ಭಾರತ ಮತ್ತು ಪಾಕಿಸ್ತಾನ ನಡುವೆ ಮೇ 12ರಿಂದ ಕದನ ವಿರಾಮ ಜಾರಿಯಲ್ಲಿದೆ. ಕದನ ವಿರಾಮವು ಮುಂದುವರೆಯಲಿದೆ. ಕದನ ವಿರಾಮಕ್ಕೆ ಯಾವುದೇ ‘ಎಕ್ಸ್‌ಪೈರಿ ಡೇಟ್’ ಇಲ್ಲ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ಕದನ ವಿರಾಮವು ತಾತ್ಕಾಲಿಕವಾಗಿತ್ತು. ಮೇ 18ರಂದು ಅದು ಕೊನೆಗೊಳ್ಳುತ್ತದೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸೇನೆಯ ಅಧಿಕಾರಿಗಳು, “ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಸಂಬಂಧಿತ ಡಿಜಿಎಂಒಗಳ (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ಚರ್ಚೆಯಲ್ಲಿ ನಿರ್ಧರಿಸಿದಂತೆ ಕದನ ವಿರಾಮವು ಶಾಶ್ವತವಾಗಿ ಮುಂದುವರೆಯಲಿದೆ. ದರಕ್ಕೆ, ಯಾವುದೇ ಮುಕ್ತಾಯ ದಿನಾಂಕ (ಎಕ್ಸ್‌ಪೈರಿ ಡೇಟ್) ಇಲ್ಲ” ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಮತ್ತೆ ಯಾವುದೇ ಮಾತುಕತೆ ನಿಗದಿಯಾಗಿಲ್ಲ. ಕದನ ವಿರಾಮವು ತಾತ್ಕಾಲಿಕವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.