ಮಹಿಳೆಯರು ರಫೇಲ್ ಹಾರಾಟ ನಡೆಸಬಹುದಾದರೆ, ಸೇನೆಯು ನ್ಯಾಯಾಧೀಶ ಅಡ್ವೊಕೇಟ್ ಜನರಲ್ ಹುದ್ದೆಗೆ ಮಹಿಳೆಯರಿಗೆ ಹೆಚ್ಚು ಅವಕಾಶ ಯಾಕೆ ನೀಡುತ್ತಿಲ್ಲ? ಮಹಿಳೆಯರನ್ನು ಯಾಕೆ ನೇಮಿಸುತ್ತಿಲ್ಲ ಎಂದು ಸೋಮವಾರ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.
“ವಾಯುಸೇನೆಯಲ್ಲಿ ಮಹಿಳೆಯೊಬ್ಬರು ರಫೇಲ್ ಹಾರಾಟ ನಡೆಸಲು ಅನುಮತಿಯಿದೆ. ಆದರೆ ಸೇನೆಯಲ್ಲಿನ ನ್ಯಾಯಾಧೀಶ ಅಡ್ವೊಕೇಟ್ ಜನರಲ್ [ಜೆಎಜಿ] ಹುದ್ದೆಯಲ್ಲಿ ಮಹಿಳೆಯರನ್ನು ನೇಮಿಸಲು ಏನು ಕಷ್ಟ” ಎಂದು ನ್ಯಾಯಮೂರ್ತಿ ದೀಪಂಕರ್ ದತ್ತ ನೇತೃತ್ವದ ದ್ವಿಸದಸ್ಯ ಪೀಠ ಪ್ರಶ್ನಿಸಿದೆ.
ಇದನ್ನು ಓದಿದ್ದೀರಾ? ಮುಟ್ಟಿನ ಕಾರಣಕ್ಕೆ ತಾರತಮ್ಯ; ಸುಪ್ರೀಂ ಕೋರ್ಟ್ ತೀರ್ಪಿಗೂ ಬೆಲೆಯಿಲ್ಲ
ಹುದ್ದೆಗಳು ಲಿಂಗ ತಟಸ್ಥ ಎಂದು ಹೇಳಿಕೊಂಡರೂ ಮಹಿಳೆಯರಿಗೆ ಕಡಿಮೆ ಹುದ್ದೆಗಳನ್ನು ಮೀಸಲಿಟ್ಟಿರುವ ಬಗ್ಗೆ ಪೀಠವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು. ಪುರುಷರು ಮತ್ತು ಮಹಿಳೆಯರಿಗೆ ಅಸಮಾನವಾದ ಖಾಲಿ ಹುದ್ದೆಗಳನ್ನು ಪ್ರಶ್ನಿಸಿ ಜೆಎಜಿ (ಭಾರತೀಯ ಸೇನೆ) ಪ್ರವೇಶ ಯೋಜನೆಯ ಹುದ್ದೆಗೆ ನೇಮಕಾತಿ ಕೋರಿ ಇಬ್ಬರು ಮಹಿಳೆಯರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ. ಹಾಗೆಯೇ ತೀರ್ಪು ಕಾಯ್ದಿರಿಸಿದೆ.
ಅರ್ಜಿದಾರರಾದ ಅಷ್‌ನೂರ್ ಕೌರ್ ಮತ್ತು ಇನ್ನೋರ್ವರು ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದಿದ್ದರು. ಪುರುಷ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅರ್ಹತೆಯನ್ನು ಹೊಂದಿದ್ದರು. ಆದರೂ ಮಹಿಳೆಯರಿಗೆ ಕಡಿಮೆ ಹುದ್ದೆಗಳಿರುವುದರಿಂದ ಇವರಿಬ್ಬರನ್ನೂ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿಕೊಂಡಿದೆ. ಇದನ್ನು ಪ್ರಶ್ನಿಸಿ ಅಷ್‌ನೂರ್ ಕೌರ್ ಮತ್ತು ಇನ್ನೋರ್ವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಮಹಿಳಾ ಅಧಿಕಾರಿಗಳಾದ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಯಾರು?
ಸದ್ಯ ಅಷ್‌ನೂರ್ ಕೌರ್ ಅವರಿಗೆ ಜೆಎಜಿ ಅಧಿಕಾರಿಯಾಗಿ ನೇಮಕಾತಿಗಾಗಿ ಮುಂದಿನ ಲಭ್ಯವಿರುವ ತರಬೇತಿ ಕೋರ್ಸ್‌ನಲ್ಲಿ ಅವರನ್ನು ಸೇರಿಸಿಕೊಳ್ಳುವಂತೆ ಕೇಂದ್ರ ಮತ್ತು ಸೇನೆಗೆ ನಿರ್ದೇಶನ ನೀಡಿದೆ. ಹುದ್ದೆಗಳು ಲಿಂಗ ತಟಸ್ಥವಾಗಿವೆ ಎಂದು ಹೇಳಿಕೊಂಡರೂ ಮಹಿಳೆಯರಿಗೆ ಕಡಿಮೆ ಹುದ್ದೆಗಳನ್ನು ಮೀಸಲಿಟ್ಟಿದ್ದಕ್ಕಾಗಿ ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿದೆ.
ಜೆಎಜಿ ಹುದ್ದೆಗಳು ಲಿಂಗ ತಟಸ್ಥವಾಗಿವೆ(gender neutral) ಮತ್ತು 50:50 ಅನುಪಾತವು 2023 ರಿಂದ ಆಯ್ಕೆ ಅನುಪಾತವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಹೇಳಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತಿರಸ್ಕರಿಸಿದೆ. “ಲಿಂಗ ತಟಸ್ಥತೆ ಎಂದರೆ ಶೇಕಡ 50:50 ಎಂದಲ್ಲ. ಲಿಂಗ ತಟಸ್ಥತೆ ಎಂದರೆ ನೀವು ಯಾವ ಲಿಂಗ ಎಂಬುದು ಮುಖ್ಯವಿಲ್ಲ ಎಂಬುದಾಗಿದೆ” ಎಂದು ಕೋರ್ಟ್ ಹೇಳಿದೆ.
