಪ್ರಾರ್ಥನೆ ಸಲ್ಲಿಸಲಾಯ್ತು. ಆತಂಕವಾದ ಅಂತ್ಯಗೊಳಿಸಿ ನವಭಾರತ ಕಟ್ಟಬೇಕಾದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಸೇನೆಯಲ್ಲಿ ಸಹ ವಿವಿಧ ಧರ್ಮಗಳಿಗೆ ಸೇರಿರುವ ಯೋಧರಿದ್ದು ದೇಶಾಭಿಮಾನ ಮೆರೆದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ” ಎಂದು ಗ್ರಾಮಸ್ಥರು ಹೇಳಿದರು.
“ನಮ್ಮದು ವಿವಿಧತೆಯಲ್ಲಿ ಏಕತೆ ಸಾರುವ ಪುಣ್ಯಭೂಮಿಯಾಗಿದೆ. ಈ ವಿಶ್ವಾಸವನ್ನು ಎಲ್ಲರಲ್ಲಿಯೂ ಸಹ ಮೂಡಿಸಿದರೆ ಭಾರತ ವಿಶ್ವಗುರುವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾವೆಲ್ಲರೂ ಭಾರತದ ಸರ್ಕಾರ ಮತ್ತು ಸೇನೆಯೊಂದಿಗೆ ಗಟ್ಟಿಯಾಗಿ ನಿಂತು ಈ ಹೋರಾಟದಲ್ಲಿ ವಿಜಯ ಸಾಧಿಸೋಣ” ಎಂದು ಗ್ರಾಮಸ್ಥರು ಹೇಳಿದರು.
ಅವರು ಅಪರೇಷನ್ಸ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹೇಮರೆಡ್ಡಿ ಮಲ್ಲಮ್ಮ ಬದುಕು ಮನುಕುಲಕ್ಕೆ ಆದರ್ಶ : ಸಚಿವ ರಹೀಂ ಖಾನ್
ಈ ಸಂದರ್ಭದಲ್ಲಿ ಶೇಕಯ್ಯ ಚಿಕ್ಕಮಠ, ನಾಗಯ್ಯ ಹಿರೇಮಠ, ರಾಜು ಬಾರ್ಕಿ, ಬಸವರಾಜ್ ದೊಡ್ಮನಿ, ಶಿವಪ್ಪ ಬಾರ್ಕಿ, ಪಕೀರಪ್ಪ ಚಿಕ್ಕಜ್ಜನವರ, ರಾಜೇಂದ್ರ ಚಿನ್ನಣ್ಣನವರ್, ಮಾರುತಿ ದೇವಸುರ, ಗುಡ್ಡಪ್ಪ ಕೆಂಚಣ್ಣನವರ, ಶಿವಪುತ್ರಪ್ಪ ಹರಿಜನ, ರುದ್ರಪ್ಪ ಹೇರೂರು, ನಾಗರಾಜ ಬೊಮ್ಮಣ್ಣನವರ, ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.