ಚಿಕ್ಕಮಗಳೂರು : ವಾಮಾಚಾರ ನಡೆಸಿದ್ದಾನೆಂದು ಹಳೇ ದ್ವೇಷದಿಂದ ವ್ಯಕ್ತಿಯೊಬ್ಬರನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ ಜಿ ಕಟ್ಟೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ನಕರಾ (60), ಹತ್ಯೆಯಾದ ವ್ಯಕ್ತಿ. ಹತ್ಯೆ ಮಾಡಿದ್ದ ರವಿ ಎಂಬಾತ ಆರೋಪಿಯನ್ನು ಕೆಲ ಗಂಟೆಗಳಲ್ಲೇ ಹರಿಹರಪುರ ಪೊಲೀಸರು ಬಂಧಿಸಿದ್ದಾರೆ. ಒಂದು ವರ್ಷದ ಹಿಂದೆ ರವಿ ತಾಯಿ ವಾಮಾಚಾರಕ್ಕೆ ಬಲಿಯಾಗಿದ್ದರಂತೆ. ಈ ವಾಮಾಚಾರವನ್ನು ಹತ್ಯೆಯಾದ ನಕರಾ ಮಾಡಿದ್ದನೆಂದು ಹಳೇ ದ್ವೇಷದ ಪರಿಣಾಮವಾಗಿ ರಾಡ್‌ನಿಂದ ಬಲವಾಗಿ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಸಧ್ಯದ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಮರ ಕಡಿತ: ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಆಗ್ರಹ
ಈ ಘಟನೆ ಕುರಿತು ಹರಿಹರಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೊಪ್ಪ ತಾಲೂಕಿನ ಡಿವೈಎಸ್ಪಿ ಬಾಲಾಜಿ ಸಿಂಗ್, ವೃತ್ತ ನಿರೀಕ್ಷಕ ಮಂಜು ಜೈನ್, ಹರಿಹರಪುರ ಪೊಲೀಸ್ ಠಾಣೆಯ ಉಪನಿರಿಕ್ಷಕ ಶ್ರೀಧರ್ ನಾಯಕ್ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.