ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಹಾಗೂ ಅದರೊಡನೆ ಹೋರಾಡಿ.ಬೆಂಕಿಯನ್ನು ನಂದಿಸಲು ವಿಶೇಷವಾಗಿ ಆಯೋಜಿಸಿರುವುದೇ ಅಗ್ನಿಶಾಮಕ ಠಾಣೆ. ಈ ರೀತಿಯ ಠಾಣೆಗಳು ದೊಡ್ಡ ದೊಡ್ಡ ಪಟ್ಟಣಗಳಲ್ಲಿದ್ದು, ತನ್ನ ಸೇವೆಯನ್ನು ಪಟ್ಟಣಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ಕಾರ್ಯನಿರ್ವಹಿಸುತ್ತದೆ. ಆಕಸ್ಮಿಕದಿಂದ ಉಂಟಾದ ಬೆಂಕಿಯನ್ನು ಆರಿಸುವುದು ಮಾತ್ರವಲ್ಲದೆ ಬೇರೆಡೆ ಪ್ರದೇಶಗಳಿಗೆ ಹರಡದಂತೆಯೂ ಈ ಅಗ್ನಿ ಶಾಮಕ ದಳ ನೋಡಿಕೊಳ್ಳುತ್ತದೆ.

ಆದರೇ, ಇಲ್ಲೊಂದು ವಿಚಿತ್ರ ಅನ್ನಿಸಬಹುದು. ಎಲ್ಲೇ ಬೆಂಕಿ ನಂದಿಸಲು ಬಳಸುವ ಅಗ್ನಿಶಾಮಕ ವಾಹನದಲ್ಲಿ ನೀರು ಇಲ್ಲದೆ ಪರದಾಡುತ್ತಿರುವ ಠಾಣಾ ಸಿಬ್ಬಂದಿಯವರು. ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿದರೂ ಅದನ್ನು ನಂದಿಸಲು ನೀರಿಲ್ಲದೆ ಕೆರೆ, ಹೊಳೆ, ಭಾಗದಿಂದ ತುಂಬಿಸಿ ಕಾರ್ಯಕ್ಕೆ ತೆಗೆದುಕೊಂಡು ಹೋಗುವ ದುಸ್ಥಿತಿ ಎದುರಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಈ ತಾಲ್ಲೂಕಿನಲ್ಲಿ ಅತಿ ತುರ್ತಾಗಿ ಅಗ್ನಿಶಾಮಕ ಠಾಣೆ ಬೇಕೆಂದು ಹಲವಾರು ಬಾರಿ ರೈತ ಸಂಘ ಹಾಗೂ ಇನ್ನೂ ಇತರೆ ಸಂಘಟನೆಗಳು ಹೋರಾಟ ನಡೆಸಿದ್ದರಿಂದ 2009ರಲ್ಲಿ ಮಾಜಿ ಶಾಸಕ ರುದ್ರೇಶಗೌಡರ ನೇತೃತ್ವದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡಲಾಗಿತ್ತು. ಹಾಗೆಯೇ, ಸಿಬ್ಬಂದಿಗಳಿಗೆ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗಿತ್ತು. ಸುಮಾರು 21 ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗಿತ್ತು. ಕುಡಿಯುವ ನೀರಿಗೆ ಬೋರ ವೆಲ್ ಹಾಗೂ ತೊಳಲು ಗ್ರಾ.ಪಂ. ನಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಅದು ಈಗ ನೀರಿಲ್ಲದೆ ಅಸ್ತವ್ಯಸ್ತವಾಗಿದೆ.

15 ವರ್ಷ ಹಿಂದೆ ನೀಡಿದ್ದ ಎರಡು ಅಗ್ನಿ ಶಾಮಕ ವಾಹನ ಈಗ ಏನೂ ಪ್ರಯೋಜನವಿಲ್ಲದಂತಾಗಿದೆ. ಅಗ್ನಿ ಅವಘಡ ಸಂಭವಿಸಿದರೆ ಪಕ್ಕದ ತಾಲ್ಲೂಕಿನ ವಾಹನದಲ್ಲಿ ಬೆಂಕಿ ನಿಲ್ಲಿಸುವ ಕಾರ್ಯವನ್ನು ಮಾಡಬೇಕಿದೆ. ಬೋರ್ ವೆಲ್ ನಿಂತಿರುವುದರಿಂದ ನೀರನ್ನು ಭರ್ತಿ ಮಾಡಲು ಯಗಚಿ ಜಲಾಶಯ ಹಾಗೂ ವಿಷ್ಣು ಸಮುದ್ರ ಕೆರೆಯಲ್ಲಿ ವಾಹನವನ್ನು ಭರ್ತಿ ಮಾಡುವ ಕೆಲಸವಾಗಿತ್ತಿದೆ.

ನಮಗೆ ಇಲಾಖೆಯಿಂದ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಎರಡು ಬೋರ್ ವೆಲ್ ನೀಡಿದ್ದರೂ ಸಹ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿದೆ. ಎರಡು ದಿನಗಳಿಗೊಮ್ಮೆ ಗ್ರಾ.ಪಂ. ಇಂದ ನೀರನ್ನು ಒದಗಿಸುತ್ತಾರೆ. ಅದು ಸಹ ಸಾಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮೇಲಾಧಿಕಾರಿ ಹಾಗೂ ಶಾಸಕರಲ್ಲಿ ಈಗಾಗಲೇ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಲಾಗಿದೆ ಎಂದು ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಧರ್ಮಯ್ಯನವರು ಮಾಧ್ಯಮಗಳೊಂದಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಗೌರಿ ಲಂಕೇಶ್ ವೇದಿಕೆಯಲ್ಲಿ ಸರಳ ವೈಚಾರಿಕ ವಿವಾಹ: ವಧು-ವರರಲ್ಲಿ ಹೊಸ ತೇಜಸ್ಸನ್ನು ತುಂಬಿದೆ
ಬೇಲೂರು ತಾಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿರುವ ಸಮಸ್ಯೆಯನ್ನು ಸಂಬಂಧಿಸಿದವರು ಆದಷ್ಟು ಬೇಗ ಬಗೆ ಅರಿಯಲಿ ಎಂದು ಆಶಿಸೋಣ.