ಜಿಲ್ಲೆಯಲ್ಲಿ ಹಿಂದುಳಿದ ಜಾತಿಗಳ ಸಂಘಟನೆ ಸಲುವಾಗಿ ರಾಜ್ಯದ ಹಿಂದುಳಿದ ವರ್ಗಗಳ ಮುಖಂಡರು ಇದೆ ಮೇ-17 ರಂದು ಶನಿವಾರ ಶಿವಮೊಗ್ಗ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಸಂಚಾಲಕರಾದ ಆರ್ ಟಿ ನಟರಾಜ್ ತಿಳಿಸಿದರು.
ಅಂದು ಸಂಜೆ ನಾಲ್ಕು ಗಂಟೆಗೆ ನಗರದ ಆರ್.ಟಿ.ಒ. ರಸ್ತೆಯಲ್ಲಿರುವ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಸಭೆ ಏಪಾ೯ಟಾಗಿದ್ದು ಸ್ಥಳೀಯ ಹಾಗು ಜಿಲ್ಲೆಯ ಹಿಂದುಳಿದ ವಗ೯ಗಳ ನಾಯಕರ ಜೊತೆ ಮಾತುಕತೆ ಜರುಗಲಿದೆ ಎಂದರು.
ಅಬಕಾರಿ ಇಲಾಖೆ, ಆದಾಯ ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ರೈಲ್ವೆ ಇನ್ನಿತರೆ ಇಲಾಖೆಗಳಲ್ಲಿ ಅತ್ಯುನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಹಿಂದುಳಿದ ವರ್ಗಗಳ ಮುಖಂಡರು ಹಿಂದುಳಿದ ಜಾತಿಗಳ ಸಂಘಟನೆಗಾಗಿ ಕೈಗೊಳ್ಳಬಹುದಾದ ಕಾಯ೯ಕ್ರಮಗಳ ಕುರಿತು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಸಭೆ ಸೇರಿದ್ದ ಹಿಂದುಳಿದ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಮೇ-17 ರ ಹಿಂದುಳಿದ ವರ್ಗಗಳ ಮುಖಂಡರ ಸಭೆಯನ್ನು ಯಶಸ್ವಿಯಾಗಿ ನಡೆಸಲು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಚಚಿ೯ಸಿದರು.
ಹಿಂದುಳಿದ ಜನ ಜಾಗೃತಿ ವೇದಿಕೆ ಸಂಚಾಲಕ ಆರ್.ಟಿ. ನಟರಾಜ್ ಸವ೯ರನ್ನು ಸ್ವಾಗತಿಸಿ ವಿಷಯ ಪ್ರಸ್ತಾಪಿಸಿದರು, ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್, ಉಪಾಧ್ಯಕ್ಷರುಗಳಾದ ಪ್ರೊ. ಜಿ. ಪರಮೇಶ್ವರಪ್ಪ, ಪ್ರೊ. ಉಮೇಶ್ ಯಾದವ್, ಪಾಂಡುರಂಗಪ್ಪ, ರಘು ಮಲ್ಲಣ್ಣನವರ್, ಸಂಘಟನಾ ಕಾಯ೯ದಶಿ೯ ಚನ್ನವೀರಪ್ಪ ಗಾಮನಗಟ್ಟಿ, ನರಸಿಂಹ, ಮಹಿಳಾ ಘಟಕದ ಸಂಚಾಲಕಿ ಎಸ್.ವಿ. ರಾಜಮ್ಮ, ಪ್ರಭಾವತಿ, ವರಲಕ್ಷ್ಮಿ ತೀಥ೯ಹಳ್ಳಿ, ವನಜಾಕ್ಷಿ, ಲತಾ ತೀಥ೯ಹಳ್ಳಿ, ರೋಹಿಣಿ, ಲತಾ ಬೊಮ್ಮನಕಟ್ಟೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.