ನೀಲಗಿರಿ ಒಡನಾಡಿಗಳ ಸಂಗಮ ವತಿಯಿಂದ ಆಯೋಜಿಸಿದ್ದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಧನ ವಿತರಿಸಲಾಯಿತು.
ಬೆಂಗಳೂರು ನಗರದ ಕಮಲಾನಗರದ ಗೃಹಲಕ್ಷ್ಮೀ ಬಡಾವಣೆಯಲ್ಲಿರುವ ಕರ್ನಾಟಕ ಎಂಜಿನಿಯರಿಂಗ್ ಅಕಾಡೆಮಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ನೀಲಗಿರಿ ಒಡನಾಡಿಗಳ ಸಂಗಮದ ಸದಸ್ಯರಾದ ದೇವರಾಜ್ ಬಾಬು ಮಾತನಾಡಿ, “ಸುಮಾರು ಐದಾರು ವರ್ಷಗಳಿಂದ ಜನಪರ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ. ಮಹಾಮಾರಿ ಕರೋನಾ ಸಮಯದಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಜನರಿಗೆ ಸಹಾಯ ಮಾಡುವಲ್ಲಿ ಸಂಗಮ ಸಂಸ್ಥೆ ಪ್ರಮುಖ ಪಾತ್ರ ವಹಿಸಿತ್ತು. ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಅಂಗವಾಗಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ಈ ಪ್ರಕ್ರಿಯೆ ಹೀಗೇ ಮುಂದುವರೆಯುವುದು” ಎಂದು ಹೇಳಿದರು.
ಇದನ್ನೂ ಓದಿ: ಬ್ರಾಂಡ್ ಬೆಂಗಳೂರು | ಜನಹಿತ/ಆಕರ್ಷಕ ಬೆಂಗಳೂರು ವಿಷಯಕ್ಕೆ ಜಯರಾಮ್ ರಾಯಪುರ ನೋಡಲ್ ಅಧಿಕಾರಿಯಾಗಿ ನೇಮಕ
ಸಂಗಮದ ಅಧ್ಯಕ್ಷ ಪ್ರೇಮ್‌ಕುಮಾರ್, ಎಲ್ ಐಸಿಯ ನಿವೃತ್ತ ಅಭಿವೃದ್ಧಿ ಅಧಿಕಾರಿ ಎ ವೆಂಕಟೇಶ್ ಮೂರ್ತಿ, ಪ್ರಾಧ್ಯಾಪಕ ಡಾ. ಮೋಹನ್ ದಾಸ್, ಡಾ. ಜೆ ರಾಜು ಗುಂಡಾಪುರ, ದಲಿತ ಚಳವಳಿ ನಾಯಕ ಗೌಡಗೆರೆ ಮಾಯಶ್ರೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
