ಮೇ 20 ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಪತ್ರಿಕಾಗೋಷ್ಠಿ ಹಾಗೂ ನಾಲ್ಕು ಕಾರ್ಮಿಕ ಸಂಹಿತೆ ಗಳು ಪುಸ್ತಕ ಬಿಡುಗಡೆ ಉಡುಪಿಯ ಪತ್ರಿಕಾಭವನದಲ್ಲಿ ಮಾಡಲಾಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಮಹಾಂತೇಶ್ ಪತ್ರಿಕಾ ಗೋಷ್ಟಿಯಲ್ಲಿ ಮತಾನಾಡಿ, ಸಂಘಟಿತ- ಅಸಂಘಟಿತ ವಲಯದ ಕಾರ್ಮಿಕರ ಪರಿಸ್ಥಿತಿಯನ್ನು ಸಮಸ್ಯೆ ಗಳನ್ನು ಇದಕ್ಕೆ ಕಾರಣವಾಗಿರುವ ಸರಕಾರದ ನೀತಿಗಳನ್ನು ಜನತೆ ಮುಂದಿರಿಸಲು ಮತ್ತು ರೈತರು ಹಾಗೂ ಕಾರ್ಮಿಕರಂಗದ ಸಮಸ್ಯೆಗಳಿಗೆ ಕಾರಣವಾಗಿರುವ ನೀತಿಗಳನ್ನು ಬದಲಾಯಿಸುವಂತೆ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.
ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮಾತನಾಡಿ, ಮೇ 20ರಂದು ಬೆಳಗ್ಗೆ ಉಡುಪಿಯ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಬೆಳಗ್ಗೆ 11ಗಂಟೆಗೆ ಅಜ್ಜರ ಕಾಡು ಹುತಾತ್ಮಸ್ಮಾರಕ ಬಳಿ ಬಹಿರಂಗ ಸಭೆ ನಡೆಯಲಿದೆ. ಕುಂದಾಪುರ ಶಾಸ್ತ್ರೀಯ ಸರ್ಕಲ್‌ನಿಂದ ಬೆಳಗ್ಗೆ 10ಗಂಟೆಗೆ ಮೆರವಣಿಗೆ ಹೊರಟು, ಬಳಿ ಅದೇ ಸ್ಥಳದಲ್ಲಿ ಬಹಿರಂಗ ಸಭೆ ಜರಗಲಿದೆ. ಬೈಂದೂರಿ ನಲ್ಲೂ ಮುಷ್ಕರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಹಾಗೂ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಅಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ, ಜೆಸಿಟಿಯು ಉಡುಪಿ ಜಿಲ್ಲಾ ಸಂಚಾಲಕರು ಹಾಗೂ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್.ಎಸ್.ಕಾಂಚನ್, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಶೇಖರ್ ಬಂಗೇರ ಉಪಸ್ಥಿತರಿದ್ದರು.