ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು ಕೂತುಗೋಡು ಗ್ರಾಮದಲ್ಲಿ ಸೋಮವಾರ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲಾಯಿತು.

ಕೂತುಗೋಡು ಗ್ರಾಮದಲ್ಲಿ ನೀಲಿ ತೋರಣಗಳಿಂದ ಕೊಡಿದ್ದು, ಸಂಜೆ 5 ಗಂಟೆಯ ಸಮಯದಲ್ಲಿ ಅಂಬೇಡ್ಕರ್ ಜಯಂತಿ ಪ್ರಾರಂಭಿಸಲಾಯಿತು. ಹಾಗೆಯೇ, ಕಲಾವಿದರ ತಂಡದಿಂದ ಉತ್ತಮ ಹಾಡುಗಾರಿಕೆಯಿಂದ ಜನರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪರಿಸರವಾದಿ, ಚಿಂತಕ, ಲೇಖಕರಾದ ಡಾ. ಕಲ್ಕುಳಿ ವಿಠಲ್ ಹೆಗ್ಡೆ ಅವರು “ಮಹಿಳೆಯರಿಗೆ ಪುರುಷ ಶೋಷಣೆಯಿಂದ, ಬಂಡವಾಳ ಶಾಹಿಗಳ ಸಮಯವಿಲ್ಲದ ಕೆಲಸಕ್ಕೆ 8 ಘಂಟೆ ಕೆಲಸ ನಿಗದಿ ಮಾಡಿದಂತ, ಮಹಿಳೆ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಪುರುಷನಷ್ಟೇ ಹಕ್ಕುಳ್ಳವಳು” ಎಂದು ಮಾತಾಡಿದರು.

ಏಪ್ರಿಲ್ 14 ಕ್ಕೆ 134 ವರ್ಷ ಕಳೆದರೂ ಅವರ ಮಾರ್ಗದರ್ಶನದ ಈ ದೇಶದ ಸಂವಿಧಾನ ಎಲ್ಲರನ್ನು ಗೌರವಿಸುವ, ಧರ್ಮ ನಿರುಪೇಕ್ಷಿತವಾಗಿ ಬದುಕುವ, ಎಲ್ಲರಿಗೂ ಸಮಾನ ಅವಕಾಶವನ್ನು ನೀಡುವಂತ ವ್ಯವಸ್ಥೆ ಯನ್ನು ಹಾಕಿಕೊಟ್ಟಿದ್ದಾರೆ. ಮೊದಲು ನಾವು ಶಿಕ್ಷಣ ಕಲಿಯಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದರೆ ಮಾತ್ರ ನಾವು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಡಾ. ಕಲ್ಕುಳಿ ವಿಠಲ್ ಹೆಗ್ಡೆ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಭಾರತದಲ್ಲಿ ಮೊದಲಿಗೆ ಮಹಿಳೆಯರಿಗೆ ಆಸ್ತಿ, ಸ್ವಾತಂತ್ರ್ಯ ಕೊಟ್ಟಿದ್ದು ಬಿ ಆರ್ ಅಂಬೇಡ್ಕರ್; ಕೆ ಎಲ್ ಅಶೋಕ್
ಈ ವೇಳೆ ಕೆಎಲ್ ಅಶೋಕ್, ವೆಂಕಟೇಶ್ ಹಾಗಲಗಂಚಿ, ಭರತ್ ಗಿಣಿಕಲ್, ಕವಿತಾ ಶೇಖರ್ ಕಣದಮನೆ, ಅನಿಲ್ ಹೊಸಕೊಪ್ಪ, ಶಂಕರ್, ಕರ್ನಾಟಕ ಜನಶಕ್ತಿ ಸಮಿತಿ, ದಸಂಸ ಸಮಿಯವರು, ಕೂತುಗೋಡು ಗ್ರಾಮಸ್ಥರು ಹಾಗೂ ಇನ್ನಿತರರಿದ್ದರು.