ಮೈಸೂರು ಜಿಲ್ಲೆ, ನಂಜನಗೂಡಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ ‘ ಭಾರತ ದೇಶದ ಉದ್ದಗಲಕ್ಕೂ ಸಂವಿಧಾನವನ್ನು ಆರಾಧಿಸುತ್ತಿದ್ದಾರೆ ‘ ಎಂದರು.
” ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದವರು ಕೂಡ ಸಂವಿಧಾನ ಪೀಠಿಕೆಯನ್ನು ಪ್ರತಿ ದಿನ ಓದುತ್ತಿದ್ದಾರೆ. ಸಂವಿಧಾನವದಲ್ಲಿ ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಆಶಯ ಅಡಗಿದೆ. ಎಲ್ಲರ ಹಕ್ಕುಗಳನ್ನು ರಕ್ಷಣೆ ಮಾಡುವ ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸಾರುತ್ತದೆ. ಈ ಅಂಶಗಳ ಮೇಲೆ ಭಾರತದ ಜನಜೀವನ ನಡೆಯುತ್ತಿದೆ.”
” ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಆಡಳಿತದಲ್ಲಿ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು. ಅಂತಹ ಸಂದರ್ಭದಲ್ಲಿ ಆರ್ಥಿಕ ತಜ್ಞರ ಸಭೆಯಲ್ಲಿ ಅಂಬೇಡ್ಕರ್ ಅವರು ಭಾಗವಹಿಸಿ ಭಾರತೀಯ ರೂಪಾಯಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾರೆ. ಅವರ ಸಲಹೆ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗುತ್ತದೆ. “

ದೇಶದ ಎಲ್ಲಾ ಜನರ ಏಳಿಗೆಗೆ ಸಂವಿಧಾನ ರಚಿಸಿ ಪ್ರತಿಯೊಬ್ಬರ ಸಮಾನ ಹಕ್ಕುಗಳ ರಕ್ಷಣೆಗೆ ಮುಂದಾದ ಬಾಬಾ ಸಾಹೆಬರನ್ನು ಒಂದು ವರ್ಗಕ್ಕೆ ಏಕೆ ಸೀಮಿತ ಮಾಡಲಾಗುತ್ತಿದೆ. ಸದಾ ಕಾಲ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅವರನ್ನು ಪ್ರತಿಯೊಬ್ಬರೂ ಕೂಡ ಸ್ಮರಿಸಬೇಕಿದೆ.
” ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರೂ ಸಮಾನರು. ಯಾರೂ ಶ್ರೇಷ್ಠರಲ್ಲ, ಕನಿಷ್ಠರೂ ಇಲ್ಲ. ನೀವು ವ್ಯಕ್ತಿ ಪೂಜೆಯನ್ನು ಮಾಡಬೇಡಿ. ಅದು ಸರ್ವಾಧಿಕಾರಿಯನ್ನು ಸೃಷ್ಟಿ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಬಹಿಷ್ಕೃತ ಹಿತಕಾರಣಿ ಸಭೆಯಲ್ಲಿ ಶಿಕ್ಷಣ, ಸಂಘಟನೆ, ಹೋರಾಟದ ಬಗ್ಗೆ ವಿಸ್ತೃತವಾಗಿ ತಿಳಿಸುವ ಮೂಲಕ ಜನರಿಗೆ ಜಾಗೃತಿ ಮೂಡಿಸಿದ್ದಾರೆ.”

ಬಾಬಾ ಸಾಹೇಬರು ಬಹುದೊಡ್ಡ ಪ್ರಜಾಪ್ರಭುತ್ವವಾದಿಗಳು. ಪ್ರಜಾಪ್ರಭುತ್ವ ಇಲ್ಲದಿದ್ದರೆ ನಾವೆಲ್ಲರೂ ಪ್ರಾಣಿ, ಪಕ್ಷಿಗಳಂತೆ ಬದುಕಬೇಕಾಗುತ್ತದೆ ಎಂದಿದ್ದಾರೆ. ಸಮಾಜದಲ್ಲಿದ್ದ ಅಸಮಾನತೆ ಹಾಗೂ ತಾರತಮ್ಯ ವಿರುದ್ಧದ ಅವರ ಚರಿತ್ರಾತ್ಮಕ ಹೋರಾಟಗಳು ಭಾರತದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದನ್ನು ಅರಿಯಬೇಕಿದೆ.
ನಮ್ಮ ಸರ್ಕಾರವು ಸಂವಿಧಾನದ ಆಶಯವನ್ನು ಆಡಳಿತದ ಮೂಲಕ ಜಾರಿಗೆ ತರುತ್ತಿದೆ. ಅವಕಾಶಗಳಿಂದ ವಂಚಿತರಾದವರಿಗೆ ಸಂವಿಧಾನದಡಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಒದಗಿಸಿಕೊಡಲಾಗುತ್ತಿದೆ. ಅದರಂತೆ, ಬಾಬಾ ಸಾಹೇಬರ ಬಯಕೆಯ ಸಮೃದ್ಧ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು ಎಂದು ಕರೆಕೊಟ್ಟರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಕುಸಿಯುವ ಹಂತದಲ್ಲಿ ನೀರಿನ ಟ್ಯಾಂಕ್; ತೆರವುಗೊಳಿಸುವುದೇ ಪುರಸಭೆ

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಡಾ.ಡಿ.ತಿಮ್ಮಯ್ಯ, ಸಂಸದ ಸುನೀಲ್ ಬೋಸ್, ಶಾಸಕರಾದ ದರ್ಶನ ಧ್ರುವನಾರಾಯಣ, ಹೆಚ್.ಎಂ.ಗಣೇಶ್ ಪ್ರಸಾದ್, ಪತ್ರಕರ್ತ ದೀಪಕ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಹಲವು ಮುಖಂಡರು ಇದ್ದರು.
ರಕ್ಷಕರಾಗಿರಬೇಕಾದವರೆ ಭಕ್ಷಕರಾಗಿರುವರು ಕೆಲವರಲ್ಲ ಹಲವರು.. ನಿಮ್ಮ ಮಾಧ್ಯಮ ಸ್ವಸ್ಥತೆಯ ನಿಟ್ಟಿನಲ್ಲಿ ನಿಮ್ಮ ಜವಾಬ್ದಾರಿ ಶ್ಲಾಘನೀಯ.. ಆದರೆ ಸಮಾಜವು ಆಶ್ವಾಸನೆಯ ಕೂಪದಲ್ಲೆ ನರಳುತ್ತಲೇ ಇದೆ..