ಬಳ್ಳಾರಿ | ಜನಪದದ ಜೀವಾಳ ದೇವದಾಸಿಯರ ಹಾಡು: ಮಹಾದೇವ ಹಡಪದ

Date:

Advertisements

ಜನಪದ ಲೋಕದಲ್ಲಿ ಗರತಿಯ ಹಾಡು ಎಂಬುದು ಲೋಕ ಜನಜನಿತ, ಆದರೆ ಜನಪದ ಲೋಕವನ್ನೇ ಜೀವಂತವಾಗಿಟ್ಟ ದೇವದಾಸಿಯರ ಹಾಡು ಎಲ್ಲಿದೆ? ಇದೊಂದು ಸಾಹಿತ್ಯ ಲೋಕದ ಹಾಗೂ ರಂಗಭೂಮಿಯ ಬೇರು ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ರಂಗಭೂಮಿ ನಿರ್ದೇಶಕ ಮಹದೇವ ಹಡಪದ ಅಭಿಪ್ರಾಯಪಟ್ಟರು.

ಬಳ್ಳಾರಿ ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಸಂಗಂ ಕಥಾಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯೋಜಿಸಿದ್ದ ‘ಸಮಕಾಲೀನ ಕನ್ನಡ ರಂಗಭೂಮಿ ಮತ್ತು ನಾನು’ ಎಂಬ ವಿಶೇಷ ಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಜನಪದ ಸಾಹಿತ್ಯ ಲೋಕದಲ್ಲಿ ಸಂಕಲನ ಎಂಬುದು ಗರತಿಯ ಹಾಡನ್ನು ವೈಭವೀಕರಿಸಿದಷ್ಟು ದೇವದಾಸಿಯರ ಹಾಡನ್ನು ಮುನ್ನೆಲೆಗೆ ತಂದಿಲ್ಲ. ಇದನ್ನು ನೋಡಿದಾಗ ಜನಪದ ಲೋಕದಲ್ಲಿ ಹಾಗೂ ಸಾಹಿತ್ಯ ಲೋಕದಲ್ಲಿ ತಾರತಮ್ಯ ಇರುವುದು ಕಂಡುಬರುತ್ತದೆ. ಅಲೆಮಾರಿಗಳು ಜನಪದ ಕಲೆಯ ರೂವಾರಿಗಳಾಗಿದ್ದಾರೆ. ಅವರ ಕಲೆಯಾದ ತೊಗಲುಗೊಂಬೆಯಾಟ, ಸಿಳ್ಳೆಕ್ಯಾತರ ಆಟ, ಬೀದಿ ನಾಟಕ ಸೇರಿದಂತೆ ಹಲವು ಜನಪದ ಪ್ರಕಾರಗಳು ಸಾಹಿತ್ಯ ಮತ್ತು ಜನಪದ ಲೋಕದಲ್ಲಿ ಪ್ರಸ್ತಾಪವೇ ಇಲ್ಲ. ಶಿಷ್ಟ ಸಾಹಿತ್ಯದಲ್ಲಿ ಗರತಿಯ ಹಾಡು ಎಂಬುದನ್ನು ಅತ್ಯಂತ ವೈಭವೀಕರಣದಿಂದ ನೋಡಲಾಗಿದೆ. ಹೀಗಾದಲ್ಲಿ ಜನಪದ ಸಾಹಿತ್ಯದ ಬೇರು ಎಂಬಂತೆ ಇರುವ ದೇವದಾಸಿಯರ ಹಾಡನ್ನು ಗುರುತಿಸುವವರು ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ. ಸಮಾಜದಲ್ಲಿ ಇನ್ನೂ ಅಸಮಾನತೆ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

Advertisements

ಇದನ್ನೂ ಓದಿ: ಬಳ್ಳಾರಿ | ಮೇ 20ರಂದು ಅಂಗನವಾಡಿ ನೌಕರರ ಮುಷ್ಕರ

ಕಾರ್ಯಕ್ರಮದಲ್ಲಿ ಶಕೀಲ್ ಅಹ್ಮದ್, ಸಹನಾ ಪಿಂಜಾರ್, ಮಂಜು ಸಿರಿಗೇರಿ ವಿಷಯ ಮಂಡನೆ ಮಾಡಿದರು. ಸಂಗಮ್ ಪ್ರಧಾನ ಕಾರ್ಯದರ್ಶಿ ಡಾ. ಕೆ ಶಿವಲಿಂಗಪ್ಪ ಹಂದಿಹಾಳ್, ಖಜಾಂಚಿ ವೀರೇಂದ್ರ ರವಿಹಾಳ್, ಸದಸ್ಯ ಡಾ. ದಸ್ತಗಿರಿ ಸಾಬ್ ದಿನ್ನಿ ಹಾಗೂ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X