ಮೈಸೂರು ವಿಶ್ವ ವಿದ್ಯಾಲಯದ ಯುವರಾಜ ಮತ್ತು ಮಹಾರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಇದೇ ಮೊದಲನೇ ಬಾರಿ ‘ ಆಲ್ ಇಂಡಿಯಾ ಆಲ್ ಸ್ಟೈಲ್ ಓಪನ್ ಫುಲ್ ಕಾಂಟ್ಯಾಕ್ಟ್ ಮಾರ್ಷಲ್ ಆರ್ಟ್ಸ್ ‘ ಕರಾಟೆ ಪಂದ್ಯಾವಳಿ ಸಮರೂಪ ಸಮಾರಂಭದಲ್ಲಿ ಮಾತನಾಡಿದ ಮುಡಾ ಮಾಜಿ ಅಧ್ಯಕ್ಷ ಎಚ್. ವಿ. ರಾಜೀವ್ ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಕೆ ಸೂಕ್ತ
ಎಂದರು.
ಭಯೋತ್ಪಾದಕರ ವಿರುದ್ಧ ಹೋರಾಡಲು ಇಡೀ ದೇಶವೇ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡಲು ಸ್ವಯಂ ರಕ್ಷಣೆ ಅಗತ್ಯತೆ ಇದೆ. ಎಲ್ಲರೂ ಸಹ ಸ್ವಯಂ ರಕ್ಷಣೆಗಾಗಿ ಕರಾಟೆ ಅಂತಹ ಕ್ರೀಡೆಯನ್ನು ಕಲಿತರೆ ನಿಮ್ಮ ಆರೋಗ್ಯದ ಜೊತೆಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮೈಸೂರಿನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕರಾಟೆ ಪಂದ್ಯಾವಳಿಗೆ ದೇಶದ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಆಗಮಿಸಿ ಈ ಟೂರ್ನಿಯಲ್ಲಿ ಬಹುಮಾನ ಪಡೆದಿರುವುದು ಸಂತಸ ತಂದಿದೆ. ವಿಜೇತರಾದವರು ಮುಂದಿನ ದಿನಗಳಲ್ಲಿ ಮತ್ತಷ್ಟು ಮೈಲಿಗಲ್ಲು ಸಾಧಿಸಲಿ ಪರಾಜಿತರಾದವರು ಆತ್ಮವಿಶ್ವಾಸದಿಂದ ಮುಂದಿನ ದಿನಗಳಲ್ಲಿ ಸತತ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯವಿದೆ. ಎಲ್ಲರೂ ವಿಜೇತರಾಗಲು ಸಾಧ್ಯವಿಲ್ಲ ಗೆದ್ದವರು ಹಿಗ್ಗದೆ, ಸೋತವರು ನಿರಾಶರಾಗದೆ ಈ ರೀತಿಯ ಟೂರ್ನಿಗಳಲ್ಲಿ ಭಾಗವಹಿಸಿದರೆ ಆತ್ಮವಿಶ್ವಾಸ ಹೆಚ್ಚಿಕೊಳ್ಳಲು ಸಾಧ್ಯ. ಮೈಸೂರಿನಲ್ಲಿ ಪಂದ್ಯಾವಳಿ ಆಯೋಜನೆಯಾಗಿರುವುದು ಮೈಸೂರಿನ ಕರಾಟೆ ಪಟುಗಳಿಗೆ ಇದೊಂದು ಸದಾವಕಾಶವಾಗಿದೆ ಎಂದು ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಕುಸಿಯುವ ಹಂತದಲ್ಲಿ ನೀರಿನ ಟ್ಯಾಂಕ್; ತೆರವುಗೊಳಿಸುವುದೇ ಪುರಸಭೆ
ವೇದಿಕೆಯಲ್ಲಿ ಗ್ರ್ಯಾಂಡ್ ಮಾಸ್ಟರ್ ವಿ. ನಾಗರಾಜು, ಎಂ. ದಿಲೀಪ್ ಕುಮಾರ್, ರೈಲ್ವೆ ಸಹಕಾರ ಮಂಡಳಿ ಬ್ಯಾಂಕ್ ಅಧ್ಯಕ್ಷ ಮಂಜೇಗೌಡ ಸೇರಿದಂತೆ ಇನ್ನಿತರರು ಇದ್ದರು.