ಬಳ್ಳಾರಿ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಎಸ್‌ಪಿ ಡಾ. ಶೋಭಾರಾಣಿ ರೌಡಿಶೀಟರ್‌ಗಳ ಪರೇಡ್ ನಡೆಸಿ ಹಾಲಿ ಮಾಜಿ ರೌಡಿಶೀಟರ್‌ಗಳಿಗೆ ‘ಬಾಲ ಬಿಚ್ಚಿದರೆ ಹುಷಾರ್’ ಎಂದು ಖಡಕ್ ಎಚ್ಚರಿಕೆ ನೀಡಿದರು.
ನಗರದ ಕೌಲ್ ಬಜಾರ್, ಗಾಧಿನಗರ, ಬ್ರೂಸ್ ಪೇಟೆ, ಎಪಿಎಂಸಿ, ಬಳ್ಳಾರಿ ಗ್ರಾಮೀಣ, ಕುರುಗೋಡು ಪೋಲಿಸ್ ಠಾಣೆ ಸೇರಿದಂತೆ ಜಿಲ್ಲೆಯ ಒಟ್ಟು 17 ಪೊಲೀಸ್ ಠಾಣಾ ವ್ಯಾಪ್ತಿಯ 660ಕ್ಕೂ ಹೆಚ್ಚು ರೌಡಿ ಶೀಟರ್‌ಗಳು ಈ ಪರೇಡ್‌ನಲ್ಲಿ ಹಾಜರಿದ್ದರು. ಈ ಪೈಕಿ 67 ಆ್ಯಕ್ಟಿವ್ ರೌಡಿಗಳಿದ್ದಾರೆಂದು ತಿಳಿದುಬಂದಿದೆ.

ರೌಡಿಶೀಟರ್‌ಗಳಿಗೆ ಕ್ಲಾಸ್ ತೆಗೆದುಕೊಂಡ ಎಸ್‌ಪಿ “ಯಾರೇ ಆಗಲಿ ಆಗಿರುವ ಘಟನೆಗಳನ್ನು ಮರೆತು ಒಳ್ಳೆ ರೀತಿ ಜೀವನ ಮಾಡಿ, ಮತ್ತೆ ಏನಾದರೂ ಸಮಾಜದ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿದ್ದು ಕಂಡುಬಂದಲ್ಲಿ ಅಥವಾ ಅಕ್ರಮ ಚಟುವಟಿಕೆಗಳಲ್ಲಿ
ಭಾಗಿಯಾದಲ್ಲಿ ಕಾನೂನು ಪ್ರಕಾರ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪರೇಡ್‌ನಲ್ಲಿ ಎಎಸ್‌ಪಿ ನವೀನ್ ಕುಮಾರ್, ಕೆ ಪಿ ರವಿಕುಮಾರ್, ಡಿವೈಎಸ್‌ಪಿಗಳಾದ ನಂದಾರೆಡ್ಡಿ ಸೇರಿದಂತೆ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳು, ಪಿಎಸ್ಐ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಇದನ್ನೂ ಓದಿ: ಬಳ್ಳಾರಿ | ಮೇ 20ರಂದು ಅಂಗನವಾಡಿ ನೌಕರರ ಮುಷ್ಕರ
