ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಪಂಚಾಯಿತಿಯ ತಾಂತ್ರಿಕ ಸಹಾಯಕಿ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ರೈತರೊಬ್ಬರಿಗೆ ಕೃಷಿ ಹೊಂಡ ನಿರ್ಮಿಸುವ ಸಲುವಾಗಿ ತಾಂತ್ರಿಕ ಸಹಾಯಕಿ ವೆಂಕಿಬಾಯಿ ಎಂಬುವರು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಾಗವಂಗಲದ ಕೃಷಿಕರೊಬ್ಬರಿಂದ 5500 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಈ ಕಾರ್ಯಾಚರಣೆ ವೇಳೆ ಲೋಕಾಯುಕ್ತ ಡಿವೈ ಎಸ್ ಪಿ, ಜೆ ಜೆ ತಿರುಮಲೇಶ್ ನೇತೃತ್ವ ವಹಿಸಿ, ಸ್ಥಳೀಯ ತಂಡಗಳ ಸಹಾಯದಿಂದ ದಾಳಿ ನಡೆಸಲಾಗಿದೆ.