ಮಾರುತಿ ಒಮಿನಿ ಕಾರು ಹಾಗೂ ಟ್ರ್ಯಾಕ್ಟರ್ ನಡುವೆ ರಸ್ತೆ ಅಪಘಾತದಲ್ಲಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಭಾನುವಾರ ರಾತ್ರಿ ನಡೆದಿದೆ.
ಮೃತ ಮಹಿಳೆ ದ್ರಾಕ್ಷಯಣಮ್ಮ (50), ಮತ್ತು ಒಂದೂವರೆ ವರ್ಷದ ಲಕ್ಷ್ಮೀ ಎಂಬ ಮಗು ಮೃತ ಪಟ್ಟಿದೆ. ವಕ್ಕಲಗೆರೆ ಗ್ರಾಮದ ದ್ರಾಕ್ಷಯಣಮ್ಮ ಕುಟುಂಬದವರು ಸಖರಾಯಪಟ್ಟಣ ಸಮೀಪವಿರುವ ಬ್ಯಾಡರಹಳ್ಳಿ ಗ್ರಾಮಕ್ಕೆ ತೆರಳುವಾಗ, ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಒಮಿನಿ ಕಾರು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ‘ಡಿಜಿಟಲ್ ಅರೆಸ್ಟ್’ ಆತಂಕದಿಂದ 37 ಲಕ್ಷ ಕಳೆದುಕೊಂಡ ನಿವೃತ್ತ ಸರ್ಕಾರಿ ನೌಕರ
ಅಪಘಾತದಲ್ಲಿ ಗಾಯಾಗೊಂಡ ವ್ಯಕ್ತಿಗಳನ್ನು ಅರಳಗುಪ್ಪೆ ಮಲ್ಲೆಗೌಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.