ಸೋಮವಾರ ಮಧ್ಯಾಹ್ನ 1:26ರ ಸುಮಾರಿಗೆ ಪಾಕಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಶನಿವಾರ ಪಾಕಿಸ್ತಾನದಲ್ಲಿ ಸತತ ಎರಡು ಬಾರಿ ಭೂಮಿ ಕಂಪಿಸಿದೆ. ಇದಾದ ಎರಡು ದಿನಗಳಲ್ಲೇ ಸೋಮವಾರ ಮತ್ತೆ ಭೂಕಂಪವಾಗಿದೆ. ಶನಿವಾರ ಬೆಳಿಗ್ಗೆ 5.7 ತೀವ್ರತೆಯ ಮತ್ತು ಅದಾದ ಕೆಲವೇ ಗಂಟೆಗಳಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ.
ಇದನ್ನು ಓದಿದ್ದೀರಾ? ಅಫ್ಘಾನಿಸ್ತಾನ ಕೇಂದ್ರಿತವಾಗಿ ಭೂಕಂಪ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಕಂಪಿಸಿದ ಭೂಮಿ
ಪಾಕಿಸ್ತಾನ ಜಾಗತಿಕವಾಗಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. ಆದರೆ ಈ ರೀತಿ ಪದೇ ಪದೇ ಭೂಕಂಪ ಸಂಭವಿಸುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
#BREAKING
— Nabila Jamal (@nabilajamal_) May 12, 2025
Earthquake Alert
A 4.6 magnitude quake hit Pakistan at 1:26 PM IST, says India's National Center for Seismology
Even small tremors matter—Pakistan's nuclear sites sit in a fragile zone pic.twitter.com/WlWE0Ghuyx
ಬಲೂಚಿಸ್ತಾನ್, ಖೈಬರ್ ಪಖ್ತುನ್‌ಖ್ವ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಆಗಾಗ್ಗೆ ಭೂಕಂಪದ ಅಪಾಯಗಳು ಹೆಚ್ಚಾಗುತ್ತಿದೆ. ಸದ್ಯ ಇಂದು ನಡೆದ ಕಂಪನದಿಂದ ಹಾನಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ.
