ನವದೆಹಲಿ | ಪಹಲ್ಗಾಮ್ ನಂತರ ದೇಶದಲ್ಲಿ ಜರುಗಿವೆ 184 ಮುಸ್ಲಿಮ್ ದ್ವೇಷದ ಘಟನೆಗಳು

Date:

Advertisements

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಏಪ್ರಿಲ್ 11 ರಿಂದ ಮೇ 8 ರವರೆಗೆ ದೇಶದಲ್ಲಿ ಒಟ್ಟು 184 ಮುಸ್ಲಿಮ್ ದ್ವೇಷ ಘಟನೆಗಳು ನಡೆದಿವೆ. ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ವರದಿಯು ಈ ನಂಜಿನ ಅಂಶವನ್ನು ಹೊರಹಾಕಿದೆ.

ಈ ಘಟನೆಗಳ ಪೈಕಿ ಕನಿಷ್ಠ 106ರಲ್ಲಿ ಪಹಲಗಾಮ್ ದಾಳಿಯು ಪ್ರಚೋದನಕಾರಿಯಾಗಿ ಪರಿಣಮಿಸಿದೆ. ಈ ಘಟನೆಗಳಲ್ಲಿ 316 ಜನರು ದೈಹಿಕವಾಗಿ- ಮಾನಸಿಕವಾಗಿ ಬಾಧಿತರಾಗಿದ್ದಾರೆ.

ಒಗ್ಗಟ್ಟು ಮತ್ತು ಸಾಮರಸ್ಯದ ಅಗತ್ಯವಿರುವ ಸಮಯದಲ್ಲಿ, ದೇಶವು ತೀವ್ರ ಕೋಮುವಾದಿ ಧ್ರುವೀಕರಣಕ್ಕೆ ಸಾಕ್ಷಿಯಾಗಿದೆ.

Advertisements

ಈ ದ್ವೇಷದ ಘಟನೆಗಳು ಉತ್ತರ ಪ್ರದೇಶದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ (43) ವರದಿಯಾಗಿವೆ. ಮಹಾರಾಷ್ಟ್ರ, ಉತ್ತರಾಖಂಡ್, ಮತ್ತು ಮಧ್ಯಪ್ರದೇಶಲ್ಲೂ ಈ ದ್ವೇಷದ ನಂಜು ಹರಿದಿದೆ.

ಉತ್ತರ ಪ್ರದೇಶದ ಅಲಿಘರ್‌ನಲ್ಲಿ, 15 ವರ್ಷದ ಮುಸ್ಲಿಂ ಬಾಲಕನ ಮೇಲೆ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಗುಂಪೊಂದು ದಾಳಿ ಮಾಡಿದೆ. ಪಾಕಿಸ್ತಾನದ ಧ್ವಜದ ಮೇಲೆ ಮೂತ್ರ ವಿಸರ್ಜನೆ ಮಾಡುವಂತೆ ಅವನನ್ನು ಒತ್ತಾಯಿಸಲಾಗಿದೆ.

ಭೋಪಾಲ್‌ನಲ್ಲಿ, ರೈಲ್ವೆ ಹೆಡ್ ಕಾನ್ಸ್ಟೇಬಲ್ ನಜರ್ ದೌಲತ್ ಖಾನ್ ಅವರನ್ನು ಕುಡಿದ ಯುವಕರ ಗುಂಪೊಂದು ಏಪ್ರಿಲ್ 26 ರಂದು ಕ್ರೂರವಾಗಿ ಥಳಿಸಿದೆ. ಖಾನ್ ಅವರು ರಾತ್ರಿ 2 ಗಂಟೆ ಸುಮಾರಿಗೆ ಗಸ್ತು ತಿರುಗುತ್ತಿದ್ದಾಗ, ರೈಲ್ವೆ ನಿಲ್ದಾಣದ ಒಳಗೆ ಪಾರ್ಕ್ ಮಾಡಿದ ಕಾರಿನಲ್ಲಿ ಕುಡಿಯುತ್ತಿದ್ದ ಯುವಕರ ಗುಂಪನ್ನು ಗಮನಿಸಿದ್ದಾರೆ. ಖಾನ್ ಆಕ್ಷೇಪಿಸಿದಾಗ, ಪರಿಸ್ಥಿತಿ ಹಿಂಸೆಗೆ ತಿರುಗುತ್ತದೆ. ಖಾನ್‌ರ ಮುಸ್ಲಿಂ ಹೆಸರನ್ನು ಗಮನಿಸಿದ ದಾಳಿಕೋರರು, ಅವರ ಧಾರ್ಮಿಕ ಗುರುತನ್ನು ಗುರಿಯಾಗಿಸಿ ನಿಂದಿಸಿದ್ದಾರೆ. ನಂತರ ದೈಹಿಕ ದಾಳಿ ನಡೆಸಿ, ಗುದ್ದಾಡಿ, ಅವರ ಸಮವಸ್ತ್ರವನ್ನು ಹರಿದಿದ್ದಾರೆ.

ಚಂಡೀಗಢ, ಉತ್ತರಾಖಂಡ್, ಹಾಗೂ ಹಿಮಾಚಲ ಪ್ರದೇಶದ ಹಾಸ್ಟೆಲ್‌ಗಳಲ್ಲಿ ಹಲವಾರು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ  ಹಲ್ಲೆ ನಡೆಸಲಾಗಿದೆ. ಡೆಹರಾಡೂನ್‌ನಲ್ಲಿ, ಹಿಂದೂ ರಕ್ಷಾ ದಳ ಮತ್ತು ಇತರ ಬಲಪಂಥೀಯ ಗುಂಪುಗಳು ಹಲವಾರು ಕಾಲೇಜುಗಳಿಗೆ ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸುವಂತೆ ಬೆದರಿಕೆ ಪತ್ರಗಳನ್ನು ಬರೆದಿವೆ.

ಕಾಶ್ಮೀರಿ ಮುಸ್ಲಿಂ ವ್ಯಾಪಾರಿಗಳ ಮೇಲೆ ದಾಳಿ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಬಜರಂಗದಳದ ಕಾರ್ಯಕರ್ತರು ಮಸ್ಸೂರಿಯಲ್ಲಿ, ಇಬ್ಬರು ಕಾಶ್ಮೀರಿ ಶಾಲು ವ್ಯಾಪಾರಿಗಳನ್ನು ಬೆದರಿಸಿದ್ದಾರೆ. 12 ಲಕ್ಷ ರುಪಾಯಿಯ ಸರಕನ್ನು ತೊರೆದು ತೆರಳುವಂತೆ ಬೆದರಿಕೆ ಹಾಕಲಾಗಿದೆ.

ಮುಸ್ಲಿಮರಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಗುರಿಯಾಗಿಸಿ ಹಲವು ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ಇವುಗಳಲ್ಲಿ ಮದರಸಗಳು, ಮುಸ್ಲಿಂ ಒಡೆತನದ ಅಂಗಡಿಗಳು, ತಳ್ಳು ಬಂಡಿಗಳು, ಮತ್ತು ಸ್ಟಾಲ್‌ಗಳನ್ನು ಧ್ವಂಸಗೊಳಿಸಲಾಗಿದೆ. ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ ಬಾಲಮುಕುಂದ್ ಆಚಾರ್ಯ ಮುಂದಾಳುತನದಲ್ಲಿ ಮಸೀದಿಯೊಂದನ್ನು ಧ್ವಂಸಗೊಳಿಸಲಾಗಿದೆ. ಉತ್ತರಾಖಂಡ್‌ನಲ್ಲಿ ಮತ್ತೊಂದು ಮಸೀದಿಯ ಮೇಲೆ ಹಿಂದುತ್ವ ಗುಂಪುಗಳು ಕಲ್ಲೆಸೆದಿವೆ.

ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾಶ್ಮೀರದಲ್ಲಿ, ಶಂಕಿತ ಉಗ್ರರ ಮನೆಗಳನ್ನು  ನೆಲಸಮಗೊಳಿಸಲಾಗಿದೆ ಎಂದು ಎಪಿಸಿಆರ್ ವರದಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X