ಚಿತ್ರದುರ್ಗ | ಸಾಲಬಾಧೆ, ಬೆಳೆ ಕೈಕೊಟ್ಟದ್ದರಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ

Date:

Advertisements

ಸಾಲ ತೀರಿಸಲಾಗದೆ ಸಾಲಬಾಧೆಯ ಆತಂಕದಿಂದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಡೇಕುಂಟೆ ಗ್ರಾಮದಲ್ಲಿ ವರದಿಯಾಗಿದೆ.‌

ಚಳ್ಳಕೆರೆ ತಾಲೂಕಿನ ಜಡೆಕುಂಟೆ ಗ್ರಾಮದ ರೈತ ಮಹಾಲಿಂಗಪ್ಪ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತನಾಗಿದ್ದು ವ್ಯವಸಾಯ ಮತ್ತು ಬೆಳೆಗಾಗಿ ಸಾಲ ಮಾಡಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅತಿ ಹೆಚ್ಚು ಸಾಲದಿಂದ ಆತಂಕಗೊಂಡ ರೈತನಿಗೆ ಸಮರ್ಪಕವಾಗಿ ಬೆಳೆ ಬಾರದೆ, ಫಸಲು ಕೂಡ ಕೈಕೊಟ್ಟಿತ್ತು. ಇದರಿಂದ ಇತ್ತೀಚೆಗೆ ರೈತ ಮಹಾಲಿಂಗಪ್ಪ ಚಿಂತಿತನಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ವ್ಯವಸಾಯಕ್ಕಾಗಿ ಕೈಸಾಲ, ಬ್ಯಾಂಕ್ ಸಾಲವನ್ನು ಮಾಡಿಕೊಂಡಿದ್ದು ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಸಾಲದ ಕಾಟದಿಂದ ಜಿಗುಪ್ಸೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.‌ ಸ್ಥಳಕ್ಕೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗ್ರಾಮ ಪಂಚಾಯಿತಿ ಅಕ್ರಮಗಳ ತನಿಖೆ, ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಆಗ್ರಹ.

ಆತ್ಮಹತ್ಯೆ ಪರಿಹಾರವಲ್ಲ
IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನರೇಗಾ ಕೆಲಸ, ಕೂಲಿ ವಿಳಂಬ ವಿರೋಧಿಸಿ ಗ್ರಾಕೂಸ್ ಕಾರ್ಯಕರ್ತರ ಪತ್ರ ಚಳವಳಿ

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಸಿದ್ಧೇಶ್ವರನ ದುರ್ಗಾ ಗ್ರಾಮ ಪಂಚಾಯಿತಿಯಲ್ಲಿ ನರೇಗಾ-ಉದ್ಯೋಗ...

ಚಿತ್ರದುರ್ಗ | ಇತಿಹಾಸದಲ್ಲಿ ಮೊದಲ ಬಾರಿಗೆ ಚಳ್ಳಕೆರೆಯಲ್ಲಿ ಯೂರಿಯಾ ಕೊರತೆ; ರೈತರ ಆತಂಕ

ಚಳ್ಳಕೆರೆಯಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಡುವ ಸ್ಥಿತಿ ಎದುರಾಗಿದ್ದು, ಇತಿಹಾಸದಲ್ಲಿ...

Download Eedina App Android / iOS

X