ಹಾಸನ l ಬೆಂಕಿ ನಂದಿಸುವ ಅಗ್ನಿಶಾಮಕ ಠಾಣೆಯಲ್ಲೇ, ನೀರಿನ ಪರದಾಟ

Date:

ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಹಾಗೂ ಅದರೊಡನೆ ಹೋರಾಡಿ.ಬೆಂಕಿಯನ್ನು ನಂದಿಸಲು ವಿಶೇಷವಾಗಿ ಆಯೋಜಿಸಿರುವುದೇ ಅಗ್ನಿಶಾಮಕ ಠಾಣೆ. ಈ ರೀತಿಯ ಠಾಣೆಗಳು ದೊಡ್ಡ ದೊಡ್ಡ ಪಟ್ಟಣಗಳಲ್ಲಿದ್ದು, ತನ್ನ ಸೇವೆಯನ್ನು ಪಟ್ಟಣಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ಕಾರ್ಯನಿರ್ವಹಿಸುತ್ತದೆ. ಆಕಸ್ಮಿಕದಿಂದ ಉಂಟಾದ ಬೆಂಕಿಯನ್ನು ಆರಿಸುವುದು ಮಾತ್ರವಲ್ಲದೆ ಬೇರೆಡೆ ಪ್ರದೇಶಗಳಿಗೆ ಹರಡದಂತೆಯೂ ಈ ಅಗ್ನಿ ಶಾಮಕ ದಳ ನೋಡಿಕೊಳ್ಳುತ್ತದೆ. 

- Advertisement -
Screenshot 2025 05 11 22 09 44 62 680d03679600f7af0b4c700c6b270fe7

ಆದರೇ, ಇಲ್ಲೊಂದು ವಿಚಿತ್ರ ಅನ್ನಿಸಬಹುದು. ಎಲ್ಲೇ ಬೆಂಕಿ ನಂದಿಸಲು ಬಳಸುವ ಅಗ್ನಿಶಾಮಕ ವಾಹನದಲ್ಲಿ ನೀರು ಇಲ್ಲದೆ ಪರದಾಡುತ್ತಿರುವ ಠಾಣಾ ಸಿಬ್ಬಂದಿಯವರು. ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿದರೂ ಅದನ್ನು ನಂದಿಸಲು ನೀರಿಲ್ಲದೆ ಕೆರೆ, ಹೊಳೆ, ಭಾಗದಿಂದ ತುಂಬಿಸಿ ಕಾರ್ಯಕ್ಕೆ ತೆಗೆದುಕೊಂಡು ಹೋಗುವ ದುಸ್ಥಿತಿ ಎದುರಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಈ ತಾಲ್ಲೂಕಿನಲ್ಲಿ ಅತಿ ತುರ್ತಾಗಿ ಅಗ್ನಿಶಾಮಕ ಠಾಣೆ ಬೇಕೆಂದು ಹಲವಾರು ಬಾರಿ ರೈತ ಸಂಘ ಹಾಗೂ ಇನ್ನೂ ಇತರೆ ಸಂಘಟನೆಗಳು ಹೋರಾಟ ನಡೆಸಿದ್ದರಿಂದ 2009ರಲ್ಲಿ ಮಾಜಿ ಶಾಸಕ ರುದ್ರೇಶಗೌಡರ ನೇತೃತ್ವದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡಲಾಗಿತ್ತು. ಹಾಗೆಯೇ, ಸಿಬ್ಬಂದಿಗಳಿಗೆ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗಿತ್ತು. ಸುಮಾರು 21 ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗಿತ್ತು. ಕುಡಿಯುವ ನೀರಿಗೆ ಬೋರ ವೆಲ್ ಹಾಗೂ ತೊಳಲು ಗ್ರಾ.ಪಂ. ನಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಅದು ಈಗ ನೀರಿಲ್ಲದೆ ಅಸ್ತವ್ಯಸ್ತವಾಗಿದೆ.

Screenshot 2025 05 11 22 15 15 33 680d03679600f7af0b4c700c6b270fe7

15 ವರ್ಷ ಹಿಂದೆ ನೀಡಿದ್ದ ಎರಡು ಅಗ್ನಿ ಶಾಮಕ ವಾಹನ ಈಗ ಏನೂ ಪ್ರಯೋಜನವಿಲ್ಲದಂತಾಗಿದೆ. ಅಗ್ನಿ ಅವಘಡ ಸಂಭವಿಸಿದರೆ ಪಕ್ಕದ ತಾಲ್ಲೂಕಿನ ವಾಹನದಲ್ಲಿ ಬೆಂಕಿ ನಿಲ್ಲಿಸುವ ಕಾರ್ಯವನ್ನು ಮಾಡಬೇಕಿದೆ. ಬೋರ್ ವೆಲ್ ನಿಂತಿರುವುದರಿಂದ ನೀರನ್ನು ಭರ್ತಿ ಮಾಡಲು ಯಗಚಿ ಜಲಾಶಯ ಹಾಗೂ ವಿಷ್ಣು ಸಮುದ್ರ ಕೆರೆಯಲ್ಲಿ ವಾಹನವನ್ನು ಭರ್ತಿ ಮಾಡುವ ಕೆಲಸವಾಗಿತ್ತಿದೆ.

Screenshot 2025 05 11 22 03 41 17 40deb401b9ffe8e1df2f1cc5ba480b12

ನಮಗೆ ಇಲಾಖೆಯಿಂದ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಎರಡು ಬೋರ್ ವೆಲ್ ನೀಡಿದ್ದರೂ ಸಹ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿದೆ. ಎರಡು ದಿನಗಳಿಗೊಮ್ಮೆ ಗ್ರಾ.ಪಂ. ಇಂದ ನೀರನ್ನು ಒದಗಿಸುತ್ತಾರೆ. ಅದು ಸಹ ಸಾಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮೇಲಾಧಿಕಾರಿ ಹಾಗೂ ಶಾಸಕರಲ್ಲಿ ಈಗಾಗಲೇ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಲಾಗಿದೆ ಎಂದು ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಧರ್ಮಯ್ಯನವರು ಮಾಧ್ಯಮಗಳೊಂದಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿದ್ದೀರಾ?ಹಾಸನ l ಗೌರಿ ಲಂಕೇಶ್ ವೇದಿಕೆಯಲ್ಲಿ ಸರಳ ವೈಚಾರಿಕ ವಿವಾಹ: ವಧು-ವರರಲ್ಲಿ ಹೊಸ ತೇಜಸ್ಸನ್ನು ತುಂಬಿದೆ

ಬೇಲೂರು ತಾಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿರುವ ಸಮಸ್ಯೆಯನ್ನು ಸಂಬಂಧಿಸಿದವರು ಆದಷ್ಟು ಬೇಗ ಬಗೆ ಅರಿಯಲಿ ಎಂದು ಆಶಿಸೋಣ.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾಕ್ಕೆ ಕಲ್ಲು ತೂರಾಟ ಆರೋಪ; ಪ್ರಕರಣ ದಾಖಲು

ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಹಾಗೂ ಮದರಸಾಕ್ಕೆ ಕಲ್ಲು ತೂರಾಟ...

ರಾಯಚೂರು | ಮಳೆಗಾಲ ಮುಗಿಯುವ ಮುನ್ನವೇ ಬಿಸಿಲಿನ ತಾಪ; ರಾಯಚೂರಿನಲ್ಲಿ 37.6 ಡಿಗ್ರಿ ಉಷ್ಣಾಂಶ

ಸೆಪ್ಟೆಂಬರ್‌ ಮಳೆಗಾಲ ಮುಕ್ತಾಯವಾಗಿ, ಅಕ್ಟೋಬರ್‌ನಲ್ಲಿ ಚಳಿಗಾಲ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ...

ಕಲಬುರಗಿ | ಔಷಧೀಯ ಸಸ್ಯಗಳ ಪರಿಚಯದೊಂದಿಗೆ ಪರಿಸರ ಸಂರಕ್ಷಣೆಗೆ ಕರೆ

ಔಷಧೀಯ ಹಾಗೂ ಆಯುರ್ವೇದಿಕ ಗಿಡಮೂಲಿಕೆಗಳ ಮಹತ್ವ, ಸಾಂಪ್ರದಾಯಿಕ ಬಳಕೆ ಮತ್ತು ಆರೋಗ್ಯದ...