ಕರ್ನಲ್‌ ಸೋಫಿಯಾ ಕುರೇಷಿ ವಿರುದ್ಧ ಅಪಮಾನಕಾರಿ ಹೇಳಿಕೆ; ಬಿಜೆಪಿ ಸಚಿವ ವಿಜಯ್‌ ಶಾ ಗಡಿಪಾರಿಗೆ ಆಗ್ರಹ

Date:

Advertisements

ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನವನ್ನ ದಿಟ್ಟತನದಿಂದ ಎದುರಿಸಿದ ಆಪರೇಷನ್ ಸಿಂಧೂರ ತಂಡದ ಕರ್ನಲ್ ಸೋಫಿಯಾ ಕುರೇಷಿ ಅವರ ದಿಟ್ಟತನದ ಹೋರಾಟವನ್ನು ಅಪಮಾನಗೊಳಿಸಿರುವ ಹಾಗೂ ದೇಶದ ವೀರ ಸೈನಿಕರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾನನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೆಪಿಸಿಸಿ ಪ್ರತಿಭಟನೆ ನಡೆಸಿತು.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಾಂಗ್ರೆಸ್ ಭವನ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡು, ವಿಜಯ್‌ ಶಾ ಅವರ ಪ್ರತಿಕೃತಿ ದಹನ ನಡೆಸಲಾಯಿತು. ದೇಶದ್ರೋಹಿ ಪಾಕಿಸ್ತಾನದ ಏಜೆಂಟ್ ವಿಜಯ್ ಶಾ ನನ್ನ ಕೂಡಲೇ ಗಲ್ಲಿಗೆ ಹಾಕಬೇಕೆಂದು ಆಗ್ರಹಿಸಿ ಘೋಷಣೆ ಕೂಗಲಾಯಿತು.

“ಬಿಜೆಪಿಯ ರಣ ಹೇಡಿಗಳು ಮಹಿಳೆಯರನ್ನ ಅಪಮಾನಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಘೋಷಿಸಿ, ಶತ್ರು ರಾಷ್ಟ್ರವನ್ನು ಸದೆಬಡಿದ ದಿಟ್ಟ ಮಹಿಳೆ ಕರ್ನಲ್ ಸೋಫಿಯಾ ಕುರೇಷಿ ಅವರನ್ನ ಇಂದು ಅಪಮಾನಿಸಿರುವುದು ದೇಶದ ನಾಗರಿಕ ಸಮಾಜವನ್ನು ಅಪಮಾನಗೊಳಿಸಿದಂತಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಮುಂದಾಗಿದ್ದ ಸೋಫಿಯಾ ರವರ ದಿಟ್ಟತನವನ್ನು ಇಡೀ ವಿಶ್ವವೇ ಮೆಚ್ಚಿದೆ ಆದರೂ ಕಿಡಿಗೇಡಿ ಬಿಜೆಪಿ ನಾಯಕರು ತಮ್ಮ ಹಿಂದಿನ ಕೋಮು ಭಾವನೆಯನ್ನ ಈ ಮೂಲಕ ಪ್ರಚಾರ ಪಡಿಸಿಕೊಳ್ಳಲು ಅವರನ್ನು ಅಪಮಾನಗೊಳಿಸಿರುವುದು ದೇಶದ ಮಹಿಳೆಯರನ್ನು ಅಪಮಾನಿಸಿದಂತಾಗಿದೆ” ಎಂದು ಕೆಪಿಸಿಸಿ ಮುಖಂಡರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Advertisements
WhatsApp Image 2025 05 15 at 3.59.09 PM 1

“ಪಾಕಿಸ್ತಾನವನ್ನು ಇಬ್ಭಾಗ ಮಾಡಿದ ದಿಟ್ಟ ನಾಯಕಿ ಇಂದಿರಾ ಗಾಂಧಿಜಿ ರವರನ್ನು ಇಡೀ ದೇಶವೇ ಇಂದು ನೆನೆಯುತ್ತಿದೆ. ಅದರಂತೆ ಕರ್ನಲ್ ಸೋಫಿಯಾ ಕುರೇಷಿ ರವರ ಪರಾಕ್ರಮವನ್ನು ಜನ ಮೆಚ್ಚುತ್ತಿರುವುದನ್ನು ಸಹಿಸದ ಬಿಜೆಪಿಗರು ಇಂದು ಇಂತಹ ದೇಶದ್ರೋಹಿ ಹೇಳಿಕೆಗಳನ್ನು ನೀಡಿ ಭಾರತೀಯ ಸೇನೆಯನ್ನೇ ಅಪಮಾನ ಗೊಳಿಸುತ್ತಿದ್ದಾರೆ. ಕೂಡಲೇ ಇಂತಹ ಹೇಳಿಕೆ ನೀಡಿರುವ ದೇಶದ್ರೋಹಿ ವಿಜಯ್ ಶಾ ನನ್ನು ಗಡಿಪಾರು ಮಾಡಬೇಕು ಮತ್ತು ಅವನನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದೆ ಹೋದರೆ ದೇಶದ್ರೋಹಿಗಳಿಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರು ನೇರ ಬೆಂಬಲ ನೀಡುತ್ತಿದ್ದಾರೆ ಎಂಬುವ ಹೊಣೆಯನ್ನು ಹೊರಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಸಚಿವ ವಿಜಯ್ ಶಾ ನನ್ನ ಕೂಡಲೇ ದೇಶದಿಂದ ಗಡಿಪಾರು ಮಾಡಬೇಕು. ದೇಶದ ಸೈನಿಕರಲ್ಲಿ ಹಾಗೂ ನಾಗರಿಕರಲ್ಲಿ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೋರಬೇಕೆಂದು ಈ ಪ್ರತಿಭಟನೆ ಮೂಲಕ ಆಗ್ರಪಡಿಸಲಾಯಿತು.

ಪ್ರತಿಭಟನೆಯಲ್ಲಿ ಎಂಇಐ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಮುಖಂಡರಾದ ಎಂ ಎ ಸಲೀಂ, ಎ.ಆನಂದ್, ಪ್ರಕಾಶ್, ಉಮೇಶ್, ಕೆ.ಟಿ ನವೀನ್, ಸುಂಕದಕಟ್ಟೆ ನವೀನ್, ಓಬಳೇಶ್, ನವೀನ್ ಸಾಯಿ, ಪುಟ್ಟರಾಜು, ಕುಶಾಲ್ ಹರುವೇಗೌಡ, ಪ್ರವೀಣ್, ಸಂಜಯ್ ಸಶಿಮಠ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X