ಕಿಡಿಗೇಡಿಗಳು ಕುರ್‌ಆನ್ ಗ್ರಂಥವನ್ನು ಸುಟ್ಟು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸಂತಿಬಸ್ತವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಘಟನೆಯನ್ನು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ತೀವ್ರವಾಗಿ ಖಂಡಿಸಿದ್ದು, ಶಾಂತಿ ಮತ್ತು ಏಕತೆ ಕಾಪಾಡುವಂತೆ ಕರೆ ನೀಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಬೆಳಗಾವಿ ಶಾಖೆಯ ಮುಖಂಡರು, “ಪವಿತ್ರ ಕುರ್‌ಆನ್ ಅನ್ನು ಉದ್ದೇಶಪೂರ್ವಕವಾಗಿ ಸುಟ್ಟು ಅವಮಾನಿಸಿರುವುದು ಹೀನ ಕೃತ್ಯ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ವಿಶ್ವದಾದ್ಯಂತ ಶಾಂತಿ, ಮಾನವೀಯತೆ ಮತ್ತು ಸಮಾನತೆಯಂತಹ ಅಮೂಲ್ಯ ಸಂದೇಶಗಳನ್ನು ನೀಡುವ ಪವಿತ್ರ ಗ್ರಂಥದ ಅವಮಾನ ನಿಜಕ್ಕೂ ವಿಷಾದಕರ ಸಂಗತಿ.
ಈ ಘಟನೆ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ದುಃಖವನ್ನುಂಟು ಮಾಡಿದ್ದು, ನಮ್ಮ ಸಮಾಜದ ಶಾಂತಿ, ಸೌಹರ‍್ದತೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳಿಗೆ ದೊಡ್ಡ ಆತಂಕವನ್ನುಂಟು ಮಾಡುತ್ತದೆ. ಇಂತಹ ದುಷ್ಕೃತ್ಯಗಳು ಸಮಾಜದಲ್ಲಿ ದ್ವೇಷ ಮತ್ತು ಭೀತಿಯ ವಾತಾವರಣ ಹುಟ್ಟಿಸುವ ಹಿನ್ನೆಲೆಯಲ್ಲಿ, ನಾವು ಎಲ್ಲರೂ ಎಚ್ಚರಿಕೆಯಿಂದ, ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇಂತಹ ಕೃತ್ಯಗಳು ಭಾವನಾತ್ಮಕವಾಗಿ ಎಲ್ಲರನ್ನೂ ಕದಡುತ್ತವೆ. ಆದರೆ ನಾವು ಶಾಂತಿಯುತ ಮತ್ತು ಕಾನೂನುಬದ್ಧ ಹಾದಿಯಲ್ಲಿಯೇ ನ್ಯಾಯಕ್ಕಾಗಿ ಹೋರಾಡಬೇಕು. ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲ. ನಾವು ಈ ಕುರಿತಾಗಿ ಈಗಾಗಲೇ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಮಾಹಿತಿ ನೀಡಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಕುರ್‌ಆನ್ ಸುಟ್ಟು ಧಾರ್ಮಿಕ ಭಾವನೆಗೆ ಧಕ್ಕೆ; ಮುಸ್ಲಿಮರ ಪ್ರತಿಭಟನೆ – ಇನ್ಸ್‌ಪೆಕ್ಟರ್ ಅಮಾನತು
ಧೈರ್ಯ, ಸಹನೆ ಮತ್ತು ಏಕತೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ, ಶಾಂತಿಯುತವಾಗಿ ಪ್ರತಿಕ್ರಿಯಿಸುವಂತೆ ಕರೆ ನೀಡಿರುವ ಸೋಲಿಡಾರಿಟಿ ಬೆಳಗಾವಿ ಘಟಕವು, ಈಗಿನ ಪರಿಸ್ಥಿತಿಯಲ್ಲಿ ಶಿಸ್ತು, ಸಹಿಷ್ಣುತೆ ಮತ್ತು ಸಮಾನತೆಯ ನಡವಳಿಕೆಗಳೇ ಸಮಾಜದ ನಿಜವಾದ ಶಕ್ತಿ ಹಾಗೂ ಬದಲಾವಣೆಯ ಶ್ರೇಷ್ಠ ಮಾರ್ಗವಾಗಿದೆ. ಸಹಿಷ್ಣುತೆ ಮತ್ತು ಸಮಾನತೆಯ ನಡವಳಿಕೆಗಳೇ ಸಮಾಜದ ನಿಜವಾದ ಶಕ್ತಿ ಹಾಗೂ ಬದಲಾವಣೆಯ ಶ್ರೇಷ್ಠ ಮಾರ್ಗವಾಗಿದೆ ಎಂದು ತಿಳಿಸಿದೆ.