ಜ್ಞಾನದ ಬೆಳಕು ಗೌತಮ ಬುದ್ಧನ ತತ್ವ ಸಂದೇಶಗಳನ್ನು ಪ್ರತಿ ಮನೆ ಮನಗಳಿಗೆ ತಲುಪಿಸುವಂತಹ ಕಾರ್ಯವಾಗಬೇಕು. ಪ್ರತಿಯೊಬ್ಬರೂ ಬುದ್ಧನ ಆದರ್ಶಗಳನ್ನು ಅಳವಡಿಸಿಕೊಂಡರೆ ಜಗತ್ತು ಶಾಂತಿಯಿಂದ ಇರುತ್ತದೆ ಎಂದು ವಿಜಯಪುರ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಬುದ್ಧಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಹಶೀಲ್ದಾರ್ ಯಮನಪ್ಪ ಸೋಮನಕಟ್ಟಿ ಮಾತನಾಡಿ, “ಬುದ್ದನ ಉನ್ನತ ಆದರ್ಶಗಳು, ಅಹಿಂಸಾ ತತ್ವ, ಸಾಮರಸ್ಯದ ಸಂದೇಶಗಳು ಚಿರನೂತನ. ಅವರ ಶ್ರೇಷ್ಠ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ನೀಡುವೆಂತಿವೆ. ಇಂದಿನ ಪ್ರಜ್ಞಾವಂತರು ಮುಂದಿನ ತಲೆಮಾರುಗಳಿಗೆ ಬುದ್ಧನ ಆದರ್ಶಗಳನ್ನು ತಿಳಿಸಿ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು” ಎಂದು ಹೇಳಿದರು.
ಕಾರ್ಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಹಿರೇಮನಿ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಸಿಡಿಪಿಒ ಬಸವರಾಜ ನಿಲುಗಲ್, ಪುರಸಭೆ ವ್ಯವಸ್ಥಾಪಕ ಸುರೇಶ, ಡಿಎಸ್ಎಸ್ ಮುಖಂಡ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಅರವಿಂದ ಸಾಲವಾಡಗಿ, ಗುರುರಾಜ ಗೂಡಿಮನಿ, ಕಚೇರಿ ಸಿಬ್ಬಂದಿಗಳಾದ ಮಂಜು ಹಳ್ಳೂರ, ರಾಮಚಂದ್ರ ಘಾಟಗೆ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಡೋಣೂರ, ನಿವೃತ್ತ ಶಿಕ್ಷಕ ಎಸ್ ಎ ದೇಗಿನಾಳ, ಡಿಎಸ್ಎಸ್ ಮುಖಂಡರಾದ ಯಮನಪ್ಪ ಚಲವಾದಿ, ಯಮನೂರಿ ಅಂಬಳನೂರ, ರಾಜು ದಿಂಡವಾರ, ಶೇಖರ ಕಾಣೆ, ವೈ ಎಸ್ ಕಾನಾಗಡ್ಡಿ ಅವಿನಾಶ ಬಾನಿಕೋಲ, ಶಿವು ಮಸಬಿನಾಳ, ಶ್ರೀಶೈಲ ಹೆಬ್ಬಾಳ, ರಮೇಶ ಮ್ಯಾಗೇರಿ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: ವಿಜಯಪುರ | ಮೇ 14ರಂದು ರಾಜ್ಯಮಟ್ಟದ ಜನ ಹೋರಾಟ