ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕಾರ್ಮಿಕ ಮಹಿಳೆ ಸಾವನ್ನಪ್ಪಿದ ಘಟನೆ ಲಿಂಗಸುಗೂರು ತಾಲ್ಲೂಕಿನ ಚಿಕ್ಕ ನಗನೂರು ಗ್ರಾಮದಲ್ಲಿ ನಡೆದಿದೆ.
ಸುಕನ್ಯಾ ಮಹಾವೀರ ಸಿಂಗ್ (50) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ನಗನೂರು ಗ್ರಾಮದ ಶಿವರಾಜ ದೇಸಾಯಿ ಅವರ ಹೊಲದ ಹತ್ತಿರದ ನಾಲಾ ಹೂಳೆತ್ತುವ ಕಾಮಗಾರಿ ಮಾಡುತ್ತಿದ್ದ ವೇಳೆ ಮಹಿಳೆಗೆ ತೀವ್ರ ಬಿಸಿಲಿಗೆ ತಲೆ ಸುತ್ತು ಬಂದು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜರುಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಾರಾಯಣಪುರ ಬಲದಂಡೆ ಕಾಲುವೆಗೆ ಬಸಿನೀರು ಹರಿಸಲು ರೈತರ ಆಗ್ರಹ
ಮೃತ ಕಾರ್ಮಿಕ ಮಹಿಳೆಗೆ ಪರಿಹಾರ ಒದಗಿಸುವಂತೆ ಉದ್ಯೋಗ ಖಾತ್ರಿ ಕೂಲಿಕಾರರ ಸಂಘಟನೆ ಮುಖಂಡರು (ಟಿಯುಸಿಐ) ಒತ್ತಾಯಿಸಿದ್ದಾರೆ.ಈ ವಿಚಾರ ತಿಳಿಯುತ್ತಿದ್ದಂತೆ ಮೃತ ಮಹಿಳೆ ಮನೆಗೆ ಆಗಮಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಜೆಇ ರಾಘವೇಂದ್ರ ಹಾಗೂ ಬಿಲ್ ಕಲೆಕ್ಟರ್ ವೆಂಕಪ್ಪ ಚಿಕ್ಕ ನಗನೂರು ಭೇಟಿ ನೀಡಿದರು.
ಕಾಮಗಾರಿ ಮಾಡುವ ವೇಳೆಯಲ್ಲಿ ಧೀಡೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದು, ಮೃತಳು ನಿರ್ಗತಿಕ ,ಕಡು ಬಡತನದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಳು,ಮೃತರಿಗೆ ಒಬ್ಬ ಮಗ ನಿದ್ದು,ನೊಂದ ಈ ಬಡ ಕುಟುಂಬ ನಿರ್ವಹಣೆಗೆ ಸರಕಾರದಿಂದ ಕನಿಷ್ಠ 2 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
