ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿ ಡಾ. ವೀರಣ್ಣ ರಾಜೂರ ನಿನ್ನೆ ಸಂಜೆ ನಾಮಪತ್ರ ಸಲ್ಲಿಸಿದರು.
ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮತ್ತು ಕನ್ನಡ ಭಾಷೆಯ ಉಳಿವಿಗೆ ನಿರಂತರ ಸೇವೆ ಸಲ್ಲಿಸಿರುವ ವಿವ ಸಂಘದ ಚುನಾವಣೆಯು ಇದೇ ಮೇ.25ರಂದು ನಡೆಯಲಿದೆ. ಮುಂದಿನ ಮೂರು ವರ್ಷಗಳಿಗೆ ಪದಾಧಿಕಾರಿಗಳು ಆಯ್ಕೆಯಾಗಲಿದ್ದಾರೆ. ಇದುವರೆಗೂ 45ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂಘವು ನಿರಂತರ ಕನ್ನಡಪರ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿದ್ದು, ಈ ಸಂಘಕ್ಕೆ ರಾಜಕೀಯ ಪಕ್ಷಗಳ ಮುಖಂಡರ ಪ್ರವೇಶದಿಂದ 2025ನೇ ವರ್ಷದ ಚುನಾವಣೆಯ ವಾತಾವಾರಣ ಮತ್ತಷ್ಟು ರಂಗೇರುತ್ತಿದೆ.
ಈ ವೇಳೆ ಡಿ ಎಮ್ ಹಿರೇಮಠ, ಎಸ್ ಎಮ್ ಕುಂದಗೋಳ, ಕೆ ಎಸ್ ಕೋರಿಶೆಟ್ಟರ್, ವಿವಿಧ ಸಾಹಿತಿಗಳು, ಬರಹಗಾರರು, ಕಲಾವಿದರು, ಇನ್ನಿತರರು ಇದ್ದರು.
ಇದನ್ನೂ ಓದಿ: ಧಾರವಾಡ | ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ; 10 ಮಂದಿ ವಿರುದ್ಧ ದೂರು
ಇಂದು ಸಂಜೆ(ಮೇ.14) ನಾಮಪತ್ರ ಪರಿಶೀಲನೆ ನಡೆಯಲಿದ್ದು, 16ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ.17ರಂದು ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಇನ್ನು 25ಕ್ಕೆ ಮತದಾನ ನಡೆದರೆ, 26ರಂದು ಫಲಿತಾಂಶ ಹೊರಬೀಳಲಿದೆ.