ಕರುಣೆ ಮತ್ತು ಮೈತ್ರಿಯಿಂದ ಕೂಡಿದ ಮಾನವೀಯ ಸಮಾಜವನ್ನು ನಿರ‍್ಮಾಣ ಮಾಡುವಲ್ಲಿ ಸಾಮಾಜಿಕ ಸಂಘಟನೆಗಳ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಪತ್ರಕರ್ತ, ಲೇಖಕ ಎನ್.ರವಿಕುಮಾರ್ (ಟೆಲೆಕ್ಸ್) ಹೇಳಿದರು.
ಕೋಣಂದೂರಿನಲ್ಲಿ ಸಿನಿಯರ್ ಚೇಂಬರ್ ಆಫ್ ಇಂಟರ್ ನ್ಯಾಷನಲ್ (ಎಸ್.ಸಿ.ಐ)ಘಟಕದ ನೂತನ ಪದಾಧಿಕಾರಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯಭಾಷಣ ಮಾಡಿದ ಎನ್.ರವಿಕುಮಾರ್ ಅವರು ಸಮಾಜದಲ್ಲಿ ಎಲ್ಲಾ ಜೀವಿಗಳೊಂದಿಗೆ ಕರುಣೆ ಮತ್ತು ಮೈತ್ರಿಯಿಂದ ಬದುಕಿದಾಗ ಮನುಷ್ಯ ಮತ್ತು ಮತ್ತು ಮನುಷ್ಯತ್ವ ಎಂಬುದಕ್ಕೆ ಅರ್ಥ ಬರುತ್ತದೆ.
ಸದ್ವಿಚಾರ ಸನ್ನಡತೆ, ಸತ್ಕಾರ್ಯಗಳಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ವಿಚಾರ ಇದ್ದ ಮಾತ್ರಕ್ಕೆ ಮನುಷ್ಯ ಪರಿಪೂರ್ಣನಾಗಲಾರ ಅದನ್ನು ತಮ್ಮ ಬದುಕಿನಲ್ಲಿ ಆಚರಣೆ ಗೆ ಅಳವಡಿಸಿಕೊಂಡಾಗ ಮತ್ತು ಪ್ರಚಾರದ ಮೂಲಕ ಎಲ್ಲರಿಗೂ ದಾಟಿಸಿದಾಗ ಸಾರ್ಥಕವಾಗುತ್ತದೆ ಎಂದರು.
ಮನುಷ್ಯ ಮೂಲತಃ ಸಂಘಜೀವಿ. ಆತ ದ್ವೀಪದಂತೆ ಬದುಕಲು ಸಾಧ್ಯವಿಲ್ಲ. ಮನುಷ್ಯರ ಸೃಷ್ಟಿ ದೇವರಿಂದಾಗಿದೆ ಎಂಬ ನಂಬಿಕೆಯಲ್ಲಿರುವ ನಾವುಗಳು ದೇವರ ಮಕ್ಕಳೇ ಆಗಿರುತ್ತೇವೆ. ದೇವರು ಎಂದರೆ ಒಳ್ಳೆಯದು ಎಂದರ್ಥವಷ್ಟೆ.
ಸ್ವಾರ್ಥ , ಅಸೂಯೆಗಳನ್ನು ತೊರೆದು, ಕಷ್ಟದಲ್ಲಿರುವವರಿಗೆ ಎಲ್ಲರಿಗೂ ಒಳಿತು ಬಯಸಬೇಕು. ಸಮಾಜವನ್ನು ಕಟ್ಟುವ , ಜನರ ಒಳಿತನ್ನು ಮಾಡುವ ಕೆಲಸ ಕೇವಲ ಸರ್ಕಾರಗಳದ್ದು ಮಾತ್ರ ಎಂದು ಭಾವಿಸದೆ.
ತಮ್ಮ ಹೊಣೆಗಾರಿಕೆಯನ್ನು ತೋರುವುದು ಪ್ರತಿಯೊಬ್ಬರ ಕರ್ತವ್ಯ. ದೇಶವೆಂದರೆ ಕೇವಲ ಕಲ್ಲು ಮಣ್ಣಲ್ಲ, ಅಲ್ಲಿರುವ ಜನರೇ ಅಗಿರುತ್ತಾರೆ. ಈ ಕಾರಣಕ್ಕಾಗಿಯೇ ಸಂವಿಧಾನದ ಪ್ರಸ್ತಾವನೆಯಲ್ಲಿ ’ಭಾರತದ ಪ್ರಜೆಗಳಾದ ನಾವು.. ಎಂಬ ಘೋಷಣೆಯೊಂದಿಗೆ ಜನರ ಅಸ್ತಿತ್ವ ಮತ್ತು ಜವಾಬ್ದಾರಿಯನ್ನು ಎತ್ತಿ ಹಿಡಿಯಲಾಗಿದೆ ಎಂದರು.
ದೇಶವನ್ನು ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಕರೆ ನೀಡಿದ ರವಿಕುಮಾರ್ ಇಂತಹ ಜವಾಬ್ದಾರಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಎಸ್ ಸಿ ಐ ನಂತಹ ಸಂಘಟನೆಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಎಸ್ ಸಿ ಐ ನ ನೂತನ ಅಧ್ಯಕ್ಷರಾಗಿ ಕೆ. ಎಂ ಲಕ್ಷ್ಮಣ್ ಅಧಿಕಾರ ಸ್ವೀಕರಿಸಿದರು. ನೂತನ ಪದಾಧಿಕಾಗಳು, ಸದಸ್ಯರುಗಳೀಗೆ ಎಸ್ ಸಿಎ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ಸುರೇಖಾ ಮುರಳೀಧರ್ ಪ್ರತಿಜ್ಞಾ ವಿಧಿ ಭೋದಿಸಿದರು. ಎಸ್ ಸಿ.ಐ ರಾಷ್ಟ್ರೀಯ ಅಧ್ಯಕ್ಷರಾದ ಜಯೇಶ್, ಜಗದೀಶ್ , ನಿರ್ಗಮಿತ ಅಧ್ಯಕ್ಷ ಡಿ.ಪಿ ವಿಶ್ವನಾಥ್, ಸೂರ್ಯನಾರಾಯಣ,ಪ್ರಕಾಶ್, ಕಾರ್ಯದರ್ಶಿಮುರುಘರಾಜ್, ಮತ್ತಿತರರು ಕಾರ್ಯಕ್ರಮದಲ್ಲಿದ್ದರು.