ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಮತ್ತು ವಿವಿಧ ಕ್ರಿಶ್ಚಿಯನ್ ಕಲ್ಯಾಣ ಯೋಜನೆಗಳಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ನೀಡಿದೆ. ಸರ್ಕಾರದ ಕ್ರಮವನ್ನು ಮಂಗಳೂರಿನ ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನ ಬ್ರಹ್ಮಾವರ ಡಯಾಸಿಸ್ ಶ್ಲಾಘಿಸಿದೆ.
“ಸರ್ಕಾರದ ಕ್ರಮವು ಕ್ರಿಶ್ಚಿಯನ್ ಸಮುದಾಯದ ಯೋಗಕ್ಷೇಮಕ್ಕೆ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಕ್ರಿಶ್ಚಿಯನ್ನರನ್ನು ಸಬಲೀಕರಣಗೊಳಿಸುವಲ್ಲಿ ಸರ್ಕಾರದ ದೂರದೃಷ್ಟಿಯ ನಾಯಕತ್ವ ಅಭಿನಂದನೀಯ. ನಿಗದಿಪಡಿಸಿದ ಅನುದಾನವು ಶಿಕ್ಷಣ, ಆರೋಗ್ಯ ರಕ್ಷಣೆ, ಸಮಾಜ ಕಲ್ಯಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ನಿರ್ಣಾಯಕ ಕ್ಷೇತ್ರಗಳನ್ನು ಬೆಂಬಲಿಸುತ್ತದೆ. ಇದು ಅಸಂಖ್ಯಾತ ಕ್ರಿಶ್ಚಿಯನ್ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ” ಎಂದು ಬ್ರಹ್ಮಾವರ ಡಯೋಸಿಸನ್ ಮೆಟ್ರೋಪಾಲಿಟನ್ ಬಿಷಪ್ ಯಾಕೋಬ್ ಮಾರ್ ಎಲಿಯಾಸ್ ಹೇಳಿದ್ದಾರೆ.
“ನಿಧಿಯ ಪರಿಣಾಮಕಾರಿ ಬಳಕೆ ಮತ್ತು ಕಲ್ಯಾಣ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿಯೊಂದಿಗೆ ಸಹಕರಿಸಲು ಎದುರು ನೋಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.