ಮೈಸೂರು ನಗರದ ಕುಕ್ಕರಹಳ್ಳಿ ಬಳಿ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಸುಯೋಗ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ‘ ವಿಶ್ವ ತಾಯಂದಿರ ದಿನಾಚರಣೆ ‘ ಅಂಗವಾಗಿ ತಾಯಂದಿರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಸಾ. ರಾ. ಮಹೇಶ್ ‘ ತಾಯಿಗೆ ಸಮನಾದ ವ್ಯಕ್ತಿ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ ‘ ಎಂದರು.
” ಒಂಬತ್ತು ತಿಂಗಳು ಹೆತ್ತು, ಹೊತ್ತು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಪೋಷಿಸುವ ತಾಯಿಗೆ ಜಗತ್ತಿನಲ್ಲಿ ಸಮಾನವಾದ ಮತ್ತೊಬ್ಬ ವ್ಯಕ್ತಿಯಿರಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು. ವರ್ಣಿಸಲು ಅಸಾಧ್ಯವಾದ ವ್ಯಕ್ತಿ ತಾಯಿಯಾಗಿದ್ದಾಳೆ. ಅವಳನ್ನು ಇಳಿ ವಯಸ್ಸಲ್ಲಿ ಸರಿಯಾಗಿ ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ನೂಕುವ ಕೆಲಸ ಮಾಡಬಾರದು. ಹಿರಿಯ ಜೀವಗಳ ಮನಸ್ಸನ್ನು ನೋಯಿಸದೆ ಅವರನ್ನು ಆರೋಗ್ಯವಂತರನ್ನಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ” ಎಂದು ಹೇಳಿದರು.
ವೈದ್ಯರಾದ ಡಾ. ಎಸ್. ಪಿ. ಯೋಗಣ್ಣ ಮಾತನಾಡಿ ‘ ಎಲ್ಲರಿಗೂ ಆರೋಗ್ಯವೇ ಭಾಗ್ಯವಾಗಿದ್ದು. ತಾಯಂದಿರು ಆರೋಗ್ಯವಂತರಾಗಿದ್ದರೆ ತಮ್ಮ ಕುಟುಂಬವನ್ನೇ ಆರೋಗ್ಯವಂತ ಕುಟುಂಬವನ್ನಾಗಿ ಕಾಪಾಡಿಕೊಳ್ಳಬಹುದು. ಮೂಡನಂಬಿಕೆಗಳಿಗೆ ಒಳಗಾಗಿ ಆಸ್ಪತ್ರೆಗೆ ತೋರಿಸದೆ ಅನಾರೋಗ್ಯದಿಂದ ಬಳಲುವುದು ಸರಿಯಲ್ಲ. ವೈದ್ಯರನ್ನು ಸಂಪರ್ಕಿಸಿ ಎಂದು ಕಿವಿಮಾತು ‘ ಹೇಳಿದರು.

ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನ ಭಾಗಿಯಾಗಿ ಸದುಪಯೋಗ ಪಡೆದುಕೊಂಡರು.
ಈ ವಿಶೇಷ ವರದಿ ಓದಿದ್ದೀರಾ? ಮೈಸೂರು | ಕುಸಿಯುವ ಹಂತದಲ್ಲಿ ನೀರಿನ ಟ್ಯಾಂಕ್; ತೆರವುಗೊಳಿಸುವುದೇ ಪುರಸಭೆ
ಸ್ತ್ರೀರೋಗ ತಜ್ಞೆ ಡಾ. ಗೀತಾ, ಡಾ. ಅನುಷ್ಯ, ಪ್ರಿಯ, ಜೀವಾದರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ದುರ್ಗಾ ಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸುಜಾತ, ಕೋಮಲ, ವನಮಾಲ, ನೀಲಾ, ಕಾಮಾಕ್ಷಿ ಹಾಗೂ ಇನ್ನಿತರರು ಇದ್ದರು.