ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ತಹಶೀಲ್ದಾರ್ ಅವರ ಭ್ರಷ್ಟಾಚಾರ ಹಾಗೂ ಅನಾಗರೀಕ ವರ್ತನೆಯ ಆರೋಪದ ಬಗ್ಗೆ ಬುಧವಾರದಂದು ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ಭ್ರಷ್ಟಾಚಾರ ವಿರೋಧಿ ಆಂದೋಲನ ವತಿಯಿಂದ ಕರೆ ಕೊಟ್ಟಿದೆ.
ರೈತರ ಜಮೀನನ್ನು ದುರಸ್ತು ಮಾಡಿಕೊಡಲು ಎಕರೆಗೆ ಲಕ್ಷಾಂತರ ರೂಪಾಯಿಗಳನ್ನು ಹಳ್ಳಿಗೆ ಹೋಗಿ ಕೇಳುತ್ತಿದ್ದಾರೆ, ಸರ್ಕಾರ ಪೋಡಿ ಮುಕ್ತ ಗ್ರಾಮಗಳನ್ನಾಗಿ ಘೋಷಿಸಿದೆ. ಆದರೇ, ರೈತರ ಜಮೀನನ್ನು ದುರಸ್ತು ಮಾಡಿಕೊಡುವ ಬದಲು ಭ್ರಷ್ಟಾಚಾರ ಮಾಡಲು ಮುಂದಾಗಿದ್ದಾರೆ, ತಹಶೀಲ್ದಾರ್ ಆದವರೇ, ಈ ರೀತಿ ಆದರೆ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಆಗಿದೆ ಎಂದು ಭ್ರಷ್ಟಚಾರ ವಿರೋಧಿ ಆಂದೋಲನ ಮುಖಂಡರು ತಿಳಿಸಿದರು.

ಸರ್ಕಾರವನ್ನು ಸೂಳೆ ಸರ್ಕಾರ ಕಾಂಗ್ರೆಸ್ ಅನ್ನೋ ಆಡಿಯೋ ಒಬ್ಬ ಕರ್ನಾಟಕ ಆಡಳಿತ ಸೇವೆ (KA.S) ಅಧಿಕಾರಿಯೊಬ್ಬ ಈ ರೀತಿ ಮಾತನಾಡಿದರೆ ಸರ್ಕಾರದ ಆದೇಶಗಳನ್ನು ನೀತಿ ನಿಯಮಗಳನ್ನು ಯಾವ ರೀತಿ ಗೌರವಿಸಬಹುದು. ಈ ತಾಲ್ಲೂಕಿನ ರೈತರನ್ನು, ನಾಗರೀಕರನ್ನು ಹಾಗೂ ಸೂಳೆ ಸರ್ಕಾರ ಅಂದರೆ ಮಹಿಳೆಯರನ್ನು ಅತ್ಯಂತ ಕೀಳಾಗಿ ಪರಿಗಣಿಸಿ ಘನತೆಗೆ ಕುಂದುಂಟು ಮಾಡಿದ್ದಾರೆ. ಈ ಕುರಿತು ಸಂಬಂದ ಪಟ್ಟವರಿಗೆ ದೂರು ನೀಡಿದರೂ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಜನವಸತಿ ಪ್ರದೇಶದಲ್ಲಿ ಅಪರಿಚಿತ ಕಾರು ಪತ್ತೆ
ಈ ಕುರಿತು ಚಳುವಳಿಗೆ ಹಾಸನ ಜಿಲ್ಲೆಯಿಂದ ರೈತ, ಕಾರ್ಮಿಕ, ದಲಿತ ಹಾಗೂ ಜನಪರ ಸಂಘಟನೆಗಳ ಮುಖಂಡರು ಬೆಂಬಲಿಸಿದ್ದಾರೆ. ಹಾಗೆಯೇ, ಚನ್ನರಾಯಪಟ್ಟಣ ತಾಲೂಕಿನ ರೈತ-ಕಾರ್ಮಿಕ-ದಲಿತ-ಜನಪರ -ಪ್ರಗತಿಪರ ಹಾಗೂ ಎಲ್ಲಾ ಸಂಘಟನೆಗಳು ಭಾಗವಹಿಸಿ ಪಾಲ್ಗೊಳ್ಳಬೇಕೆಂದು ಭ್ರಷ್ಟಾಚಾರಿ ವಿರೋಧಿ ಆಂದೋಲನ ವತಿಯಿಂದ ತಿಳಿಸಿದರು.
