ಇಂದು ಶಿವಮೊಗ್ಗದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತ, ಪಾಕಿಸ್ತಾನವನ್ನ ಭೂಪಟದಿಂದಲೇ ಸರ್ವನಾಶ ಮಾಡಬೇಕು ಎಂದು ಶಿವರಾಜ್ ತಂಗಡಗಿ ಗುಡುಗಿದರು.
ಭಾರತ ಪಾಕಿಸ್ತಾನಕ್ಕೆ ಬುದ್ದಿಕಲಿಸದಿದ್ದರೆ ತನ್ನ ಕೆಲಸವನ್ನ ಅದು ಮುಂದುವರೆಸುತ್ತದೆ. ಭಾರತೀಯ ಸೇನೆ ಬುದ್ದಿ ಕಲಿಸುವಂತಹ ಕೆಲಸವನ್ನ ಮಾಡಬೇಕು. ಭಯೋತ್ಪಾದನೆಯನ್ನ ಪೂರ್ಣ ಪ್ರಮಾಣದಲ್ಲಿ ನಿರ್ಮೂಲನೆ ಮಾಡಬೇಕು ಎಂದು ತಿಳಿಸಿದರು.
ಮೊದಲು ದೇಶ ಮುಖ್ಯ, ದೇಶದ ಐಕ್ಯತೆ ವಿಚಾರದ ಬಗ್ಗೆ ಯಾರಾದರೂ ಎದುರು ಬಂದರೆ ಅಥವಾ ಮುಳ್ಳಾಗಿ ಪರಿಣಮಿಸಿದರೆ, ಬಿಡುವ ಮಾತೇ ಇಲ್ಲ.
ಈ ವಿಷಯದಲ್ಲಿ ಕಾಂಗ್ರೆಸ್ ನ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಡಿಕೆಶಿ ತಿರಂಗ ಯಾತ್ರೆ ನಡೆಸಿದ್ದಾರೆ. ಈ ಮೂಲಕ ಸೈನೆಗೆ ಶಕ್ತಿ ನೀಡಿದ್ದೇವೆ. ಎರಡು ದಿನಗಳಲ್ಲಿ ಪಾಕಿಸ್ತಾನವನ್ನ ಭೂಪಟದಿಂದ ನಿರ್ನಾಮವಾಗಬೇಕು ಎಂದರು.