ಸಂಜೆ ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಮಸ್ಕಿ ತಾಲ್ಲೂಕಿನ ತಲೇಖಾನ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಿ ಮುದುಕಪ್ಪ (40) ,ಹನುಮಂತಿ ಯಲ್ಲಪ್ಪ (52) ಸಿಡಿಲು ಬಡಿದು ಗಂಭೀರ ಗಾಯಗೊಂಡ ಮಹಿಳೆಯರು ಎಂದು ತಿಳಿದು ಬಂದಿದೆ.
ಮಸ್ಕಿ ತಾಲ್ಲೂಕಿನ ಹಲವಡೆ ಸಂಜೆ ಮಳೆ ಪ್ರಾರಂಭವಾಗಿದೆ.ಹೊಲದಲ್ಲಿ ಕೃಷಿ ಕೂಲಿ ಕೆಲಸ ನಿರ್ವಹಿಸುವಾಗ ಸಿಡಿಲು ಬಡಿದಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹರ್ವಾಪುರದಲ್ಲಿ ಸಿಡಿಲು ಬಡಿದು ರೈತ ಹಾಗೂ ಎತ್ತು ಸಾವು
ಲಿಂಗಸೂಗೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳುಗಳಿಗೆ ಮಸ್ಕಿ ತಾಲ್ಲೂಕು ಶಾಸಕರಾದ ಬಸನಗೌಡ ತುರುವಿಹಾಳ ಹಾಗೂ ತಾಲ್ಲೂಕು ತಹಶೀಲ್ದಾರ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.