ಹಾಸನ ಜಿಲ್ಲೆಯ ವಿವಿಧಡೆ ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಸೇರಿದಂತೆ ಕೆಲವೆಡೆ ಭಾರಿ ಮಳೆಯಾಗಿದೆ. ಹಾಸನ ನಗರದಲ್ಲೂ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಬಿರುಗಾಳಿ ಸಹಿತ ಬುಧವಾರ ಮಳೆಯಾಗಿದೆ.
ಹಾಸನ ನಗರದಲ್ಲಿ ಗಾಳಿ ಸಹಿತ ಮಳೆ ಸುರಿದ ಕಾರಣ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಬಿದ್ದ ಹಿನ್ನೆಲೆಯಲ್ಲಿ, ಕೆಲವು ಬಡಾವಣೆಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಮಸ್ಯೆ ಆಗಿತ್ತು. ಹಾಗೆಯೇ, ಅರಕಲಗೂಡು ತಾಲ್ಲೂಕಿನ ವ್ಯಾಪ್ತಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಬಂದ ಕಾರಣ,
ಇದನ್ನೂ ಓದಿದ್ದೀರಾ?ಹಾಸನ l ಪ್ರೇಮ ವಿವಾಹಕ್ಕೆ ಪೋಷಕರ ನಿರಾಕರಣೆ: ಮಗಳನ್ನು ಕರೆದೊಯ್ಯುವಾಗ ಕಾರಿನಲ್ಲಿ ಜೋತಾಡಿದ ತಂದೆ
ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕಾಫಿ ಬೆಳೆಗಾರರಿಗೆ ಸಂತಸ ತಂದಿದೆ. ಕೆಲವು ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ ತಂಪಿನ ಅನುಭವವಾದಾರೆ, ವಾರದಿಂದ ಜಿಲ್ಲೆಯ ಹಲವು ತಾಲ್ಲೂಕಿನಲ್ಲಿ ಉತ್ತಮ ಮಳೆಯ ಕಾರಣ ಕೃಷಿ ಚಟುವಟಿಕೆಗೆ ಪೂರಕ ವಾತಾವರಣವಾಗಿದೆ.