ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲಿಮರು ಮತ್ತು ಧರ್ಮೀಯರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಮಂಗಳೂರಿನ ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ಸರ್ವರನ್ನೂ ಸಮಾನವಾಗಿ ಕಾಣುತ್ತದೆ ಎಂದರು.
ಇದನ್ನು ಓದಿದ್ದೀರಾ? ಮಂಗಳೂರು | ಅಭಿವೃದ್ಧಿಯಲ್ಲಿ ರಾಜಕೀಯ ಬೇಡ: ವೇದಿಕೆಯಲ್ಲೇ ಬಿಜೆಪಿ ಶಾಸಕ ಕಾಮತ್‌ಗೆ ಪಾಠ ಮಾಡಿದ ಸಿಎಂ!
ದೇಶದಲ್ಲಿ ಅನೇಕ ಸೂಫಿ, ಸಾಧು, ಸಂತರು, ಸಾಮಾಜಿಕ ಹರಿಕಾರರು ಬಂದು ಹೋಗಿದ್ದಾರೆ. ಇವರೆಲ್ಲರೂ ಮನುಷ್ಯ ಧರ್ಮವನ್ನು ಪ್ರತಿಪಾದಿಸಿದವರು. ಆದ್ದರಿಂದ ನಾವು ಮಾನವೀಯ ನೆಲೆಯಲ್ಲಿ ಸಮಾಜವನ್ನು ಬೆಸೆಯಬೇಕು ಎಂದು ಹೇಳಿದರು.
ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲಿಂಮರು ಮತ್ತು ಅನ್ಯ ಧರ್ಮೀಯರು. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ಈ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ.
— Siddaramaiah (@siddaramaiah) May 16, 2025
ದೇಶದಲ್ಲಿ ಅನೇಕ ಸೂಫಿ, ಸಾಧು, ಸಂತರು, ಸಾಮಾಜಿಕ ಹರಿಕಾರರು ಬಂದು ಹೋಗಿದ್ದಾರೆ. ಇವರೆಲ್ಲರೂ ಮನುಷ್ಯ ಧರ್ಮವನ್ನು ಪ್ರತಿಪಾದಿಸಿದವರು. ಆದ್ದರಿಂದ ನಾವು ಮಾನವೀಯ… pic.twitter.com/484Xewfmtw
ಉಳ್ಳಾಲ ದರ್ಗಾಕ್ಕೆ ಜಾತಿ, ಧರ್ಮದ ಮಿತಿ ಇಲ್ಲ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ದರ್ಗಾ. ನಮ್ಮ ಸರ್ಕಾರದ ಕಾರ್ಯಕ್ರಮಗಳೂ ಸರ್ವ ಧರ್ಮ, ಸರ್ವ ಜಾತಿಯವರಿಗೆ ಸಲ್ಲುವಂಥವು ಎಂದರು.
