ಮೈಸೂರು | ವ್ಯಸನ ಮುಕ್ತ ಜೀವನಕ್ಕೆ ಆದರ್ಶ ಮೌಲ್ಯಗಳು ಅಡಿಗಲ್ಲಾಗಬೇಕು : ಡಾ. ಜೆ. ಲೋಹಿತ್

Date:

Advertisements

ಮೈಸೂರು ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನ ಮುಕ್ತ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ ಜೀವನ ಉತ್ಸಾಹ ‘ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ವಿಶ್ವ ವಿದ್ಯಾನಿಲಯದ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕರಾದ ಡಾ.ಜೆ. ಲೋಹಿತ್ ಮಾತನಾಡಿ ‘ ವ್ಯಸನ ಮುಕ್ತ ಜೀವನಕ್ಕೆ ಆದರ್ಶ ಮೌಲ್ಯಗಳು ಅಡಿಗಲ್ಲಾಗಬೇಕು ‘ ಎಂದರು.

” ನಮ್ಮ ಬದುಕಿಗೆ ನಾವೇ ಶಿಲ್ಪಿಗಳಾಗಿದ್ದು, ವ್ಯಸನ ಮುಕ್ತ ಜೀವನಕ್ಕೆ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸದಾ ಚಂಚಲವಾಗಿರುವ ಮನಸನ್ನು ಹಿರಿಯರು ಮರ್ಕಟಕ್ಕೆ ಹೋಲಿಕೆ ಮಾಡಿದ್ದಾರೆ. ಮನಸ್ಸು ಮತ್ತು ಬುದ್ದಿ ನಮ್ಮ ಹಿಡಿತದಲ್ಲಿ ಇರಬೇಕು. ಒಂದು ವೇಳೆ ಆ ಮನಸ್ಸು ನಮ್ಮ ಹಿಡಿತದಲ್ಲಿ ಇಲ್ಲ ಎಂದರೆ ಬದುಕು ಸೂತ್ರ ಕಿತ್ತ ಗಾಳಿಪಟದಂತೆ ಹಾರಾಡುತ್ತದೆ. ವ್ಯಸನಕ್ಕೆ ಬಲಿಯಾದವರಲ್ಲಿ ನಕಾರಾತ್ಮಕ ಯೋಚನೆಗಳು ಬರುವುದು ಸಹಜ. ಆದರೆ, ಸಕಾರಾತ್ಮಕ ಯೋಚನೆ ಬೆಳಸಿಕೊಳ್ಳಲು ಹಾಗೂ ಉತ್ತಮ ಬದುಕು ಕಲ್ಪಿಸಿಕೊಳ್ಳುವುದಕ್ಕೂ ಅವಕಾಶ ಇದೆ ಎನ್ನುವುದನ್ನು ಮರೆಯಬಾರದು. ಆ ಭರವಸೆಯನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು ” ಎಂದು ಉತ್ಸಾಹ ತುಂಬಿದರು.

” ಜೀವನದ ನಿಜವಾದ ಉದ್ದೇಶವನ್ನು ನಾವು ಅರ್ಥಮಾಡಿಕೊಳ್ಳಬೇಕು. ಸರಿಯಾದ ಮಾರ್ಗದಲ್ಲಿ ಜೀವನ ನಡೆಸಬೇಕು. ಇತರರಿಗೆ ಮಾದರಿಯಾಗಿ ಬಾಳಬೇಕು. ಇದಕ್ಕೆ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಗೆಳೆಯರ ಸಹವಾಸ ಮಾಡಬೇಕು. ಉತ್ತಮ ಪುಸ್ತಕಗಳನ್ನು ಓದವೇಕು. ಬದಲಾವಣೆಗೆ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬದುಕನ್ನು ಸವಾಲಾಗಿ ಸ್ವೀಕಾರ ಮಾಡಿ ವ್ಯಸನದಿಂದ ಹೊರ ಬಂದು ಸಮಾಜಕ್ಕೆ ಆಸ್ತಿಯಾಗಿ ಬಾಳಬೇಕು ” ಎಂದು ಮಾರ್ಗದರ್ಶನ ಮಾಡಿದರು.

Advertisements

ವ್ಯಸನಕ್ಕೆ ಬಲಿಯಾದವರನ್ನು ಮತ್ತೆ ಸಮಾಜ ಸ್ವೀಕಾರ ಮಾಡುವುದಿಲ್ಲ. ನಂಬುವುದಿಲ್ಲ. ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ಸಮಾಜ ನಮ್ಮನ್ನು ಅನುಮಾನದಿಂದಲೇ ನೋಡುತ್ತದೆ ಎಂದು ಬಹುತೇಕ ವ್ಯಸನಿಗಳು ಹೇಳುತ್ತಾರೆ. ಇದು ಸಹಜ. ಇಷ್ಟು ದಿನ ನಾವು ವ್ಯಸನದಿಂದ ಹಲವಾರು ಸಮಸ್ಯೆ, ಅವಾಂತರಗಳನ್ನು ಸೃಷ್ಟಿ ಮಾಡಿರುತ್ತೇವೆ. ಸುಲಭವಾಗಿ ಯಾರೂ ಕೂಡ ನಮ್ಮನ್ನು ನಂಬುವುದಿಲ್ಲ. ಆದರೆ, ಇತರರಲ್ಲಿ ಆ ನಂಬಿಕೆಯನ್ನು ಮೂಡಿಸುವುದಕ್ಕೆ ನಿಮ್ಮ ಪ್ರಮಾಣಿಕ ಪ್ರಯತ್ನ ನಿರಂತರವಾಗಿ ಇರಬೇಕು. ಒಂದಲ್ಲ ಒಂದು ದಿ‌ನ ಸಮಾಜ ನಿಮ್ಮನ್ನು ನಂಬುತ್ತದೆ, ಒಪ್ಪುತ್ತದೆ ಎಂದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅಸಮತೋಲನ ನಿವಾರಣೆ ಕುರಿತು ಪರಾಮರ್ಶೆ : ಪ್ರೊ. ಎಂ ಗೋವಿಂದ ರಾವ್

ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಗ‌ ಶಿಕ್ಷಕ ಎಚ್.ಪಿ. ನವೀನ್ ಕುಮಾರ್, ವ್ಯವಸ್ಥಾಪಕ ಸಂಜಯ್, ರವೀಂದ್ರ, ಮಹೇಶ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X